www.karnatakatv.net :ರಾಯಚೂರು : ರಾಯಚೂರಿಗೆ ಆಗಮಿಸಿರುವ ವಿನಯ್ ಗುರೂಜಿ, ಮಾಧ್ಯಮಗಳೊಂದಿಗೆ ಮಾತನಾಡಿದರು. ಅತ್ಯಚಾರದಂತ ಘಟನೆ ನಡೆಯಬಾರದು. ಮಹಿಳೆಯ ರಕ್ಷಣೆ ಮಾಡಬೇಕಾಗಿದೆ. ಇಂತಹ ಹೇಯ ಕೃತ್ಯಕ್ಕೆ ಸ್ವೆಚ್ಚಾಚಾರ, ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಹಾಗೂ ಸೋಷಿಯಲ್ ಮಿಡಿಯಾಗಳಲ್ಲಿ ಬರುವ ಸಂಗತಿಗಳು ಪ್ರೇರಣೆ ನೀಡುತ್ತಿವೆ. ಇವಕ್ಕೆಲ್ಲ ಕಡಿವಾಣ ಹಾಕಬೇಕು. ಜೊತೆಗೆ ಇಂತಹ ನೀಚ ಕೆಲಸ ಮಾಡುವವರಿಗೆ ಕಠಿಣ ಶಿಕ್ಷೆಯಾಗುವಂತ ಕಾನೂನುಗಳನ್ನ ಜಾರಿಗೊಳಿಸಬೇಕಿದೆ. ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಿ ಕಾನೂನನ್ನ ಬಲಪಡಿಸಲಿ ಎಂದು ಗುರೂಜಿ ಸಲಹೆ ನೀಡಿದರು.
ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ. ತಾಲಿಬಾನನ್ನ ಉಗ್ರರು ಪ್ರಾಯೋಗಿಕವಾಗಿ ಮಾಡಿಕೊಂಡಿದ್ದಾರೆ. ಎಲ್ಲ ದೇಶಗಳು ಎಚ್ಚರಗೊಳ್ಳಬೇಕಿದೆ. ಪ್ರಪಂಚದ ಎಲ್ಲ ದೇಶಗಳು ಒಂದಾಗಿ ತಾಲಿಬಾನ್ ಉಗ್ರರ ಮಟ್ಟ ಹಾಕಬೇಕಿದೆ. ಚೀನಾ ಮತ್ತು ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡುವ ಸಂಚಿನಲ್ಲಿವೆ.
ತಾಲಿಬಾನ್ ಉಗ್ರರಿಗೆ ಈ ದೇಶಗಳ ಸಂಚು ಸದುಪಯೋಗವಾಗಬಹುದು. ಇದು ಯುದ್ದಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಗುರೂಜಿ ಕಳವಳ ವ್ಯಕ್ತ ಪಡಿಸಿದರು.
ಅನೀಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು