Friday, July 11, 2025

Latest Posts

ಸಕ್ಕರೆ ನಾಡು ಮಂಡ್ಯದಲ್ಲಿ ‘ಕ್ರಾಂತಿ’ ಸಿಹಿ..?!

- Advertisement -

Film News:

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾದ  ಪ್ರಚಾರ  ಸ ಕ್ಕರೆ  ನಾಡಿನಲ್ಲಿ   ಬಹಳ  ಅದ್ದೂರಿಯಾಗಿ  ನಡೆಯಲಿದೆಯಂತೆ. ಡಿ   ಬಾಸ್ ಅಭಿಮಾನಿಗಳಿಗೆ   ಹೀಗೊಂದು ಕರೆಯೋಲೆ  ಬಂದಿದೆ.

ಚಾಲೆಂಜಿಂಗ್  ಸ್ಟಾರ್ ದರ್ಶನ್  ಅಭಿನಯದ  ಮೋಸ್ಟ್ ಅ,ವೈಟೆಡ್ ಸಿನಿಮಾ  ಕ್ರಾಂತಿ  ಇದೀಗ  ಅಭಿಮಾನಿಗಳಿಂದಲೇ ಪ್ರಚಾರ ಗೈಯುತ್ತಿದೆ.   ಸಕ್ಕರೆ ನಾಡು  ಮಂಡ್ಯದಲ್ಲಿಯೂ   ಕ್ರಾಂತಿ  ಸಿನಿಮಾದ  ಪ್ರಚಾರ ಬಹಳ  ಅದ್ದೂರಿಯಾಗಿ ನಡೆಯಲಿದೆ.ಅದಕ್ಕೆ  ಸಕಲ ತಯಾರಿ  ಕೂಡಾ ಆಗಿದೆ.

“ಕ್ರಾಂತಿ” ಚಿತ್ರದ ಪ್ರಮೋಷನ್ ಅಭಿಮಾನಿಗಳಿಂದ 29.09.2022 ರಂದು ಮಂಡ್ಯದಲ್ಲಿ ನಡೆಯಲಿದ್ದು ಎಲ್ಲ ಡಿಬಾಸ್ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ ಎಂಬುವುದಾಗಿ  ಮಂಡ್ಯದ  ದಚ್ಚು ಅಭಿಮಾನಿಗಳು ಕರೆಯೋಲೆಯನ್ನು ನೀಡಿದ್ದಾರೆ.

ಮಂಡ್ಯ  ತಾಲೂಕಿನ ದರ್ಶನ್ ಸೇವಾ ಸಮಿತಿ  ರಿ  ವಿಭಿನನ್ನವಾದ ಫ್ಲಕ್ಸ್  ತಯಾರಿಸಿ  ವಿಶಿಷ್ಟ ಕೋಟ್ ಕೂಡಾ ನೀಡಿದೆ. ಕೃಷಿಯ ಉತ್ಪಾದನೆ  ಹೆಚ್ಚಿಸಲು  1965ರಲ್ಲಿ ಶುರುವಾದದ್ದು ಹಸಿರು ಕ್ರಾಂತಿ ಹಾಲು  ಡೈರಿ ಅ ಭಿವೃದ್ಧಿಗಾಗಿ 1970 ರಲ್ಲಿ ಶುರುವಾದದ್ದು  ಕ್ಷೀರ ಕ್ರಾಂತಿ ಸ್ವಾಭಿಮಾನದ ಛಲ  ಮತ್ತುಅಭಿಮಾನದ  ಬಲದಿಂದ 2022ರಲ್ಲಿ  ಶುರುವಾಗಿರೋದು ಡಿ ಬಾಸ್ ಕ್ರಾಂತಿ ಎಂಬುವುದಾಗಿ ಬರೆದುಕೊಂಡಿರೋದು ಇದೀಗ  ಡಿ  ಬಾಸ್  ಅಭಿಮಾನಿಗಳಿಗೆ  ಮತ್ತಷ್ಟು  ಖುಷಿ  ಕೊಟ್ಟಿದೆ.

ಇನ್ನು ಮಂಡ್ಯದಲ್ಲಿ ನಡೆಯಲಿರುವ ಕ್ರಾಂತಿ  ಪ್ರೊಮೋಷನ್  ಸಿಲ್ವರ್ ಜ್ಯೂಬಲಿ ಪಾರ್ಕ್ ನಿಂದ ಮಂ ಡ್ಯ ನಗರದ  ಪ್ರಮುಖ ರಸ್ತೆಗಳ  ಮೂಲಕ  ಹಾಗೆಯೇ ಸಿಎಂ ಕ್ರೀಡಾಂಗಣದ  ವರೆಗೆ ಮೆರವಣಿಗೆ  ಮೂಲಕ ಸಾಗಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ  ಈ  ವೇಳೆ  ಡಿ  ಬಾಸ್ ಕ್ರಾಂತಿ  ಚಿತ್ರದ  ಪೋಸ್ಟರ್ ಗೆ ಪೂಜೆ  ಮಾಡಿಸಿ ಡೊಳ್ಳು ಕುಣಿತ,ಪೂಜಾ  ಕುಣಿತ, ತಮಟೆ ಜೋಡೆತ್ತುಗಳ ಡಿಜೆ ರೈತರು ಮತ್ತು ಸೈನಿಕರ  ಭಾವ ಚಿತ್ರಗಳೊಂದಿಗೆ  ಅದ್ದೂರಿ  ಮೆರವಣಿಗೆ  ನಡೆಯಲಿದೆ ಎಂಬುವುದಾಗಿ  ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

ಒಟ್ಟಾರೆ ಸೆಪ್ಟೆಂಬರ್ 29  ಗುರುವಾರ  ಸಕ್ಕರೆ  ನಾಡು ಮಂಡ್ಯ  ಡಿ ಬಾಸ್  ಕ್ರಾಂತಿ  ಹವದಲ್ಲಿ  ಮತ್ತಷ್ಟು  ಸಿಹಿಯಾಗಲಿದೆ.

ದೇಶದಿಂದಾಚೆಗೂ ಡಿ ಬಾಸ್ ಕ್ರಾಂತಿ ಹವಾ..?!

ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕರಾವಳಿಯ ಸೋಶಿಯಲ್ ಮೀಡಿಯಾ ಸ್ಟಾರ್ ..!

ರವಿಚಂದ್ರನ್ ಮನೆ ಶಿಫ್ಟ್..!ಕಾರಣ ಬಹಿರಂಗ..?!

- Advertisement -

Latest Posts

Don't Miss