ಹಾಸನ : ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾತನಾಡಿದ್ದು, ಹಾಸನ ಜೆಡಿಎಸ್ ಟಿಕೇಟ್ ಗೊಂದಲದ ಬಗ್ಗೆ ಮಾತನಾಡಿದ್ದಾರೆ. ಹಾಸನ ಟಿಕೆಟ್ ಅನ್ನ ದೊಡ್ಡವರು ತೀರ್ಮಾನ ಮಾಡುತ್ತಾರೆ ಅದರ ಬಗ್ಗೆ ನಾವೇನು ಹೇಳೋದಕ್ಕೆ ಆಗಲ್ಲ ಎಂದಿದ್ದಾರೆ.
ಪ್ರತಿ ವರ್ಷ ನಮ್ಮ ಮನೆ ದೇವರಾದ ಆನೆಕೆರೆಯಮ್ಮ ದೇವಾಲಯಕ್ಕೆ ಪೂಜೆ ಸಲ್ಲಿಸುತ್ತೇವೆ. ನಮ್ಮ ತಾತ ಮತ್ತು ನಮ್ಮ ಹಿರಿಯರು ಎಲ್ಲರೂ ಈ ದೇವಾಲಯಕ್ಕೆ ನಡೆದುಕೊಂಡು ಬರುತ್ತಿದ್ದಾರೆ. ಅದರಂತೆ ಇವತ್ತು ರೇವಣ್ಣನವರು ಭಾವಾನಿ ಅಕ್ಕನವರು ನಾನು ಕೂಡ ದೇವಾಲಯಕ್ಕೆ ಆಗಮಿಸಿದ್ದೇವೆ. ನಮ್ಮ ಗ್ರಾಮಸ್ಥರಿಗೆ ಮತ್ತು ರೈತ ವರ್ಗಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಸೂರಜ್ ಹೇಳಿದ್ದಾರೆ.
ಎಚ್ ಡಿ ದೇವೇಗೌಡರು ಮಾಜಿ ಸಚಿವ ಎಚ್ ಡಿ ರೇವಣ್ಣ ಭೇಟಿಯಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೂರಜ್, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ನಾನು ಜಾತ್ರಾ ಮಹೋತ್ಸವದಲ್ಲಿ ಬ್ಯುಸಿಯಾಗಿದ್ದೆ ಎಂದಿದ್ದಾರೆ. ಇನ್ನು ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸೂರಜ್, ನಾನು ಟಿವಿನೇ ಹಾಕ್ತಾ ಇಲ್ಲ. ಅದರ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಉದ್ದೇಶ ಏನೆಂದರೆ ನಮ್ಮ ತಾಲೂಕಿನಲ್ಲಿ ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಿಸಿಕೊಳ್ಳಬೇಕು. ಅಭಿವೃದ್ಧಿ ಮಂತ್ರವನ್ನು ಇಟ್ಟುಕೊಂಡು ಜನರ ಬಳಿ ಹೋಗಿ ಎಂದು ರೇವಣ್ಣನವರು ಹೇಳಿದ್ದಾರೆ. ಅವರು ನೀಡಿರುವ ಸೂಚನೆಯಂತೆ ನಾವು ಜನರ ಬಳಿ ಹೋಗಿ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ ಎಂದು ಸೂರಜ್ ಸ್ಪಷ್ಟನೆ ನೀಡಿದ್ದಾರೆ.
ಹಾಸನ ಟಿಕೆಟ್ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೂರಜ್, ಅದು ನನಗೆ ಗೊತ್ತಿಲ್ಲ. ಅದನ್ನ ರೇವಣ್ಣನವರ ಬಳಿ ಕೇಳಬೇಕು. ನಾವು ಜಿಲ್ಲೆಯ ಎಲ್ಲಾ ಕ್ಷೇತ್ರಗಳನ್ನು ಫೋಕಸ್ ಮಾಡುತ್ತೇವೆ. ಹಾಸನ ಕ್ಷೇತ್ರವನ್ನು ನೋಡಲು ತಾಲೂಕಾಗಿ ತೆಗೆದುಕೊಂಡಿದ್ದೇನೆ ಅದಕ್ಕಾಗಿ ಹೆಚ್ಚಿನ ಅನುದಾನವನ್ನು ಕೂಡ ಬಿಡುಗಡೆ ಮಾಡಿಸಿದ್ದೇನೆ. ಹಾಸನ ತಾಲೂಕಿಗೆ ಅಭಿವೃದ್ಧಿ ಕೆಲಸಗಳನ್ನು ಕೂಡ ನಾನು ಮಾಡುತ್ತಿದ್ದೇನೆ. ನಮ್ಮ ಜವಾಬ್ದಾರಿಯನ್ನು ನಾವು ಮಾಡಿದ್ದೇವೆ. ಇನ್ನು ಜನರು ತೀರ್ಮಾನ ಮಾಡಬೇಕು ಅಷ್ಟೇ. ಅಭ್ಯರ್ಥಿಯನ್ನ ದೊಡ್ಡವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡದೇ, ಜಾಣನಡೆ ತೋರಿಸಿದ ಸೂರಜ್, ಸಾಮಾನ್ಯ ಕಾರ್ಯಕರ್ತ ಅಂದ್ರೆ ನನಗೆ ಅದರ ಅರ್ಥವೇ ಗೊತ್ತಾಗುತ್ತಿಲ್ಲ ಎಂದು ಮುಗುಳ್ನಕ್ಕಿದ್ದಾರೆ.
‘ಕಾದು ನೋಡುತ್ತೇನೆ, ಟಿಕೆಟ್ ಸಿಗದಿದ್ದರೆ ನಮ್ಮ ಕಾರ್ಯಕರ್ತರ ತೀರ್ಮಾನಕ್ಕೆ ನಾನು ಬದ್ಧ’
‘ಯಾರಿಗೆ, ಯಾವಾಗ ಏನೇನ್ ಬೇಕೋ ಅದನ್ನ ಹೇಳ್ತಾರೆ’: ಗೋಪಾಲಕೃಷ್ಣ ವಿರುದ್ಧ ಬಾಬು ಗರಂ