Bellary News: ಬಳ್ಳಾರಿ: ಬಿಲ್ ಪಾವತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಮಾಜಿ ಯೋಧ ಮಾಡಿರುವ ಕಾಮಗಾರಿಗೆ ಬಿಲ್ ಪಾವತಿಗೆ 3 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಲಾಗಿದ್ದು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಎಇ ನಾಗರಾಜ್ ಇದೀಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಬಿಲ್ ಪಾವತಿಸಬೇಕೆಂದರೆ ಲಂಚ ನೀಡಲೇಬೇಕು ಎಂಬ ಬೇಡಿಕೆ ಇಟ್ಟಿದ್ದನು. ಕಾಮಗಾರಿ ಮುಗಿದು ಹಲವು ದಿನಗಳು ಕಳೆದರು ನೋ- ಬಿಲ್. ಸುಮಾರು 30 ಲಕ್ಷ ಕಾಮಗಾರಿಗೆ ಬಿಲ್ ಮಾಡಬೇಕಾದರೇ ಪರ್ಷೇಂಟೆಜ್ ಮಾದರಿಯಲ್ಲಿ ಲಂಚ ನೀಡುವಂತೆ ಡಿಮ್ಯಾಂಡ್ ಮಾಡಿದ್ದನು. ಲಂಚ ನೀಡದೇ ಇದ್ದರೇ ಬಿಲ್ ಮಾಡುವುದಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಎಇ ನಾಗರಾಜ್ ಹೇಳಿದ್ದರು. ಬಿಲ್ ಗಾಗಿ ಹಲವು ದಿನಗಳಿಂದ ಕಚೇರಿಯ ಸುತ್ತ ಅಲೆದರು ಹಾಗೂ ಅಧಿಕಾರಿಗಳನ್ನು ಬಿಲ್ ಮಾಡುವಂತೆ ಕೇಳಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ.
ಈ ಎಲ್ಲಾ ಕಾರಣದಿಂದ ಬೇಸತ್ತಾ ಮಾಜಿ ಯೋಧ ಅಣ್ಣ ಫೌಂಡೇಷನ್ ಬಾಗಿಲು ಬಡೆದಿದ್ದಾರೆ. ಅಣ್ಣಾ ಫೌಂಡೇಷನ್ ಮಾರ್ಗದರ್ಶನದಲ್ಲಿ ಮುಂದುವರೆದ ಮಾಜಿ ಯೋಧ ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದರು. ಕೊನೆಗೂ ಎರಡು ಲಕ್ಷ ಹಣ ನೀಡುವುದಾಗಿ ಒಪ್ಪಿಕೊಂಡು ಮಾಜಿ ಯೋಧ ಅಣ್ಣ ಫೌಂಡೇಶನ್ ಸಹಾಯದೊಂದಿಗೆ ಲೋಕಾಯುಕ್ತರು ದೂರು ದಾಖಲಿಸಲಾಗಿತ್ತು. ಅದರೆಂತೆಯೇ ಎರಡು ಲಕ್ಷ ರೂ. ಎಇ ನಾಗರಾಜ್ ಅವರು ಪಡೆಯುತ್ತಿರುವಾಗ ಲೋಕಾಯುಕ್ತ ಬಲೆಗೆ ಸಣ್ಣ ನೀರಾವರಿ ಇಲಾಖೆಯ ಉಪ ವಿಭಾಗದಲ್ಲಿ ಎಇ ಆಗಿ ಕಾರ್ಯ ನಿರ್ವಹಿಸುತ್ತಿರುವ ನಾಗರಾಜ್ ರೆಡ್ ಹ್ಯಾಂಡ್ಡಾಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ನಟಿ ಕಾಜಲ್ ಅಗರ್ವಾಲ್ ಜೊತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿ: ನೆಟ್ಟಿಗರ ಆಕ್ರೋಶ
ನೀರಿನ ಸಮಸ್ಯೆ ಪರಿಹರಿಸಲು BWSSB ಚೇರ್ಮನ್‌ರನ್ನು ಭೇಟಿಯಾಗಿ ಸಲಹೆ ನೀಡಿದ ಸಂಸದ ತೇಜಸ್ವಿ ಸೂರ್ಯ

