Friday, October 18, 2024

Latest Posts

ಸೌರವ್ ಘೋಷಾಲ್ಗೆ ಐತಿಹಾಸಿಕ ಕಂಚು

- Advertisement -

ಬರ್ಮಿಂಗ್ಹ್ಯಾಮ್: ಭಾರತದ ಅಗ್ರ ಸ್ಕ್ವಾಶ್ ಆಟಗಾರ ಸೌರವ್ ಘೋಷಾಲ್ ಕಂಚಿನ ಪದಕ ಗೆದ್ದಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದ ಸ್ಕ್ವಾಶ್ನ ಸಿಂಗಲ್ಸ್ ವಿಭಾಗದಲ್ಲಿ ಭಾರತಕ್ಕೆ ದೊರೆತ ಮೊದಲ ಪದಕವಾಗಿದೆ.

ಕಂಚಿನ ಪದಕದ ಪಂದ್ಯದಲ್ಲಿ ಇಂಗ್ಲೆಂಡ್ನ ಜೇಮ್ಸ್ ವಿಲ್ಸ್ಟ್ರೀಪ್ ವಿರುದ್ಧ 11-6, 11-1, 11-4 ಅಂತರದಲ್ಲಿ ಗೆಲುವು ಸಾಸಿದರು. ಸೌರವ್ 2018ರ ಕಾಮನ್ವೆಲ್ತ್ ಗೇಮ್ಸ್ನ ಮಿಶ್ರ ಡಬಲ್ಸ್ನಲ್ಲಿ ಬೆಳ್ಳಿ ಗೆದ್ದಿದ್ದರು.

2022ರ ವಿಶ್ವ ಡಬಲ್ಸ್ ಚಾಂಪಿಯನ್ಶಿಪ್ ಕೂಟದಚ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದರು, 2016ರ ಕೂಟದ ಮಿಶ್ರ ಡಬಲ್ಸ್ನಲ್ಲಿ ಬೆಳ್ಳಿ ಪದಕ, 2014ರ ಏಷ್ಯನ್ ಗೇಮ್ಸ್ನ ತಂಡ ವಿಭಾಗದಲ್ಲಿ ಚಿನ್ನ, ಸಿಂಗಲ್ಸ್ನಲ್ಲಿ ಬೆಳ್ಳಿ, 2010,2006, 2018ರ ಏಷ್ಯನ್ ಗೇಮ್ಸ್ನ ಸಿಂಗಲ್ಸ್ನಲ್ಲಿ ಕಂಚು, 2010, 2018ರಲ್ಲಿ ತಂಡ ವಿಭಾಗದಲ್ಲಿ ಕಂಚು, 2004ರ ವಿಶ್ವ ಡಬಲ್ಸ್ ಚಾಂಪಿಯನ್ಶಿಪ್ನ ಕೂಟದ ಪುರುಷರ ಡಬಲ್ಸ್ನಲ್ಲಿ ಬೆಳ್ಳಿ ಗೆದ್ದಿದ್ದಾರೆ.

- Advertisement -

Latest Posts

Don't Miss