Hubballi News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಇಎಸ್ಐ ಆಸ್ಪತ್ರೆಯಲ್ಲಿ ಹಾವುಗಳ ಹಾವಳಿಯೇ ಹೆಚ್ಚಾಗಿದೆ. ಇಲ್ಲಿನ ಜನರು ಹಾಗೂ ಸಿಬ್ಬಂದಿ ಸಾಕಷ್ಟು ಭಯದಲ್ಲಿಯೇ ಓಡಾಡುವಂತಾಗಿದೆ. ಈ ಹಿಂದೆ ಸಾಕಷ್ಟು ಹಾವುಗಳನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಮತ್ತೆ ಹಾವುಗಳ ಹಾವಳಿ ಹೆಚ್ಚಾಗಿದೆ.
ಕಾರ್ಮಿಕ ಇಲಾಖೆಯ ಇಎಸ್ಐ ಆಸ್ಪತ್ರೆಯ ಆವರಣದಲ್ಲಿ ಹಾವುಗಳು ಓಡಾಡುವುದು ಸರ್ವೇ ಸಾಮಾನ್ಯವಾಗಿದೆ. ಇಲ್ಲಿನ ಪರಿಸರದ ಅವ್ಯವಸ್ಥೆಯಿಂದ ಇಂತಹದೊಂದು ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ಇನ್ನೂ ಆಸ್ಪತ್ರೆಯ ಆವರಣದಲ್ಲಿ ಓಡಾಡುವ ಕೆರೆ ಹಾವು ಹಾಗೂ ನಾಗರಹಾವು ಸೇರಿದಂತೆ ನಾಲ್ಕು ಹಾವುಗಳನ್ನು ಉರಗ ತಜ್ಞ ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರು ಮುತುವರ್ಜಿಯಿಂದ ಸೂಕ್ತ ಕ್ರಮಗಳನ್ನು ಜರುಗಿಸಿ ಇಲ್ಲಿನ ವ್ಯವಸ್ಥೆ ಸರಿಪಡಿಸುವ ಕಾರ್ಯವನ್ನು ಮಾಡಬೇಕಿದೆ.
ಹಿಂಡು ಹಿಂಡಾಗಿ ರಸ್ತೆ ದಾಟಿದ ಕಾಡಾನೆಗಳು: ಸ್ಥಳೀಯರಲ್ಲಿ ಬೆಳೆ ಹಾನಿಯ ಭಯ ಶುರು..
ನಕಲಿ ದಾಖಲೆ ಸೃಷ್ಟಿಸಿ ಕಾನೂನು ಬಾಹಿರವಾಗಿ ಜಮೀನು ಮಂಜೂರು: ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ