ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಕುರಿತಾಗಿ ಸ್ಪೀಕರ್ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಅನ್ನೋ ಆರೋಪಕ್ಕೆ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಬಿಜೆಪಿಯವರು ಅವಸರ ಯಾಕೆ ಅಂತ ಪ್ರಶ್ನಿಸಿದ್ದಾರೆ.
ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಶಾಸಕರ ರಾಜೀನಾಮೆ ಅಂಗೀಕರಿಸೋ ವಿಚಾರದಲ್ಲಿ ಪಕ್ಷದ ನಾಯಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಅನ್ನೋ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ರಾಜೀನಾಮೆ ಅಂಗೀಕಾರ ಮಾಡಿ ಅಂತ ಹೇಳ್ತಿರೋ ಬಿಜೆಪಿಯವರಿಗೆ ಅಷ್ಟು ಅವಸರ ಮಾಡುತ್ತಿರುದಾದ್ರೂ ಯಾಕೆ ಅಂತ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಹಿಂದೆ ಇಂಥಹ ಪರಿಸ್ಥಿತಿ ಎದುರಾದಾಗ ಒಂದು ತಿಂಗಳು ಕಳೆದಿರುವ ಉದಾಹರಣೆಯೂ ಇದೆ. ಆದ್ರೆ ಇಷ್ಟು ಆತುರ ಮಾಡುತ್ತಿರೋ ಬಿಜೆಪಿಯವರಿಗೆ 1 ವಾರದಲ್ಲಿ ಮಾಡುವಂತಹ ಕೆಲಸವಾದ್ರೂ ಏನಿದೆ ಅಂತ ಮರು ಪ್ರಶ್ನೆ ಮಾಡಿದ್ರು.
ಇನ್ನು ಜನಸಾಮಾನ್ಯರು ಅವರ ಪಾಡಿಗೆ ಇದ್ದಾರೆ, ನಾನು ನನ್ನ ಕುಟುಂಬದೊಂದಿಗೆ ಮನೆಯಲ್ಲಿದ್ದೇನೆ. ವಿಧಾನಸೌಧದ ನನ್ನ ಕಚೇರಿಯಲ್ಲಿ ನನ್ನನ್ನು ಭೇಟಿ ಮಾಡಬಹುದು. ವಿಧಾನಸಭಾ ಅಧಿವೇಶನ ಮುಂದೂಡಲು ನಾನು ಅವಕಾಶ ನೀಡುವುದಿಲ್ಲ ಅಂತ ಸ್ಪೀಕರ್ ರಮೇಶ್ ಕುಮಾರ್ ಇದೇ ವೇಳೆ ಸ್ಪಷ್ಟನೆ ನೀಡಿದ್ರು.
ಸ್ಪೀಕರ್ ನಿರ್ಧಾರಕ್ಕೆ ಅಪಸ್ವರ ಯಾಕೆ..?ಮಿಸ್ ಮಾಡದೇ ಈ ವಿಡಿಯೋ ನೋಡಿ