Saturday, July 12, 2025

Latest Posts

ಬಾಯಿಯಿಂದ ಕೆಟ್ಟ ವಾಸನೆ ಬರದಿರಲು ಏನು ಮಾಡಬೇಕು ಮತ್ತು ಏನು ಮಾಡಬಾರದು..?

- Advertisement -

ನಾವು ಯಾರನ್ನಾದರೂ ಭೇಟಿ ಮಾಡಲು ಹೋದಾಗ, ಅವರೊಟ್ಟಿಗೆ ಚಂದ ಮಾಡಿ ಮಾತನಾಡಬೇಕಾಗುತ್ತದೆ. ಆಗ ಆ ಭೇಟಿಗೊಂದು ಅರ್ಥವಿರುತ್ತದೆ. ಆದ್ರೆ ನೀವು ಮಾತನಾಡುವಾಗ ನಿಮ್ಮ ಬಾಯಿಯಿಂದ ಸ್ಮೆಲ್‌ ಬಂದ್ರೆ, ಎದುರಿನವರು ಕೆಲ ಸಮದಲ್ಲೇ ಮಾತು ಮುಗಿಸಿ ಹೊರಟುಬಿಡುತ್ತಾರೆ. ಆಗ ಎಷ್ಟು ಅವಮಾನ ಮತ್ತು ನಿರಾಸೆ ಆಗತ್ತೆ ಅಲ್ವಾ..? ಆದ್ರೆ ನಾವು ಚೆನ್ನಾಗಿ ಬ್ರಶ್ ಮಾಡಿಕೊಂಡೇ ಅವರನ್ನ ಭೇಟಿಯಾಗಲು ಹೋಗಿರ್ತೀವಿ ಅನ್ನೋದು ನಿಮ್ಮ ಮಾತು. ಆದರೂ ಕೂಡ ಬಾಯಿಯ ವಾಸನೆ ಬರೋಕ್ಕೆ ಹಲವು ಕಾರಣಗಳಿದೆ. ಹಾಗಾಗಬಾರ್ದು ಅಂದ್ರೆ ನಾವು ಇವತ್ತು ನಿಮಮಗೆ ಕೆಲ ಟಿಪ್ಸ್ ಹೇಳ್ತೀವಿ ಕೇಳಿ..

ಮೊದಲನೇಯದಾಗಿ ಹೆಚ್ಚು ನೀರು ಕುಡಿಯುವುದರಿಂದ ಬಾಯಿಯ ವಾಸನೆ ಬರುವುದಿಲ್ಲ. ಆದ್ರೆ ಹೆಚ್ಚು ಕಾಫಿ ಮಾತ್ರ ಕುಡಿಯಬಾರದು. ಹೆಚ್‌ಚಿನ ಕಾಫಿ ಸೇವನೆಯಿಂದ ಬಾಯಿಯ ವಾಸನೆ ಬರುತ್ತದೆ. ಹಾಗಾಗಿ ಆದಷ್ಟು ನೀರು ಕುಡಿಯಿರಿ. ಹೊಟ್ಟೆ ಖಾಲಿ ಇದ್ದರೂ ಕೂಡ ಬಾಯಿಯ ವಾಸನೆ ಬರುತ್ತದೆ. ಹಾಗಾಗಿ ಹೊಟ್ಟೆ ಹಸಿವಾದಾಗ ಆಹಾರ ಸೇವಿಸಿ ಮತ್ತು ನೀರು ಕುಡಿಯಿರಿ.

ಎರಡನೇಯದಾಗಿ ನೀವು ಯಾರನ್ನಾದರೂ ಭೇಟಿ ಮಾಡಲು ಹೋಗುವಾಗ ಅಥವಾ ಪ್ರೀತಿ ಪಾತ್ರರೊಡನೆ ಮಾತನಾಡುವಾಗ ಅಥವಾ ನಿಮ್ಮ ಮನೆಗೆ ಅತಿಥಿಗಳು ಬಂದಾಗ, ನೀವು ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋದಾಗ, ಬೆಳ್ಳುಳ್ಳಿ ಅಥವಾ ಈರುಳ್ಳಿಯ ಸೇವನೆ ಮಾಡಬೇಡಿ.. ಬೆಳ್ಳುಳ್ಳಿ ಮತ್ತು ಈರುಳ್ಳಿ ಪರಿಮಳ ಬಾಯಲ್ಲಿ ತುಂಬ ಹೊತ್ತು ಉಳಿಯುತ್ತದೆ. ಆದ್ದರಿಂದ ಬೆಳ್ಳುಳ್ಳಿ ಮತ್ತು ಈರುಳ್ಳಿ ತಿಂದರೆ, ಬ್ರಶ್ ಮಾಡಿಕೊಂಡು ಹೋಗಿ.

ಮೂರನೇಯದಾಗಿ ತಿಂಗಳಿಗೊಮ್ಮೆ ನಿಮ್ಮ ಬ್ರಶ್ ಚೇಂಜ್ ಮಾಡಿ. ನೀವು ಸುಮಾರು ತಿಂಗಳು ಒಂದೇ ಬ್ರಶ್ ಬಳಕೆ ಮಾಡುವುದರಿಂದಲೂ ಬಾಯಿ ವಾಸನೆ ಬರಬಹುದು. ಇಷ್ಟೇ ಅಲ್ಲದೇ, ನೀವು ಬ್ರಶ್ ಮಾಡಿದರಷ್ಟೇ ಸಾಲದು. ನಿಮ್ಮ ನಾಲಿಗೆಯನ್ನ ಸಹ ಕ್ಲೀನ್ ಮಾಡಬೇಕು. ಆಗಷ್ಟೇ ನಿಮ್ಮ ಬಾಯಿ ಪೂರ್ತಿ ಸ್ವಚ್‌ಛವಾಗಿರುತ್ತದೆ.

ನಾಲ್ಕನೇಯದಾಗಿ ಆಲ್ಕೋಹಾಲ್ ಫ್ರೀ  ಮೌತ್ ವಾಶ್‌ನಾ ಬಳಕೆ ಮಾಡಿ. ಆಲ್ಕೋಹಾಲ್ ಅಂಶ ಇರುವ ಮೌತ್ ವಾಶ್ ಬಳಸೋದು ಉತ್ತಮವಲ್ಲ. ಇನ್ನು ನೀವು ಬಾಯಿಯ ದುರ್ಘಂದ ಹೋಗೋಕ್ಕೆ ಅಂತಾ ಮಿಂಟ್ ಫ್ಲೇವರ್ ಚಾಕೋಲೇಟ್ ಬಳಸೋದು ಖಂಡಿತಾ ಒಳ್ಳೆಯದಲ್ಲ. ನೀವು ಯಾವಾಗಲಾದರೂ ಒಮ್ಮೆ ಮಿಂಟ್ ಫ್ಲೇವರ್ ಚಾಕೊಲೇಟ್ ಬಳಸಿ. ಆದ್ರೆ ಪ್ರತಿದಿನ ಅಥವಾ ದಿನಕ್ಕೆ ಮೂರು ನಾಲ್ಕು ಬಾರಿ ಸಕ್ಕರೆ ಅಂಶವಿರುವ ಮಿಂಟ್ ಚಾಕೋಲೇಟ್ ಬಳಸೋದು ಬೇಡ.

ಐದನೇಯದಾಗಿ ಎಲ್ಲಾದರೂ ಹೋಗುವಾಗ ಬಾಯಿಗೆ ಎರಡು ತುಂಡು ಸೌತೇಕಾಯಿ, ಏಲಕ್ಕಿ, ಲವಂಗ, ಸೋಂಪು ಕಾಳು, ಪುದೀನಾ, ಇವುಗಳಲ್ಲಿ ಯಾವುದಾದರೂ ಒಂದನ್ನು ಬಾಯಿಗೆ ಹಾಕಿಕೊಂಡು ಹೋಗಿ. ಇದನ್ನು ಸೇವಿಸುವುದರಿಂದ ಬಾಯಿಯ ದುರ್ಘಂದ ಬರುವುದಿಲ್ಲ.

- Advertisement -

Latest Posts

Don't Miss