Sunday, September 8, 2024

Latest Posts

Super sisters: ಸಮಯಪ್ರಜ್ಞೆಯಿಂದ ತಮ್ಮನ ಪ್ರಾಣ ಉಳಿಸಿದ ಸಹೋದರಿಯರು..!

- Advertisement -

ದಾವಣಗೆರೆ: ಜಿಲ್ಲೆಯ ಜಗಳೂರು ನಗರದಲ್ಲಿ  ಕುತ್ತಿಗೆಗೆ ಸಿಕ್ಕಿ  ಹಾಕಿಕೊಂಡು ಸಾವು ಬದುಕಿನ ಮದ್ಯೆ ಹೋರಾಡುತ್ತಿರುವ ತಮ್ಮನ ಪ್ರಾಣ  ವಿಚಿತ್ರವೆಂಬಂತೆ ಅವನ ಸಹೋದರಿಯರು ಉಳಿಸಿದ್ದಾರೆ ಇವರ ಕೆಲಸಕ್ಕೆ  ವೈದ್ಯರಿಂದಲೇ ಶಭಾಶ್ ಎನ್ನುವ ಗೌರವ ಸಿಕ್ಕಿದೆ.

ಜಗಳೂರು ನಗರದ ಜೆಎಂ ಇಮಾಂ ಸ್ಮಾರಕ  ಕಿರಿಯ ಪ್ರಾಥಮಿಕ ಶಾಲೆಯ 4 ನೇ ತರಗತಿ ವ್ಯಾಸಂಗ ಮಾಡುತ್ತಿರುವ  ವಿದ್ಯಾರ್ಥಿಯಾದ ವಂಶಿಕೃಷ್ಣ.ಟಿ ಎನ್ನುವ ಬಾಲಕ  ಶಾಲೆಗೆ ರಜೆ ಇರುವ ಕಾರಣ ಮನೆಯಲ್ಲಿ ಹಗ್ಗದಾಟ ಆಡುತ್ತಿರುವ ಸಂದರ್ಭದಲ್ಲಿ ಆಟ ಆಡುತ್ತಾ ಮನೆಯ ಮೆಟ್ಟಿಲುಗಳನ್ನು ಇಳಿಯುವಾಗ  ಕಾಲು ಜಾರಿ ಬಿದ್ದಿದ್ದಾನೆ.  ಹಗ್ಗದ ಹಿಡಿಕೆ ಮೆಟ್ಟಿಲಿನ ರಿಲ್ಲಿಂಗ್ ಗೆ ಸಿಕ್ಕಿಹಾಕಿಕೊಂಡು ಬಾಲಕನ ಕುತ್ತಿಗೆಗೆ ಹಗ್ಗ  ಬಿಗಿದುಕೊಂಡಿದೆ, ಆಗ ಬಾಲಕ ಪ್ರಜ್ಞಾಹೀನನಾಗಿದ್ದಾನೆ ಬಿದ್ದ ಶಬ್ದ ಕೇಳಿ ಮನೆಯಲ್ಲಿದ್ದ ಅಕ್ಕಂದಿರು ( ಮಹಿಮಾ ಮತ್ತು ಪಾಲ್ಗುಣಿ )ಹೊರಗೆ ಬಂದು ನೋಡಿ ನೆರೆಯವರನ್ನು ಸಹಾಯಕ್ಕ ಕರೆದಿದ್ದಾರೆ.

ತಕ್ಷಣದಲ್ಲಿ  ಯಾರು ಲಭ್ಯವಿಲ್ಲದಿದ್ದಾಗ ಬಾಲಕನನ್ನು ಮೇಲಕ್ಕೆತ್ತಿ ಹಗ್ಗದಿಂದ ಬಿಡಿಸಿದ್ದಾರೆ. ಆದರೆ ಹಗ್ಗ ಕುತ್ತಿಗೆಗೆ ಹಗ್ಗ ಬಿಗಿದಿದ್ದ ಕಾರಣ ನಿಶ್ಚೇತನಗೊಂಡಿದ್ದನು. ಇದನ್ನು ಅರಿತ ಸಹೋದರಿಯರು ಪ್ರಥಮ ಚಿಕಿತ್ಸೆಯಾಗಿ ಬಾಲಕನ ಎದೆಯನ್ನು ಒತ್ತಿದ್ದಾರೆ ನಂತರ ಬಾಯಿಯಲ್ಲಿ ಬಾಯಿ ಇಟ್ಟು ಉಸಿರು ನೀಡಿ ಮರು ಜೀವ ನೀಡಿದ್ದಾರೆ. ಚಿಕಿತ್ಸೆ ಫಲ ನೀಡಿ ಬಾಲಕ ವಂಶಿಕೃಷ್ಣ ಪವಾಡವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ನಂತರ ಬಾಲಕನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆ ಇಬ್ಬರು ಸಹೋದರಿಯರು ಸಮಯ ಪ್ರಜ್ಞೆ ಮತ್ತು ಪ್ರಥಮ ಚಿಕಿತ್ಸೆಯ ಫಲವಾಗಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ದರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

“Chef ಚಿದಂಬರ” ನಿಗೆ ನುರಿತ ಬಾಣಸಿಗರಿಂದ ತರಬೇತಿ.

ಬಾಳೆ ಎಲೆಯಲ್ಲೇ ಯಾಕೆ ಊಟ ಮಾಡಬೇಕು ಗೊತ್ತಾ..?

Gruha Laxmi ; ಚಾಮರಾಜನಗರದ ಪೂರ್ವಭಾವಿ ಸಭೆಯಲ್ಲಿ ಸಚಿವೆ ಹೆಬ್ಬಾಳ್ಕರ್..!

 

- Advertisement -

Latest Posts

Don't Miss