Friday, April 18, 2025

Latest Posts

ಹವ್ಯಾಸವನ್ನೇ ಉದ್ಯಮವನ್ನಾಗಿಸುವುದಕ್ಕೆ ಅಮ್ಮಂದಿರಿಗಾಗಿ ಇಲ್ಲಿದೆ ಕೆಲ ಟಿಪ್ಸ್..!

- Advertisement -

ಈ ಮುಂಚೆಯೇ ನಾವು ನಿಮಗೆ ಅಮ್ಮಂದಿರು ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮದ ಬಗ್ಗೆ ಎರಡು ಪಾರ್ಟ್‌ನಲ್ಲಿ ಮಾಹಿತಿ ನೀಡಿದ್ದೇವು. ಇಂದು ಅದರ ಮುಂದುವರಿದ ಭಾಗದಲ್ಲಿ ಮತ್ತಷ್ಟು ಬ್ಯುಸಿನೆಸ್ ಐಡಿಯಾಗಳನ್ನ ನೀಡಲಿದ್ದೇವೆ.

ಪಿಕೋ ಫಾಲ್: ಸೀರೆ ಉಡದ ನಾರಿಯಿಲ್ಲ ಎಂಬ ಮಾತಿನಂತೆ, ಪ್ರತಿ ಹೆಣ್ಣು ಮಗಳು ಸೀರೆಯಲ್ಲಿ ಅಂದವಾಗಿ ಕಾಣಿಸ್ತಾಳೆ. ಅದರಲ್ಲೂ ಈಗ ವೆರೈಟಿ ವೆರೈಟಿ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇನ್ನು ಸೀರೆ ತೆಗೆದುಕೊಂಡವರು ಪಿಕೋ ಫಾಲ್ ಅಂತೂ ಹಾಕಿಸಲೇಬೇಕು. ಹಾಗಾಗಿ ನೀವು ಪಿಕೋ ಫಾಲ್ ಹಾಕಲು ಕಲಿತರೆ ಅದನ್ನೇ ಉದ್ಯಮವನ್ನಾಗಿಸಿಕೊಳ್ಳಬಹುದು.

ಗೊಂಬೆ ಮಾಡುವುದು: ಕೆಲವರು ಟೆಡ್ಡಿ ಬಿಯರ್, ಡಾಲ್‌ಗಳನ್ನ ಮನೆಯಲ್ಲೇ ಎಷ್ಟು ಚೆನ್ನಾಗಿ ತಯಾರಿಸುತ್ತಾರೆಂದರೆ ಅದು ಮಾರುಕಟ್ಟೆಯಲ್ಲಿ ಸಿಗುವ ಗೊಂಬೆಗಳಿಗಿಂತ ಅಂದವಾಗಿ ಮತ್ತು ಒಳ್ಳೆ ಕ್ವಾಲಿಟಿಯದ್ದಾಗಿರುತ್ತದೆ. ಅಂತಹ ಬೊಂಬೆಯನ್ನ ಮನೆಯಲ್ಲೇ ಮಾಡಿ ಅದನ್ನ ಮಾರಬಹುದು. ಅಥವಾ ಗೊಂಬೆ ಮಾಡುವ ಕ್ಲಾಸ್ ಕೂಡ ಸ್ಟಾರ್ಟ್ ಮಾಡಬಹುದು.

ಮನೆಯಲ್ಲೇ ಸರ ಬಳೆ ತಯಾರಿಸುವುದು ಕೂಡ ಸರಳ. ಸ್ವಲ್ಪ ಸಮಯ ಹಿಡಿದರೂ ಒಳ್ಳೆ ಲಾಭ ಪಡಿಯಬಹುದು. ಈಗಿನ ಮಹಿಳಾ ಮಣಿಯರು ಫ್ಯಾಷನೇಬಲ್ ಆರ್ನ್‌ಮೆಂಟ್ಸ್‌ಗಾಗಿ ಸರ್ಚ್ ಮಾಡ್ತಿರ್ತಾರೆ. ಅಂಥವರಿಗೆ ಸ್ಯೂಟ್ ಆಗೋ ರೀತಿ ನೀವು ಆಭರಣಗಳನ್ನ ತಯಾರಿಸಿ ಮಾರಬಹುದು.

ವಿವಿಧ ಪಾರ್ಟಿಗಳಿಗೆ ಗಿಫ್ಟ್ ತಯಾರಿಸುವುದು: ಒಂದೊಂದು ಪಾರ್ಟಿಗೆ ಒಂದೊಂದು ಗಿಫ್ಟ್‌ನ ಅವಶ್ಯಕತೆ ಇರುತ್ತದೆ. ಉದಾಹರಣೆಗೆ ಅಣ್ಣ ತಮ್ಮ ಅಥವಾ ಪ್ರಿಯಕರನ, ಗಂಡನ ಬರ್ತ್‌ಡೇ ಇದ್ದರೆ ಅದಕ್ಕೆ ತಕ್ಕ ಗಿಫ್ಟ್ ಕೊಡಬೇಕಾಗುತ್ತದೆ. ಹೆಂಡತಿ, ಸಖಿ, ಅಕ್ಕ-ತಂಗಿಯರ ಬರ್ತ್‌ಡೇ ಇದ್ರೆ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಉಡುಗೊರೆ ನೀಡಬೇಕಾಗುತ್ತದೆ. ಮಕ್ಕಳಿಗೆ, ಅಮ್ಮನಿಗೆ ಅಪ್ಪನಿಗೆ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಉಡುಗೊರೆ ನೀಡಬೇಕಾಗುತ್ತದೆ. ಹಾಗಾಗಿ ಎಲ್ಲರಿಗೂ ತಕ್ಕ ಹಾಗೆ ನೀಡಬಹುದಾದ ಬರ್ತ್‌ಡೇ ಗಿಫ್ಟ್‌ನ್ನ ತಯಾರಿಸಿ ಮಾರಬಹುದು.

ಬರ್ತ್‌ಡೇ ಕೇಕ್: ಬೇಕರಿ ಇಡಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಹಾಗಾಗಿ ಮನೆಯಲ್ಲಿ ಬರೀ ಬರ್ತ್‌ಡೇ ಕೇಕ್‌ ಅಷ್ಟೇ ಆರ್ಡರ್ ಪಡೆದು ಕೇಕ್ ರೆಡಿ ಮಾಡಿ ಕೊಟ್ಟರೂ ಒಳ್ಳೆಯ ಲಾಭ ಪಡಿಯಬಹುದು. ರುಚಿಕರ ಎಗ್‌ಲೆಸ್, ವಿತ್ ಎಗ್, ಚಾಕೊಲೇಟ್, ಡ್ರೈಫ್ರೂಟ್ಸ್ ಕೇಕ್, ಪ್ಲೇನ್ ಕೇಕ್, ಪ್ಲಮ್ ಕೇಕ್ ಹೀಗೆ ವಿವಿಧ ತರಹದ ಕೇಕ್‌ನ ಆರ್ಡರ್ ಪಡೆದು, ಬರ್ತ್‌ಡೇ, ಪಾರ್ಟಿ ಫಂಕ್ಷನ್‌ಗೆ ಕೇಕ್ ಮಾಡಿಕೊಡಬಹುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss