Friday, April 25, 2025

Latest Posts

Soujanya Case: ಸೌಜನ್ಯ ಕೇಸ್‌ನಲ್ಲಿ ಸಂತೋಷ್ ರಾವ್ ಆರೋಪಿಯಲ್ಲದಿದ್ದರೆ ಮತ್ಯಾರು ಆರೋಪಿ..?

- Advertisement -

Manglore News: ಧರ್ಮಸ್ಥಳ ಸೌಜನ್ಯ ಕೇಸ್ ನಡೆದು 12 ವರ್ಷಗಳೇ ಆಗಿದೆ. ಆದರೆ ಆ ಘಟನೆಯ ನೆನಪು ಇನ್ನೂ ಮಾಸಿಲ್ಲ. ಪದೇ ಪದೇ ಈ ಕೇಸ್ ವಿಚಾರಣೆಯಾಗುತ್ತಿದ್ದು, ಮುಚ್ಚಿಹೋದ ಕೇಸ್ನ್ನು ರಿಓಪನ್ ಮಾಡಿಸಿ, ತನಿಖೆ ನಡೆಸಲಾಗುತ್ತಿದೆ. ಈ ನಡುವೆ ಕೆಲವು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸೌಜನ್ಯಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಕಡೆಯವರೇ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆಂದು ಹೇಳುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸಮೀರ್ ಎಂಬ ಯೂಟ್ಯೂಬರ್ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಹೆಸರು ಹೇಳದೇ, ಗೌಡರು ಎನ್ನುವ ಪದ ಬಳಸಿ, ಸೌಜನ್ಯ ಕೊಲೆ ಪ್ರಕರಣದ ವೀಡಿಯೋ ಹರಿಬಿಟ್ಟಿದ್ದ. ಕೆಲ ದಿನಗಳಲ್ಲೇ ಆ ವೀಡಿಯೋ ಡಿಲೀಟ್ ಮಾಡಿಸಲಾಗಿತ್ತು. ಇದೀಗ ಇನ್ನೊಂದು ಚಾನೆಲ್ನವರು ಇನ್ನೊಂದು ವೀಡಿಯೋ ಹರಿಬಿಟ್ಟು, ಇಲ್ಲಿ ಬೇರೆಯದ್ದೇ ಕಥೆ ಹೇಳುತ್ತಿದ್ದಾರೆ.

ನವಪರ್ವ ಎಂಬ ಯೂಟ್ಯೂಬ್ ಚಾನೆಲ್ನವರು ಈ ವೀಡಿಯೋ ಹರಿಬಿಟ್ಟಿದ್ದು, ಇಲ್ಲಿ ಧರ್ಮಾಧಿಕಾರಿಗಳ ಪರ ಇರುವಂತೆ ಇವರು ವೀಡಿಯೋ ಮಾಡಿದ್ದು, ಮಹೇಶ್ ತಿಮರೊಡಿ ಅನ್ಯಾಯದ ವಿರುದ್ಧ ಎನ್ನುವ ಹೆಸರಿನಲ್ಲಿ ದುಡ್ಡು ಮಾಡಿದ್ದಾನೆಂದು ಆರೋಪಿಸಲಾಗಿದೆ. ಹಾಗಾದ್ರೆ ಈ ನವಪರ್ವ ಚಾನೆಲ್ನವರು ಹರಿಬಿಟ್ಟ ವೀಡಿಯೋದಲ್ಲಿ ಅಂಥದ್ದೇನಿದೆ ಅಂತಾ ಇಲ್ಲಿ ಹೇಳಿದ್ದೇವೆ ನೋಡಿ.

ಕೆಡ್ಡಸದ ದಿನವೇ ನಡೆದಿತ್ತು ಸೌಜನ್ಯಳ ಅತ್ಯಾಚಾರ

ಹೊಸ ಅಕ್ಕಿ ಅನ್ನ ಉಣ್ಣುವ ಆಸೆಯಲ್ಲಿದ್ದ ಮಗಳು ಸೇರಿದ್ದು ಮಸಣ

ಅತ್ಯಂತ ಹೀನಾಯ ಸ್ಥಿತಿಯಲ್ಲಿ ಸಿಕ್ಕಿತು ಸೌಜನ್ಯಳ ಮೃತದೇಹ

12 ವರ್ಷಗಳ ಹಿಂದೆ ಅಕ್ಟೋಬರ್ 9ನೇ ತಾರೀಖು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಡ್ಡಸದ ಸಂಭ್ರಮ. ಭೂಮಿ ತಾಯಿ ಮೈ ನೆರೆದು ಆಕೆಯನ್ನು ಮೀಯಿಸುವ ದಿನವನ್ನೇ ಕೆಡ್ಡಸ ಎಂದು ಕರೆಯುತ್ತಾರೆ. ಈ ದಿನ ತುಳುವರು ಹೊಸ ಅಕ್ಕಿ ಊಟ ಮಾಡುವ ಪದ್ಧತಿ ಇದೆ. ಅದೇ ರೀತಿ ಸೌಜನ್ಯ ಕೂಡ ಕಾಲೇಜಿಗೆ ಹೊರಟು ನಿಂತು, ಮಧ್ಯಾಹ್ನ ಹೊಸ ಅಕ್ಕಿ ಊಟ ಮಾಡಲು ಬರುತ್ತೇನೆ ಎಂದು ಹೊರಟಿದ್ದಳು.
ಆದರೆ 4 ಗಂಟೆಗೆ ಮನೆಯಲ್ಲಿ ಇರುತ್ತಿದ್ದ ಮಗಳು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಸೌಜನ್ಯಳ ಅಮ್ಮ ಕುಸುಮ ತಮ್ಮ ಪತಿ ಮತ್ತು ಸಹೋದರನಿಗೆ ವಿಷಯ ತಿಳಿಸಿದ್ದಾರೆ. ರಾತ್ರಿಯವರೆಗೂ ಹುಡುಕಿ, ಬಳಿಕ ಪೊಲೀಸ್ ಕಂಪ್ಲೆಂಟ್ ಕೊಡಲಾಗಿದೆ. ಪೊಲೀಸರು ತನಿಖೆ ಕೈಗೊಂಡಾಗ, ಸೌಜನ್ಯಳನ್ನು ಅತ್ಯಾಚಾರವೆಸಗಿ, ಕೊಲೆ ಮಾಡಲಾಗಿದೆ ಎಂಬ ಸತ್ಯ ಬಯಲಿಗೆ ಬಂದಿತ್ತು.

ಪೊಲೀಸರ ಕೈಗೆ ಆರೋಪಿಯಾಗಿ ಸಿಕ್ಕಿದ್ದ ಸಂತೋಷ್ ರಾವ್

ಮಾನಸಿಕ ಅಸ್ವಸ್ಥನಾಗಿದ್ದರೂ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯ ಹೊಂದಿದ್ದ ಆರೋಪಿ

ಬಳಿಕ ಪೊಲೀಸರು ಘಟನೆ ನಡೆದ ಜಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸಂತೋಷ್ ರಾವ್ ನನ್ನು ಅರೆಸ್ಟ್ ಮಾಡಿ, ವಿಚಾರಣೆ ನಡೆಸಿದ್ದಾರೆ. ಬಳಿಕ ಆತ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಹೇಳಿ, ಕಳೆದ ವರ್ಷವಷ್ಟೇ ಕೋರ್ಟ್ ತೀರ್ಪು ಕೊಟ್ಟು, ಸಂತೋಷ್ ರಾವ್ನನ್ನು ರಿಲೀಸ್ ಮಾಡಿತ್ತು. ಆದರೆ ಸಂತೋಷ್ ರಾವ್ ಮಾನಸಿಕ ಅಸ್ವಸ್ಥನಾಗಿದ್ದರೂ, ಆತ ಲೈಂಗಿಕ ಕ್ರಿಯೆ ನಡೆಸುವ ಶಕ್ತಿ ಹೊಂದಿದ್ದ ಎಂದು ರಿಪೋರ್ಟ್ನಲ್ಲಿ ಹೇಳಲಾಗಿದೆ.

ಅಚಾನಕ್ ಆಗಿ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದ ಮಹೇಶ್ ಶೆಟ್ಟಿ

ಅಂದು ಸಂತೋಷ್ ಆರೋಪಿ ಎಂದು ಹೇಳಿ, ಇಂದು ಆತ ಅಮಾಯಕ ಎಂದಿದ್ದ ತಿಮರೊಡಿ

ಧರ್ಮಾಧಿಕಾರಿಗಳ ಹೆಸರು ಕೆಡಿಸಲು ನಡೆದಿದೆಯಾ ಸಂಚು..?

ಇನ್ನು ಸಂತೋಷ್ ರಾವ್ ಅರೆಸ್ಟ್ ಆಗಿದ್ದ ವೇಳೆ, ಈ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದ ಮಹೇಶ್ ಶೆಟ್ಟಿ ತಿಮರೊಡಿ, ಧರ್ಮಸ್ಥಳ ಧರ್ಮಾಧಿಕಾರಿ ಕುಟುಂಬಕ್ಕೆ ಸೇರಿದವರೇ ಅತ್ಯಾಚಾರ ಮತ್ತು ಕೊಲೆ ಮಾಡಿರುವುದಾಗಿ ಹೇಳಿ, ಪ್ರತಿಭಟನೆಗೆ ಮುಂದಾದರು. ಹೀಗೆ ಧರ್ಮಸ್ಥಳದ ಧರ್ಮಾಧಿಕಾರಿಗಳ ಕುಟುಂಬದ ವಿರುದ್ಧ ಹಲವು ಮಾತುಗಳನ್ನು ಹೇಳಿ, ಜನರನ್ನು ನಂಬಿಸಿ, ಹೋರಾಟಕ್ಕೆ ಬಲ ಸಿಗುವಂತೆ ಮಾಡಲಾಯ್ತು.

ಆದರೆ ಇದೀಗ ಸೌಜನ್ಯ ವಿರುದ್ಧ ಹೋರಾಡುತ್ತಿರುವ ತಿಮರೊಡಿ, ಖುದ್ದು ಮಾಧ್ಯಮದ ಎದುರು ಹಲವು ವರ್ಷಗಳ ಹಿಂದೆ ಹೇಳಿದ ಮಾತೇನಂದ್ರೆ, ಸಂತೋಷ್ ರಾವ್ ಕೂಡ ಸೌಜನ್ಯ ಕೇಸ್ನಲ್ಲಿ ಓರ್ವ ಆರೋಪಿಯಾಗಿದ್ದು, ಆತ ಮತ್ತು ಅವನ ಜೊತೆ ಇರುವವರು ಸೇರಿ, ಸೌಜನ್ಯಳನ್ನು ಯಾವ ರೀತಿ ರೇಪ್ ಮಾಡಿದ್ದೇವೆಂದು ಅವರು ಪತ್ರಿಕೆ ಎದುರು, ಜೈಲಿನಲ್ಲಿದ್ದ ಸಹಚರರೊಂದಿಗೆ ಹೇಳಿಕೊಂಡಿದ್ದಾನೆಂದು ಹೇಳಿದ್ದರು.

ಒಂದೇ ಅಕೌಂಟ್ನಿಂದ ಮಹೇಶ್ ಶೆಟ್ಟಿ ಮತ್ತು ಕುಸುಮಾಗೆ ಬಂದಿತ್ತಾ ಹಣ..?

ಆದರೆ ಇತ್ತೀಚಿನ ದಿನಗಳಲ್ಲಿ ಮಹೇಶ್ ತಿಮರೊಡಿ ಸಂತೋಷ್ ರಾಾವ್ ಆರೋಪಿಯೇ ಅಲ್ಲವೆಂದು ಹೇಳಿದ್ದಾರೆ. ಮೊದಲೆಲ್ಲ ಹೇಳಿದ ಮಾತಿಗೂ, ಇಂದಿನ ಮಾತಿಗೂ ಭಾರೀ ವ್ಯತ್ಯಾಸವಿದ್ದು, ಧರ್ಮಾಧಿಕಾರಿಗಳ ಹೆಸರನ್ನು ಕೆಡಿಸಬೇಕೆಂಬ ಉದ್ದೇಶದಿಂದಲೇ, ಈ ಹೋರಾಟ ಮಾಡುತ್ತಿದ್ದಾರಾ ಅನ್ನೋ ಅನುಮಾನ ಬರುವುದು ಸಹಜ. ಅಲ್ಲದೇ, ಧರ್ಮಾಧಿಕಾರಿಗಳ ಹೆಸರನ್ನು ಕೆಡಿಸಬೇಕೆಂದು ಕೆಲವರು ಮಹೇಶ್ ಮತ್ತು ಸೌಜನ್ಯ ತಾಯಿ ಕುಸುಮಾ ಅವರಿಗೆ ಹಣ ನೀಡಿದ್ದಾರೆಂಬ ಆರೋಪವೂ ಇದೆ. ಒಂದೇ ಅಕೌಂಟ್ನಿಂದ ಇಬ್ಬರಿಗೂ ಹಣ ಹೋಗಿದೆ ಎಂದು ಹೇಳಲಾಗಿದೆ.

ಈ ಮಾತು ಹೇಳುತ್ತಿರುವುದು ಏಕೆಂದರೆ, ಪ್ರಕರಣ ನಡೆದು ಎರಡರಿಂದ ಮೂರು ವರ್ಷಗಳವರೆಗೆ ಯಾರ ಬಗ್ಗೆಯೂ ಅನುಮಾನ ಮೂಡುವುದಿಲ್ಲ. ಬದಲಾಗಿ ಸಂತೋಷ್ ರಾವ್ ಆರೋಪಿ ಎಂದೇ ಎಲ್ಲರಿಗೂ ಹೇಳಲಾಗಿದೆ. ಆದರೆ ಎರಡ್ಮೂರು ವರ್ಷದ ಬಳಿಕ ಅಚಾನಕ್ ಆಗಿ ಧರ್ಮಾಧಿಕಾರಿ ಕಡೆ ಹುಡುಗರೇ ಈ ಕೆಲಸ ಮಾಡಿದ್ದಾರೆಂಬ ಆರೋಪ ಕೇಳಿಬರುತ್ತದೆ. ಹೀಗಾಗಿ ಇಲ್ಲಿ ಮಹೇಶ್ ಶೆಟ್ಟಿ ತಿಮರೊಡಿ ನಡೆ ಬಗ್ಗೆ ಹಲವರಿಗೆ ಅನುಮಾನ ಮೂಡುವದು ಸಹಜ.

ಧರ್ಮಾಧಿಕಾರಿಗಳ ಕಡೆಯ ಹುಡುಗರೆಂದರೆ, ಉದಯ್ ಜೈನ್, ಮಲ್ಲಿಕ್ ಜೈನ್, ಧೀರಜ್ ಜೈನ್ . ಇವರ ವಿರುದ್ಧ ಸಮನ್ಸ್ ಜಾರಿ ಮಾಡಿ, ಪರೀಕ್ಷೆ ನಡೆಸಿ, ತನಿಖೆಯೂ ಮಾಡಲಾಯಿತು. ಆದರೆ ಇವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳೂ ಸಿಗಲಿಲ್ಲ. ಹಾಗಾಗಿ ಇವರನ್ನು ನಿರಪರಾಧಿಗಳು ಎಂದು ಬಿಟ್ಟು ಕಳುಹಿಸಲಾಯಿತು. ಕಳೆದ ವರ್ಷ ಸಂತೋಷ್ ರಾವ್ ರಿಲೀಸ್ ಆದ ಬಳಿಕ ಧೀರಜ್, ಮಲ್ಲಿಕ್, ಉದಯ್ ಮೂರು ಜನ ದೈವಸ್ಥಾನ ವೊಂದರ ಬಳಿ ಬಂದು, ತಾವು ಸೌಜನ್ಯ ಕೇಸ್ನಲ್ಲಿ ಯಾವುದೇ ತಪ್ಪು ಮಾಡಿಲ್ಲ. ಆದರೆ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ. ಈ ರೀತಿಯಾಗಿ ನವಪರ್ವ ಯೂಟ್ಯೂಬ್ ಚಾನೆಲ್ನವರು ವೀಡಿಯೋ ಮಾಡಿ, ಇದು ಸತ್ಯ ಸಂಗತಿ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಈ ಕೇಸ್ನಲ್ಲಿ ಯಾರು ಆರೋಪಿ, ಕೊಲೆ ಮಾಡಿರುವುದು ಯಾರು ಎಂದೂ ಇದುವರೆಗೂ ತಿಳಿದು ಬಂದಿಲ್ಲ. ಸೌಜನ್ಯಳನ್ನು ಯಾರು ಕಿಡ್ನ್ಯಾಪ್ ಮಾಡಿ, ವಿಕೃತವಾಗಿ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾರೆಂದು, ಆ ಆರೋಪಿಗಳಿಗೆ, ಸೌಜನ್ಯಳಿಗೆ ಮತ್ತು ಆ ದೇವರಿಗಷ್ಟೇ ಗೊತ್ತು. ಆರೋಪಿಗಳು ಆದಷ್ಟು ಬೇಗ ಸಮಾಜನ ಮುಂದೆ ಬಂದು, ಅವರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿ ಎಂಬುದಷ್ಟೇ ನಮ್ಮ ಆಶಯ.

- Advertisement -

Latest Posts

Don't Miss