Wednesday, August 20, 2025

Latest Posts

ತೂಕ ಹೆಚ್ಚಿಸಬೇಕೇ ಹಾಗಾದ್ರೆ ಈ ಪೇಯಗಳನ್ನ ಕುಡಿಯಿರಿ..

- Advertisement -

ನಾವು ನಿಮಗೆ ಈಗಾಗಲೇ ತೂಕ ಇಳಿಸಲು ಯಾವ ಸ್ಮೂದೀಸ್ ಕುಡಿಯಬೇಕು ಅನ್ನೋ ಬಗ್ಗೆ ತಿಳಿಸಿದ್ದೇವೆ. ಅದೇ ರೀತಿ, ತೂಕ ಹೆಚ್ಚಿಸಿಕೊಳ್ಳೋಕ್ಕೂ ಸ್ಮೂದೀಸ್ ಕುಡಿಯಲಾಗತ್ತೆ. ಅಂಥ ತೂಕ ಹೆಚ್ಚಿಸೋ ಸ್ಮೂದೀಸ್ ರೆಸಿಪಿ ತಯಾರು ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯದಾಗಿ ಬನಾನಾ ಮಿಲ್ಕ್ ಶೇಕ್- ಎರಡು ಬಾಳೆಹಣ್ಣು, ಒಂದು ಸ್ಪೂನ್ ಜೇನುತುಪ್ಪ, ಒಂದು ಸ್ಪೂನ್ ಪೀನಟ್ ಬಟರ್, ಒಂದು ಗ್ಲಾಸ್ ಹಾಲು, ಅರ್ಧ ಕಪ್ ಯೋಗರ್ಟ್ ಇವೆಲ್ಲವನ್ನು ಜ್ಯೂಸ್ ಜಾರ್‌ಗೆ ಹಾಕಿ, ಸ್ಮೂದಿ ತಯಾರಿಸಿ ಕುಡಿಯಿರಿ.

ಎರಡನೇಯದು ಸ್ಟ್ರಾಬೇರಿ ಮಿಲ್ಕ್ ಶೇಕ್- 5 ಸ್ಟ್ರಾಬೇರಿ ಹಣ್ಣು, ಒಂದು ಬಾಳೆಹಣ್ಣು, ಹುರಿದ ಶೇಂಗಾ ಕಾಳು ಅಥವಾ ಪೀನಟ್ ಬಟರ್, ನಾಲ್ಕು ಚಮಚ ಯೋಗರ್ಟ್, 4 ನೆನೆಸಿದ ಬಾದಾಮ್, 3 ಹಸಿ ಖರ್ಜೂರ, 4 ಅಖ್ರೋಟ್, ಒಂದು ಅಂಜೂರ. ಇವೆಲ್ಲವನ್ನೂ ಸೇರಿಸಿ, ಜ್ಯೂಸ್ ಜಾರ್‌ಗೆ ಹಾಕಿ, ಮಿಕ್ಸ್ ಮಾಡಿದ್ರೆ, ಸ್ಟ್ರಾಬೇರಿ ಸ್ಮೂದಿ ರೆಡಿ.

ಮೂರನೇಯದು ಬನಾನಾ ಡ್ರೈ ಫ್ರೂಟ್ಸ್ ಸ್ಮೂದಿ- ಒಂದು ಬಾಳೆಹಣ್ಣು, 10 ಪಿಸ್ತಾ, 5 ಗೋಡಂಬಿ, 5 ನೆನೆಸಿದ ಬಾದಾಮಿ, 2 ಅಂಜೂರ, 4 ಖರ್ಜೂರ, ಒಂದು ಸ್ಪೂನ್ ಪೀನಟ್ ಬಟರ್, ಒಂದು ಸ್ಪೂನ್ ಜೇನುತುಪ್ಪ ಸೇರಿಸಿ, ಸ್ಮೂದಿ ತಯಾರಿಸಿ ಕುಡಿಯಿರಿ.  

ಇದರಲ್ಲಿ ಬಳಸಿರುವ ಯೋಗರ್ಟ್, ಬಾಳೆ ಹಣ್ಣು, ಪೀನಟ್ ಬಟರ್, ಡ್ರೈಫ್ರೂಟ್ಸ್, ನಿಮ್ಮನ್ನು ಆರೋಗ್ಯಕರವಾಗಿ ದಪ್ಪವಾಗಲು ಸಹಾಯ ಮಾಡತ್ತೆ.

- Advertisement -

Latest Posts

Don't Miss