Friday, December 27, 2024

Latest Posts

ಬೈಕ್ ರೈಡ್ ಮೂಲಕ ಕಾಶ್ಮೀರಕ್ಕೆ ಸೊಲೋ ಟ್ರಿಪ್: ಹೊಸ ದಾಖಲೆ ಬರೆದ ಧಾರವಾಡ ಯುವತಿ

- Advertisement -

Hubli News: ಮನಸ್ಸೊಂದಿದಿದ್ದರೆ ಸಾಲದು‌. ಅದಕ್ಕೆ ತಕ್ಕ ಧೈರ್ಯ ಕೂಡ ಬೇಕು. ಅಂದಾಗಲೇ ಅಂದುಕೊಂಡಿದ್ದು ಸಾರ್ಥಕ ಆಗುತ್ತೇ. ಅಂಥದ್ದೇ ಒಂದು ಧೈರ್ಯದ ಕೆಲಸ‌ ವಿದ್ಯಾಕಾಶಿ ಧಾರವಾಡದ ಈ ಯುವತಿ ಮಾಡಿದ್ದಾಳೆ‌.

ನಗರದ ಆರ್ ಎನ್ ಶೆಟ್ಟಿ ಕ್ರೀಡಾಂಗಣ ಬಳಿಯ‌ ನಿವಾಸಿಯಾದ ಪ್ರತೀಕ್ಷಾ ಹರವಿಶಟ್ಟರ್ ಎಂಬ 18 ವರ್ಷದ ಯುವತಿಯೇ ಹೊಸ ದಾಖಲೆಯೊಂದರ ಜೊತೆಗೆ ಸಾಧನೆ ಮಾಡಿದವಳು. ಬಿಸಿಎ ಓದುತ್ತಿರೋ ಈಕೆ ಕಳೆದ ಫೆಬ್ರವರಿ 13 ರಂದು ಧಾರವಾಡದಿಂದ ಕಾಶ್ಮೀರಕ್ಕೆ ಬೈಕ್ ಮೇಲೆ ಹೋಗಿ ಏಕಾಂಗಿಯಾಗಿ ಸೊಲೋ ಬೈಕ್ ರೈಡಿಂಗ್ ಮೂಲಕ ಹೋಗಿ ಬಂದಿರೋ ಪ್ರತೀಕ್ಷಾ . ಕಾಶ್ಮೀರದ ಲಾಲ್ ಚೌಕ್ ವರೆಗೆ ಕೇವಲ 9 ದಿನಗಳಲ್ಲಿ ಹೋಗಿ ಬಂದಿದ್ದಾಳೆ.

ಸುಮಾರು 6 ಸಾವಿರ ಕಿಲೋ ಮೀಟರ್ ದೂರದ ಈ ರಸ್ತೆಯ ಕ್ರಮಿಸಿ ಬಂದಿರುವ‌ ಇವಳು, 10 ದಿನಗಳಲ್ಲಿ ಈ ಸಾಧನೆ ಮಾಡುವ‌ ಉದ್ದೇಶ ಹೊಂದಿದ್ದಳು‌. ಆದರೆ 9 ದಿನಗಳಲ್ಲೇ ಇದನ್ನ ಮಾಡಿದ್ದಾಳೆ. ಇನ್ನು ಒಬ್ಬಂಟಿ ಇದ್ದರೂ ಆಕೆ ರಾತ್ರಿ ಆರ್ಮಿ ಕ್ಯಾಂಪ್ ಗಳಲ್ಲೇ ಹಾಲ್ಟ್ ಮಾಡುತಿದ್ದಳು. ಅಲ್ಲದೇ ದಿನಕ್ಕೆ ಆಕೆ 500 ಕಿಲೋಮೀಟರದಿಂದ 700 ಕಿಲೋ ಮೀಟರ್ ಬೈಕ್ ರೈಡ್ ಮಾಡುತಿದ್ದಳು. ಇನ್ನು ಬೈಕ್ ಕೈಕೊಟ್ಟಾಗಲೂ ಕುಗ್ಗದೇ ಆಕೆ ತನ್ನ ಗುರಿ ಸಾಧಿಸಿದ್ದಾಳೆ. ಎಲ್ಲೇ ಹೋದರು ಕೂಡ ಆಕೆಗೆ ಜನರ ಸಹಕಾರ ಸಿಕ್ಕಿದೆ‌‌ ಅಂತಾ ಆಕೆಯೇ ಹೇಳುತ್ತಾಳೆ.

ಇನ್ನು ಈಕೆ ಇಲ್ಲಿಂದ ಕಾಶ್ಮೀರವರೆಗೆ ಹೊರಟಾಗ ಈಕೆಗೆ ಸಹಾಯ ಆಗಿದ್ದು ಜಿಪಿಎಸ್ ಲೊಕೇಷನ್. ಇದರ‌‌ ಸಹಾಯದಿಂದ ಆಕೆ ಕಾಶ್ಮೀರ ಮುಟ್ಟಿದ್ದು. ನಡು ರಸ್ತೆಯಲ್ಲಿ ಎಲ್ಲಾದರೂ ದಾರಿ ಗೊತ್ತಾಗದಿದ್ದಾಗ, ಈಕೆಯ ಸಹೋದರಿ ಇವಳಿಗೆ ಜಿಪಿಎಸ್ ಮುಖಾಂತರ ದಾರಿ‌ ತೊರಿಸಿದ್ದು. ಸದ್ಯ ದಾಖಲೆ‌ ಮಾಡಲು ಈ ರೈಡ್ ಮಾಡಿದ್ದು. ಈ ಹಿಂದೆ 21 ವರ್ಷದ ಕೇರಳ ಯುವತಿ ಕಾಶ್ಮೀರವರೆಗೆ ಒಬ್ಬಂಟಿ ಹೋಗಿರುವ ದಾಖಲೆ‌ ಇದೆ. ಇದಾದ ನಂತರ ಇದೇ‌ ಪ್ರತೀಕ್ಷಾ ಸಹೋದರಿ ಕೋಮಲ್ 19 ವರ್ಷದವಳಿದ್ದಾಗ ಕಾಶ್ಮೀರಕ್ಕೆ ಹೋಗಿದ್ದು. ಈಗ ಪ್ರತೀಕ್ಷಾ 18 ವರ್ಷದಾಕೆ ಇದ್ದಾಗಲೇ‌ ಇದನ್ನ ಮಾಡಿದ್ದಾಳೆ.‌ ಈಗ ಪ್ರತೀಕ್ಷಾ ಮಾಡಿದ ದಾಖಲೆ ಯಾರೂ ಮುರಿಯಲು ಆಗಲ್ಲ ಎಂಬ ಮಾತು ತಂದೆ ತನ್ನ ಮಗಳ ಮಾಡಿದ ಸಾಧನೆ ಬಗ್ಗೆ ಕೊಂಡಾಡಿದ್ದಾರೆ.

ಸದ್ಯ ನಮ್ಮ ರಾಜ್ಯದ ಹೆಮ್ಮೆಯ ಒಬ್ಬಂಟಿಯಾಗಿ ಕಾಶ್ಮೀರ ಲಾಲ್ ಚೌಕಗೆ ಒಬ್ಬಂಟಿಯಾಗಿ‌ ಹೋಗಿ ಮುಟ್ಟಿ ಬಂದು ಹೊಸ‌ ದಾಖಲೆ ಬರೆದಿದ್ದಾಳೆ. ಇವಳ‌ ಈ ಸಾಧನೆ ಜನರು‌ ಕೊಂಡಾಡಿದ್ದಷ್ಟೇ ಅಲ್ಲ. ಇದು ಈ ದಾಖಲೆ ಪುಸ್ತಕದಲ್ಲಿ ದಾಖಲಾಗಬೇಕಿದೆ.

ಸತ್ಯಪಾಲ್ ಮಲಿಕ್ ನಿವಾಸದ ಮೇಲೆ ಸಿಬಿಐ ರೇಡ್: ಇದು ಬಿಜೆಪಿಗರ ಕುಟಿಲ ಕಾರಸ್ತಾನವೆಂದ ಸಿಎಂ ಸಿದ್ದರಾಮಯ್ಯ

ಈ ದೇವರನ್ನು ನಂಬಿದ್ದಕ್ಕೆ ನನ್ನ ಪತಿ ಚುನಾವಣೆಯಲ್ಲಿ ಗೆದ್ದಿದ್ದರು: ಭವಾನಿ ರೇವಣ್ಣ

ನಾನು ಕಾಣಿಸಿಕೊಳ್ಳದ್ದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿದರು: ಭವಾನಿ ರೇವಣ್ಣ

- Advertisement -

Latest Posts

Don't Miss