Tuesday, July 15, 2025

Latest Posts

ಸಾರಿಗೆಯಲ್ಲಿ ಅಂಧರಿಗಾಗಿ ಧ್ವನಿ ಸ್ಪಂದನ : ನಗರ ಸಾರಿಗೆ ಬಸ್‌ಗಳಲ್ಲಿ ಧ್ವನಿ ಸ್ಪಂದನ!

- Advertisement -

ಕರ್ನಾಟಕ ಸಾರಿಗೆ ವತಿಯಿಂದ ಅಂಧತ್ವ ಸಮಸ್ಯೆ ಇರುವವರಿಗೆ ಬಸ್‌ ಏರಲು ಯಾವುದೇ ಸಮಸ್ಯೆಯಾಗದಂತೆ ಧ್ವನಿ ಸ್ಪಂದನ ಸಾರಿಗೆ ವಿಶೇಷವಾದ ಸೇವೆಯನ್ನು ಜಾರಿಗೆ ತಂದಿದೆ. ಇದಕ್ಕೆ ಪೂರಕವೆಂಬಂತೆ ಇಂದು ಮೈಸೂರಿನ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್‌ಗಳಲ್ಲಿ ಧ್ವನಿ ಸ್ಪಂದನ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.

ಅಂಧತ್ವ ಸಮಸ್ಯೆಯುಳ್ಳವರು ವಿಶೇಷ ಸಾಧನದ ಮೂಲಕ ಯಾರ ನೆರವು ಇಲ್ಲದಂತೆ ಬಸ್ ಏರಲು ಇದರಿಂದ ಸಾಧ್ಯವಾಗಲಿದೆ. ಬೆಂಗಳೂರಿನ 125 ಬಸ್‌ಗಳಲ್ಲಿ ಈಗಾಗಲೇ ಅಳವಡಿಸಿ ಬಳಸುತ್ತಿದ್ದು, ಇದೀಗ ಮೈಸೂರಿನ 200 ಬಸ್‌ಗಳಲ್ಲಿ ಚಾಲನೆ ನೀಡಲಾಗಿದೆ. ಮುಂದೆ ಕೆಎಸ್‌ಆರ್‌ಟಿಸಿಯ 7 ಸಾವಿರ ಬಸ್ ಗಳಲ್ಲೂ ಹಂತಹಂತವಾಗಿ ಅಳವಡಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮುಂದೆ ಹೊಸತಾಗಿ ಖರೀದಿಸುವ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ನಿರ್ಮಾಣ ಹಂತದಲ್ಲೇ ಈ ಸಾಧನ ಅಳವಡಿಕೆಗೆ ಸೂಚಿಸಲಾಗುವುದು ಎಂದಿದ್ದಾರೆ. ಇನ್ನು ಶಾಸಕರಾದ ಜಿ.ಟಿ. ದೇವೇಗೌಡ, ತಸ್ವೀರ್ ಸೇರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಈ ಕಾರ್ಯಕ್ರಮಕ್ಕೆ ಸಾಥ್‌ ನೀಡಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss