www.karnatakatv.net :ಬೆಂಗಳೂರು : ಶ್ರಾವಣ ಮಾಸ ಅಂದ್ರೆ ಸಾಲು ಸಾಲು ಹಬ್ಬಗಳು. ಶುಭ ಸಮಾರಂಭಗಳು ಅದರಲ್ಲೂ ಮದುವೆಗಳು ಹೆಚ್ಚಾಗಿ ನಡಯೋ ಸಮಯ. ಇದಕ್ಕೆ ಅಂತ ಆಭರಣಗಳನ್ನ ಕೊಳ್ಳೋದಕ್ಕೆ ಜನ ಮುಂದಾಗ್ತಾರೆ. ಆದ್ರೆ ಈ ಬಾರಿ ಚಿನ್ನ ಖರೀದಿ ಮಾಡ್ಬೇಕು ಅಂದ್ಕೊಂಡಿದ್ದೋರಿಗೆ ಶಾಕ್ ಆಗಿದೆ. ಯಾಕಂದ್ರೆ ಕಳೆದ ಎರಡು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ಬೆಲೆ ಇವತ್ತು ದಿಢೀರನೆ ಏರಿಕೆಯಾಗಿದೆ. ಇದು ಆಭರಣ ಪ್ರಿಯರಲ್ಲಿ ಬೇಸರ ಮೂಡಿಸಿದೆ.
ಚಿನ್ನ ಅಂದ್ರೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ಹೆಣ್ಣುಮಕ್ಕಳಿಗೆ ಜಾಸ್ತಿ ಒಡವೆಗಳ ಮೇಲೆ ವ್ಯಾಮೋಹ ಅಂತಿದ್ದ ಕಾಲ ಇತ್ತು, ಆದ್ರೀಗ ಗಂಡು ಮಕ್ಕಳಿಗೂ ಕೂಡ ವಿನೂತನ ಶೈಲಿಯ ಆಭರಣಗಳ ಡಿಸೈನ್ ಗಳು ಸಿಗ್ತಾಯಿದ್ದು, ಅವರೂ ಕೂಡ ಹೆಣ್ಣು ಮಕ್ಕಳಿಗಿಂತ ನಾವೇನು ಕಮ್ಮಿ ಇಲ್ಲ ಅನ್ನೋ ಹಾಗೆ ಒಡವೆಗಳನ್ನ ಪರ್ಚೇಸ್ ಮಾಡ್ತಿದ್ದಾರೆ. ಚಿನ್ನದ ಬೆಲೆ ಎಷ್ಚೇ ಇದ್ರು ಒಡವೆಗಳನ್ನ ಖರೀದಿಸೋರಿಗೇನೂ ಕಮ್ಮಿ ಇಲ್ಲ. ಆದ್ರೆ ನಿನ್ನೆ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ಆಭರಣ ಪ್ರಿಯರಲ್ಲಿ ಬೇಸರ ತರಿಸಿದೆ.
ನಿನ್ನೆಯಷ್ಟೇ ಒಂದು ಗ್ರಾಮ್ 22 ಕ್ಯಾರೆಂಟ್ ಚಿನ್ನದ ಬೆಲೆ 4404 ಇತ್ತು. ಆದ್ರೆ ಇವತ್ತು ಒಂದು ಗ್ರಾಮ್ ಚಿನ್ನದ ರೇಟು 51 ರೂಪಾಯಿ ಜಾಸ್ತಿಯಾಗಿ 4455 ರೂಪಾಯಿಗೆ ಬಂದು ನಿಂತಿದೆ.
ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 47,220 ರೂ. ಇತ್ತು. ಆದ್ರೆ ಇವತ್ತು 47,620 ರೂಪಾಯಿ ಆಗಿದೆ. ಇನ್ನು ಇದು ಬೆಂಗಳೂರಿನಲ್ಲಿನ ಬೆಲೆಯಾದ್ರೆ, ಮಂಗಳೂರು, ಮೈಸೂರುಗಳಲ್ಲಿ ಒಂದು ಗ್ರಾಮ್ ಚಿನ್ನಕ್ಕೆ 4440 ರೂಪಾಯಿ ಬೆಲೆ ಇದೆ.
ಭಾರತೀಯ ಮಾರುಕಟ್ಟೆಯಲ್ಲಿ ನಿರಂತರ ಇಳಿಕೆ ಕಂಡಿದ್ದ ಹಳದಿ ಲೋಹದ ಬೆಲೆ ನಿನ್ನೆ ಏರಿಕೆ ಕಂಡಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿರೋ ಪರಿಣಾಮ ಸಹಜವಾಗಿಯೇ ದೇಶಿ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆ ಗಗನಕ್ಕೇರುತ್ತಿದೆ.
ಕರ್ನಾಟಕ ಟಿವಿ- ಬೆಂಗಳೂರು