Monday, December 23, 2024

Latest Posts

ಸೋನು ಗೌಡ ದರ್ಶನ್ ಬಗ್ಗೆ ಹೀಗಾ ಹೇಳೋದು..?!

- Advertisement -

Film News:

ಚಾಲೆಂಜಿಂಗ್ ಸ್ಟಾರ್ ದರ್ಶನ್  ಅಂದ್ರೆ ಕರುನಾಡು ಮನೆ  ಮಗ ನಂತೆ  ಆರಾದನೆ ಮಾಡುತ್ತೆ  ಅಭಿಮಾನಿಗಳು ಡಿ ಬಾಸ್ ಅಂದ್ರೆ ದೇವರಂತೆ  ನೋಡ್ತಾರೆ. ಆದ್ರೆ  ಇದೀಗ  ಬಿಗ್  ಬಾಸ್ ಸ್ಪರ್ಧಿ  ಹೇಳಿರೋ  ಆ  ಒಂದು ಹೇಳಿಕೆಗೆ ಡಿ  ಬಾಸ್  ಅಭಿಮಾನಿಗಳು ಕೆರಳಿ  ಕೆಂಡವಾಗಿದ್ದಾರೆ.

ದರ್ಶನ್  ತೂಗುದೀಪ  ಅಂದ್ರೆ ಅಭಿಮಾನಿಗಳ ಪಾಲಿನ ಅಭಿಮಾನದ  ದೀಪ. ಚಾಲೆಂಜಿಂಗ್  ಸ್ಟಾರ್  ದರ್ಶನ್  ಅಂದ್ರೆ ಕರುನಾಡಿಗೆ  ಅದೇನೋ ಪ್ರೀತಿ  ಅದೇನೋ  ಅಭಿಮಾನ ತನ್ನ ಪ್ರೀತಿಯ ನಾಯಕನನ್ನು  ಆರಾಧಿಸೋ  ಕನ್ನಡಿಗರು  ಡಿ ಬಾಸ್  ಹೆಸರಿಗೆ ಕೊಂಚ ಚ್ಯುತಿ ಬಂದ್ರೂ ಸಹಿಸಲ್ಲ.

ಹೌದು ‘ಡಿ ಬಾಸ್’ ದರ್ಶನ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕೋಟಿ ಕೋಟಿ ಅಭಿಮಾನಿಗಳ ದೇವ್ರು.ಡಿ ಬಾಸ್ ದರ್ಶನ್ ಅವರನ್ನ ಜನ ಆರಾಧಿಸುತ್ತಾರೆ, ಗೌರವಿಸುತ್ತಾರೆ ಮತ್ತು ಪೂಜಿಸುತ್ತಾರೆ.ದರ್ಶನ್ ರೋಡಿಗಿಳಿದ್ರೆ ಸಾಕು ಲಕ್ಷ ಲಕ್ಷ ಅಭಿಮಾನಿಗಳು ಅವರಿಗೆ ಸುತ್ತುವರೆದು ತಮ್ಮ ಪ್ರೀತಿಯನ್ನ ಧಾರೆಯೆರೆಯುತ್ತಾರೆ. ಇಂತಹ ಅಭಿಮಾನಿಗಳು  ಇದೀಗ ಬಿಗ್  ಬಾಸ್  ಸ್ಟಾರ್  ಹೇಳಿಕೆಗೆ  ರೊಚ್ಚಿಗೆದ್ದಿದ್ದಾರೆ.

ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ, ಕಾಂಟ್ರವರ್ಸಿ  ಮೂಲಕನೇ  ಕರುನಾಡಿನಲ್ಲಿ  ಮನೆ ಮಾತಾಗಿರೋ  ಸ್ಟಾರ್ ಎಂದರೂ  ತಪ್ಪಾಗಲ್ಲ. ಹಾಗಂತ  ಬಿಗ್ ಬಾಸ್  ಮನೆಗೆ ಬಂದ ಮೇಲೆ ಸೋನು  ಗೌಡರನ್ನು  ಇಷ್ಟಪಡೋರಿದ್ದಾರೆ.ಆದ್ರೆ  ಅವರು ಹೇಳೋ  ಹೇಳಿಕೆಯನ್ನು ಮಾತ್ರ ಇದೀಗ  ಡಿ ಬಾಸ್ ಅಭಿಮಾನಿಗಳು ಖಂಡಿಸಿದ್ದಾರೆ.ಅಷ್ಟಕ್ಕೂ  ಸೋನು  ಡಿ ಬಾಸ್  ಬಗ್ಗೆ ಹೇಳಿದ್ದೇನು  ಗೊತ್ತಾ..?

ನಾನು ಡಿ ಬಾಸ್ ಅಭಿಮಾನಿ.  ನಂಗೂ ಡಿಬಾಸ್ ದರ್ಶನ್ ಅವರ ಜೊತೆ ಆ್ಯಕ್ಟಿಂಗ್ ಮಾಡ್ಬೇಕು ಅನ್ನೋ ಕನಸಿದೆ ಅಂತ ಹೇಳಿದ್ದಾರೆ..ಇಷ್ಟೇ ಅಲ್ದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರೋ ಸೋನು ಗೌಡ, ನಾನು ಡಿ ಬಾಸ್ ಥರ ಮಾತಾಡ್ತೀನಿ. ಯಾರಿಗೂ ಕೇರ್ ಮಾಡಲ್ಲ ಅನ್ನೋದನ್ನ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ..

ಇಷ್ಟೇ ಸಾಕಿತ್ತು  ಡಿ  ಬಾಸ್ ಅಭಿಮಾನಿ ಗಳು  ಸೋನು  ಗೌಡರನ್ನು  ತರಾಟೆಗೆ  ತೆಗೆದುಕೊಂಡಿದ್ದಾರೆ. ಆಕೆ ಆ  ಮಾತಿಗೆ  ವಿಧ ವಿಧವಾಗಿ  ಕಮೆಂಟ್ ಮೂಲಕನೇ ಸೋನು ಗೆ  ಬಿಸಿ  ಮುಟ್ಟಿಸಿದ್ದಾರೆ. ಡಿಬಾಸ್ ಅಭಿಮಾನಿಗಳು, ಸೋನು ಗೌಡಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ  ಮಾತ್ನಾಡಿರೋ ಸೋನುಗೌಡ, ಡಿ ಬಾಸ್ ಯಾರಿಗೂ ತಲೆಕೆಡಿಸಿಕೊಳ್ಳೋದಿಲ್ಲ.ಏನಿದ್ರೂ ನೇರವಾಗಿ ಹೇಳೋ ಮೂಲಕ ಜನ ಮನಗೆದ್ದಿದ್ದಾರೆ.  ನಂಗೆ ಒಂದು ದೊಡ್ಡ ಆಸೆ ಏನಪ್ಪಾ ಅಂದ್ರೆ, ಡಿ ಬಾಸ್ ಜೊತೆ ಹೀರೋಯಿನ್ ಆಗಿ ನಟನೆ ಮಾಡಬೇಕು ಅನ್ನೋ ಆಸೆಯನ್ನ ಸೋನುಗೌಡ ರಿವಿಲ್ ಮಾಡಿದ್ದಾರೆ. ಆದ್ರೆ  ಈ  ಆಸೆಗೆ  ಡಿ  ಬಾಸ್  ಅಭಿಮಾನಿ ಗಳು ಮಾತ್ರ ರೊಚ್ಚಿಗೆದ್ದಿದ್ದು, ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಾಧ್ಯವಾದ್ರೆ ನಿನ್ನ ಮೇಲಿರೋ ನೆಗೆಟಿವ್ ಟಾಕ್ ನಿಲ್ಲಿಸು, ನೀನು ಡಿ ಬಾಸ್ ಮುಂದೆ ಯಾವ ಲೆಕ್ಕಾ ಹೀಗೆ ಬೇರೇ ಬೇರೇಯದ್ದೇ ರೀತಿಯಲ್ಲಿ ಕಾಮೆಂಟ್ ಮಾಡೋ ಮೂಲಕ ಸೋನು ಗೌಡ ಮೇಲಿರೋ ಸಿಟ್ಟನ್ನ ಹೊರಹಾಕಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಜನ ಯಾಕೋ ಸೋನು ಗೌಡಗೆ ನೇರವಾಗಿ ಒಂದಷ್ಟು ಪ್ರಶ್ನೆ ಕೇಳೋ ಮೂಲಕ ಆಕೆಯ ಮೇಲಿರೋ ಸಿಟ್ಟನ್ನ ಹೊರಹಾಕುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಹೋದೆ ಅಂತ ಓವರ್ ಆಗಿ ಆಡ್ಬೇಡ  ಸೋನು ಗೌಡ ಅನ್ನೋದನ್ನ ಕೂಡ ಹೇಳುತ್ತಿದ್ದಾರೆ.

ಆಗಿದ್ದು ಆಗ್ಲಿ ಇನ್ನಾದ್ರೂ ಬದಲಾಗು ಒಳ್ಳೆ ಹೆಸ್ರು ತಗೋ ಅಂತ ಬುದ್ದಿವಾದ ಕೂಡ ಹೇಳುತ್ತಿದ್ದಾರೆ.ಆದ್ರೆ ಸೋನುಗೌಡ ಮಾತ್ರ  ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳೋದೆ ಇಲ್ಲ  ಅನ್ನೋ  ಹಾಗೆ  ನಾನು ಇರೋದೇ ಹೀಗೆ ನೋಡಿ. ಯಾರಿಗಾಗಿಯೂ ನಾನು ಬದಲಾಗಲ್ಲ  ನಂಗೆ ಹೇಗೆ ಬೇಕೋ ಹಾಗೆ ಇರುತ್ತೀನಿ ಅಂತ ಹೇಳುತ್ತಾರೆ. ಕಷ್ಟ ಅಂತ ಬಂದ್ರೆ ಯಾರೂ ನಮ್ಮ  ಬೆನ್ನಿಗೆ ನಿಲ್ಲೋದಿಲ್ಲ, ನಮಗೆ ನಾವೇ ಆಗ್ಬೇಕು.ನಾನು ತುಂಬಾ ರಿಚ್ ಇದ್ದೀನಿ, ನನ್ನ ತಾಯಿ ಕಡೆ ಎಲ್ಲಾರು ರಾಜಕೀಯದಲ್ಲಿ ಇದ್ದಾರೆ, ನಾನು ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡ್ತೀನಿ ಅಂತ ಹೇಳುತ್ತಾರೆ ಸೋನು ಗೌಡ.

ಏನೇ ಆಗಲಿ ಡಿಬಾಸ್ ಜೊತೆ ಆ್ಯಕ್ಟ್ ಮಾಡ್ಬೇಕು, ನಾನೂ ಕೂಡ ಡಿಬಾಸ್ ದರ್ಶನ್ ರೀತಿ ನೇರವಾಗಿ ಮಾತ್ನಾಡ್ತಿನಿ ಅನ್ನೋ ಹೇಳಿಕೆಗೆ ಡಿಬಾಸ್ ಫ್ಯಾನ್ಸ್  ಮಾತ್ರ   ರೊಚ್ಚಿಗೆದ್ದಿದ್ದು ಸತ್ಯ.

ಮಗು ಬಿಟ್ಟು ಬಂದಿದ್ದು ಸಂಬಂಧ ಬೆಳೋಸೋದಕ್ಕಲ್ಲ…?! ಮಯೂರಿ ಹೀಗಂದಿದ್ಯಾಕೆ..?!

ಎದೆ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡ ರಶ್ಮಿಕಾ ಅಭಿಮಾನಿ..?!

ಸಕ್ಕರೆ ನಾಡು ಮಂಡ್ಯದಲ್ಲಿ ‘ಕ್ರಾಂತಿ’ ಸಿಹಿ..?!

- Advertisement -

Latest Posts

Don't Miss