ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಿಂದ ದಿನಸಿ ಕಳ್ಳ ಸಾಗಾಟ: ವಾರ್ಡನ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

Hassan News: ಹಾಸನ : ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಿಂದ ದಿನಸಿ ಕಳ್ಳ ಸಾಗಾಟ ಮಾಡುತ್ತಿದ್ದಾರೆಂದು, ಹಾಸ್ಟೆಲ್ ವಾರ್ಡನ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.

ಹಾಸನ ಜಿಲ್ಲೆ, ಆಲೂರು ಪಟ್ಟಣದಲ್ಲಿರುವ ಬಾಲಕರ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಕೆಲ ಯುವಕರು ಹಾಸ್ಟೇಲ್‌ನಿಂದ ದಿನಸಿ ಪದಾರ್ಥಗಳನ್ನು ಕೊಂಡೊಯ್ಯುವಾಗ ಸಿಕ್ಕಿಬಿದ್ದಿದ್ದಾರೆ.

ಪ್ರತಿನಿತ್ಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ತರುವ ದಿನಸಿ, ತರಕಾರಿ ಪದಾರ್ಥಗಳನ್ನು ತನ್ನ ಮನೆಗೆ ಸಾಗಿಸಲು ಹಾಸ್ಟೆಲ್ ವಾರ್ಡನ್ ಕಾತರಾಜು, ಹೊರಗಿನ ಯುವಕರನ್ನು ಕರೆಯಿಸುತ್ತಾರೆ. ಈ ರೀತಿ ಅಕ್ರಮವಾಗಿ ದಿನಸಿ, ತರಕಾರಿ ಮನೆಗೆ ಸಾಗಿಸುತ್ತಾರೆಂದು ಆರೋಪ ಮಾಡಲಾಗಿತ್ತು. ಇದಕ್ಕೆ ತಕ್ಕ ಹಾಗೆ, ದಿನಸಿ ತೆಗೆದುಕೊಂಡು ಹೋಗುವಾಗ, ಇಬ್ಬರು ಯುವಕರು ಸಿಕ್ಕಿಬಿದ್ದಿದ್ದಾರೆ. ಈ ದೃಶ್ಯವನ್ನು ಹಾಸ್ಟೆಲ್ ಹುಡುಗರು ವೀಡಿಯೋ ಮಾಡಿದ್ದು, ಈ ಕಾರಣಕ್ಕೆ ವಾರ್ಡನ್‌ ಆ ಹುಡುಗರಿಗೆ ಬೆದರಿಕೆಯೂ ಹಾಕಿದ್ದಾರಂತೆ.

ಒಳ್ಳೆಯ ಗುಣಮಟ್ಟದ ದಿನಸಿ, ತರಕಾರಿ, ಹಾಲುಗಳನ್ನು ತನ್ನ ಮನೆಗೆ ಕೊಂಡೊಯ್ದು, ಕಳಪೆ ಗುಣಮಟ್ಟದ ತರಕಾರಿ, ದಿನಸಿ, ಹಾಲು. ಮೊಟ್ಟೆಯನ್ನು ವಾರ್ಡನ್ ತನ್ನ ಮನೆಗೆ ಕೊಂಡೊಯ್ಯುತ್ತಿದ್ದಾರೆಂದು, ಹಾಸ್ಟೆಲ್ ವಿದ್ಯಾರ್ಥಿಗಳೇ ಆರೋಪಿಸಿದ್ದಾರೆ. ಅಲ್ಲದೇ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಈ ಅಂಗಡಿಯಲ್ಲಿ ಸಾಲ ನೀಡಲಾಗುವುದಿಲ್ಲವಂತೆ..

ಹಾವೇರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ವದಂತಿ

ನೀವು ಯಾವ ಸೀಮೆ ‘ಸ್ಟ್ರಾಂಗ್’ ಸಿಎಂ ಬಿಡ್ರೀ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರೀತಂಗೌಡ ಕಿಡಿ..

About The Author