Wednesday, April 23, 2025

Latest Posts

Raichur : ರಾಜ್ಯಕ್ಕೆ ಮಾದರಿಯಾದ ನೂರಾರು ರೈತರಿಂದ ಆರಂಭವಾದ ಸ್ವಾಸ್ಥ್ಯ ರೈತರ ಉತ್ಪಾದಕ ಕಂಪನಿ..!

- Advertisement -

ರೈತರು ಬೆಳೆದ ಬೆಳೆಗೆ ತಮ್ಮದೆ ಬ್ರಾಂಡ್ ಮಾಡಿ ಮಾರಾಟ ಮಾಡುವುದು ಅಪರೂಪ, ರೈತರಲ್ಲಿ ಸಾವಯವ ಕಲ್ಪನೆ, ರೈತರಿಗೆ ಲಾಭವಾಗುವಂಥ ಮಾರುಕಟ್ಟೆಗಾಗಿ ರೈತರಿಂದ ಕಂಪನಿಯೊಂದು ಆರಂಭವಾಗಿದೆ, ಈ ಕಂಪನಿಯಲ್ಲಿ 1100 ರೈತರು ಮಾಲೀಕರು, ಅಲ್ಪ ಬಂಡವಾಳದಿಂದ ಆರಂಭವಾದ ಕಂಪನಿ ಈಗ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತಿದೆ.

ಯಂತ್ರಗಳ ಮುಖಾಂತರ ಗಾಣವನ್ನು ತಿರುಗಿಸಿ ಅಡುಗೆ ಎಣ್ಣೆ ತಯಾರಿಕೆ(cooking oil), ಆರೋಗ್ಯಕ್ಕೆ ಉತ್ತಮವಾದ ಔಷಧಿ ಗುಣಹೊಂದಿರುವ ತೈಲಗಳನ್ನು ತಯಾರಿಸುವ ಘಟಕಗಳನ್ನು ನೋಡಿದರೆ ಇವುಗಳಿಗೆ ಯಾರೋ ಒಬ್ಬ ಮಾಲೀಕ ಬಂಡವಾಳ ಹಾಕಿ ಮಿಲ್ (Mill) ಆರಂಭಿಸಿದ್ದಾರೆ ಎಂದು ಕೊಳ್ಳಬಹುದು, ಆದರೆ ನಿಮ್ಮ ಅಭಿಪ್ರಾಯ ತಪ್ಪು. ಈ ಮಿಲ್ ಗಳ ಮಾಲೀಕರು ಒಬ್ಬಿಬ್ಬರು ಇಲ್ಲ, ಇಲ್ಲಿರುವುದು ಒಟ್ಟು 1100 ಜನರು., ಸಾವಿರಾರು ಜನರ ರೈತರನ್ನು ಸೇರಿಸಿ ರಾಯಚೂರು ಜಿಲ್ಲೆಯ ಸಿಂಧನೂರಿ (Sindhanuri in Raichur district)ನಲ್ಲಿ ಸ್ವಾಸ್ಥ್ಯ ರೈತರ ಉತ್ಪಾದಕ ಕಂಪನಿ ( Svāsthya Farmers Manufacturer Company) ಆರಂಭಿಸಿದ್ದಾರೆ.  ರೈತರಿಂದ ರೈತರಿಗಾಗಿಯೇ ಆರಂಭವಾಗಿರುವದು ಈ ಕಂಪನಿ ಆರಂಭವಾಗಲು ನಬಾರ್ಡನಿಂದ ಸಹಾಯ ಸಲಹೆ ನೀಡಲಾಗಿದೆ. ನಬಾರ್ಡ ರೈತರೇ ಕಂಪನಿ ಆರಂಭಿಸಲು ರೈತರ ಉತ್ಪಾದಕ ಕಂಪನಿಗಳನ್ನು ಆರಂಭಿಸಲು ಉತ್ತೇಜನ ನೀಡಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾದರಿಯಾಗಿ ಸಿಂಧನೂರಿನಲ್ಲಿ ಈ ಕಂಪನಿ ಆರಂಭವಾಗಿದೆ, ಆರಂಭದಲ್ಲಿ 10 ಜನರು ಸೇರಿ ಕಂಪನಿ ಆರಂಭಿಸಲು ಚಿಂತನೆ ಮಾಡಿದ್ದು ಪ್ರತಿಯೊಬ್ಬರು ಸಾವಿರ ರೂಪಾಯಿಯನ್ನು ಸದಸ್ಯತ್ವಕ್ಕಾಗಿ ಬಂಡವಾಳ ಹಾಕಿದ್ದಾರೆ, ಪ್ರತಿ ಸದಸ್ಯರು ನೂರು ನೂರು ಜನರಂತೆ ಒಟ್ಟು 1000 ಜನರನ್ನು ಕಂಪನಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಆರಂಭದಲ್ಲಿ ರೈತರು ಬೆಳೆದ ಎಣ್ಣೆ ಕಾಳು, ಮನೆಯಲ್ಲಿ ಬಳಕೆ ಮಾಡುವ ಕೊಬ್ಬರಿ, ಕುಸಬಿ, ಶೇಂಗಾ ಕಾಳುಗಳನ್ನು ಎಣ್ಣೆಯನ್ನಾಗಿ ತಯಾರಿಸುತ್ತಿದ್ದಾರೆ, ಸಣ್ಣ ಮಿಲ್ ಆಗಿ ಆರಂಭವಾದ ಕಂಪನಿಯು ಈಗ ಸಿಂಧನೂರು ತಾಲೂಕಿನಲ್ಲಿ ಮೂರು ಕಡೆ ಮಿಲ್ ಗಳನ್ನು ಆರಂಭಿಸಿದ್ದಾರೆ. ಇಲ್ಲಿ ತಯಾರಾಗುವ ಅಡುಗೆ ಎಣ್ಣೆ ಉತ್ತಮ ಗುಣಮಟ್ಟ ಹಾಗು ಸಾವಯವ ರೀತಿಯಲ್ಲಿ ತಯರಾಗಿದ್ದರಿಂದ ರಾಜ್ಯದ ವಿವಿಧಡೆಯಿಂದ ಜನರು ಇಲ್ಲಿಗೆ ಬಂದು ಎಣ್ಣೆಯನ್ನು ಖರೀದಿಸುತ್ತಿದ್ದಾರೆ, ಈಗ ಆನ್ ಲೈನ್ ಮುಖಾಂತರ ಆರ್ಡರ್ ಮಾಡಿದರೆ ಅವರಿಗೆ ನೇರವಾಗಿ ಎಣ್ಣೆಯನ್ನು ರೈತರ ಕಂಪನಿಯ ಹೆಸರಿನ ಬ್ರಾಂಡಿನಲ್ಲಿ ಕಳುಹಿಸುತ್ತಿದ್ದಾರೆ. ಈಗ ಒಟ್ಟು 15 ಲಕ್ಷ ರೂಪಾಯಿ ವಹಿವಾಟು ನಡೆಯುತ್ತಿದೆ, ಇನ್ನೂ ಸಾಕಷ್ಟು ಬೇಡಿಕೆ ಇದೆ ಎನ್ನುತ್ತಾರೆ, ಕಂಪನಿಯ ನಿರ್ದೇಶಕರು. ಈ ಕಂಪನಿಯಿಂದ 18 ಗಿರ್ ತಳಿಯ ಆಕಳುಗಳನ್ನು ಸಾಕಿದ್ದು ಆಕಳು ಹಾಲು, ಮೂತ್ರ, ಗಂಜಲದಿಂದ ಗೋ ಆಧಾರಿತ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ, ಮುಖ್ಯವಾಗಿ ಗೋ ಆರ್ಕಾ, ವಿಭೂತಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದು ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ, ಇನ್ನೂ ಕಂಪನಿಯಿಂದ ರೈತರಿಂದ ಬೇರೆ ಬೇರೆ ಉದ್ಯಮಿಗಳಿಗೆ, ಕಂಪನಿಗಳಿಗೆ ಭತ್ತ. ಶೇಂಗಾ ಸೇರಿದಂತೆ ಬೆಳೆದ ಬೆಳೆಯನ್ನು ಸ್ವಾಸ್ಥ್ಯ ಕಂಪನಿಯಿಂದಲೇ ಮಾರಾಟ ಮಾಡಿ ರೈತರಿಗೆ ಲಾಭ ಮಾಡಿಕೊಡಲಾಗುತ್ತಿದೆ. ಇನ್ನೂ ಇಲ್ಲಿ ಅಡುಗೆ ಎಣ್ನೆ ತಯಾರಿಸಲು ರೈತರಿಂದ ಕಚ್ಚಾ ವಸ್ತುಗಳ ಖರೀದಿ ಒಂದು ಕಡೆಯಾದರೆ ಕಂಪನಿಯ ರೈತರು ನೇರವಾಗಿ ಬಂದು ತಮ್ಮ ಮಿಲ್ ಗಳನ್ನು ತಾವು ಬೆಳೆದ ಎಣ್ಣೆ ಕಾಳುಗಳಿಂದ ಎಣ್ಣೆಯನ್ನು ಹಾಕಿಸಿಕೊಂಡು ಹೋಗಬಹುದಾಗಿದೆ, ಇಲ್ಲಿ ಒಂದು ಕೆಜಿ ಅಡುಗೆ ಎಣ್ಣೆಯನ್ನು ತಯಾರಿಸಿ ಕೊಟ್ಟರೆ 5 ರೂಪಾಯಿ ದರ ನಿಗಿದಿ ಮಾಡಲಾಗುತ್ತಿದೆ. ಇದು ರೈತರು ತುಂಬಾ ಅನುಕೂಲವಾಗಿದೆ. ನಬಾರ್ಡಿನಿಂದ ಈಗ ಈ ಕಂಪನಿಗೆ ಒಬ್ಬ ಸಿಇಒ ನೇಮಿಸಿದ್ದು ಅವರ ವೇತನವನ್ನು ಅವರೆ ಭರಿಸುತ್ತಿದ್ದಾರೆ, ನಬಾರ್ಡ ಈ ಕಂಪನಿಗೆ 15 ಲಕ್ಷ ಸಹಾಯ ಧನ ನೀಡಲಿದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ, ರೈತರಿಂದ ಕೃಷಿ ಆಧಾರ ಕೈಗಾರಿಕೆ ಆರಂಭಿಸುವ ಈ ರೈತರ ಕಂಪನಿ ಇತರ ರೈತರಿಗೆ ಮಾದರಿಯಾಗಿದೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ, ರಾಯಚೂರು.

- Advertisement -

Latest Posts

Don't Miss