International News: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕು. ಸೆಲೆಬ್ರಿಟಿಯಾಗಬೇಕು ಎನ್ನುವ ಹುಚ್ಚು ಇಂದಿನ ಯುವ ಪೀಳಿಗೆಯಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಇದೇ ಹುಚ್ಚು ಓರ್ವ ಬಾಲಕನ ಜೀವ ತೆಗೆದಿದೆ.
14 ವರ್ಷದ ಬಾಲಕ ಸೋಶಿಯಲ್ ಮೀಡಿಯಾದಲ್ಲಿ ಬಂದ ಖಾರ ಖಾರ ಚಿಪ್ಸ್ ತಿನ್ನುವ ಚಾಲೆಂಜ್ ತೆಗೆದುಕೊಂಡು, ಚಿಪ್ಸ್ ತಿಂದು ಸಾವನ್ನಪ್ಪಿದ್ದಾನೆ. ನ್ಯೂಯಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಹ್ಯಾರಿಸ್ ಮೃತ ಬಾಲಕನಾಗಿದ್ದಾನೆ.
ಒನ್ ಚಿಪ್ ಚಾಲೆಂಜ್ ಇದಾಗಿದ್ದು, ಈ ಚಾಲೆಂಜ್‌ನಲ್ಲಿ ಖಾರವಾದ ಚಿಪ್ಸ್ ತಿನ್ನಬೇಕು. 1 ಚಿಪ್ಸ್ ಭಯಂಕರ ಖಾರವಾಗಿದ್ದು, ಈ ಚಿಪ್ಸ್ ತಿಂದೊಡನೆ, ಹೃದಯ ಸ್ತಂಭನದಿಂದ ಬಾಲಕ ಸಾವನ್ನಪ್ಪಿದ್ದಾನೆ. ಇವನೊಂದಿಗೆ ಇಂಥ ಚಾಲೆಂಜ್‌ನಲ್ಲಿ ಭಾಗವಹಿಸಿದ್ದ ಹಲವು ಬಾಲಕರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂಥ ಚಾಲೆಂಜ್ ಮಕ್ಕಳ ಜೀವ ತೆಗೆಯುತ್ತಿದ್ದು, ಮಕ್ಕಳು ಪೋಷಕರಿಗೆ ಗೊತ್ತಿಲ್ಲದೇ, ಇಂಥ ಚಾಲೆಂಜ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಇಂಥ ಚಾಲೆಂಜ್‌ಗಳನ್ನೆಲ್ಲ ಬ್ಯಾನ್ ಮಾಡಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಬ್ಲೂವೇಲ್ ಗೇಮ್ ಬಂದಿದ್ದು, ಇದರ ದಾಸರಾಗಿದ್ದ ಹಲವು ಬಾಲಕರು, ಕಟ್ಟಡಗಳಿಂದ ಬಿದ್ದು ಸಾವನ್ನಪ್ಪಿದ್ದರು. ಬಳಿಕ ಈ ಗೇಮ್ ಬ್ಯಾಾನ್ ಮಾಡಲಾಯಿತು.
ಪ್ರವಾಸಿಯ ಕಳೆದುಹೋಗಿದ್ದ ವಾಚ್ ಹಿಂದಿರುಗಿಸಿದ ಭಾರತೀಯ ಹುಡುಗ: ದುಬೈ ಪೊಲೀಸರಿಂದ ಸನ್ಮಾನ
ಕೊ* ಪ್ರಕರಣಗಳಲ್ಲಿ ಸರ್ಕಾರದ ಲೋಪ ಹೆಚ್ಚಾಗಿ ಕಾಣುತ್ತಿದೆ: ಶಾಸಕ ಟೆಂಗಿನಕಾಯಿ