ಈ ಬಾರಿ ರಕ್ಷಿತ್ ಶೆಟ್ಟಿ ಬರ್ತ್‌ಡೇಗೆ ಚಾರ್ಲಿ 777 ಚಿತ್ರತಂಡ ಸ್ಪೆಶಲ್ ಗಿಫ್ಟ್ ಕೊಡಲು ಸಿದ್ಧವಾಗಿದೆ. ಈ ಬಗ್ಗೆ ಸ್ವತಃ ರಕ್ಷಿತ್ ಶೆಟ್ರೇ ಇನ್‌ಸ್ಟಾಗ್ರಾಮ್‌ನಲ್ಲಿ ಕ್ಲೂ ಕೊಟ್ಟಿದ್ದಾರೆ.
ಲೈಫ್ ಆಫ್ ಧರ್ಮಾ ಎಂಬ ಶೀರ್ಷಿಕೆ ಇರುವ ಪೋಸ್ಟರ್ ಒಂದನ್ನ ರಕ್ಷಿತ್ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸರ್ಪ್ರೈಸ್‌ಗಾಗಿ ಕಾತುರನಾಗಿದ್ದೇನೆ ಎಂದಿದ್ದಾರೆ.
ಕಿರಣ್. ರಾಜ್. ಕೆ ನಿರ್ದೇಶನದ ಚಾರ್ಲಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಧರ್ಮ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಒಂದು ಮೊಟ್ಟೆ ಕಥೆ ಖ್ಯಾತಿಯ ರಾಜ್.ಬಿ.ಶೆಟ್ಟಿ ಡಾ.ಅಶ್ವಿನ್ ಕುಮಾರ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ನಾಯಿಯ ಹೆಸ್ರು ಚಾರ್ಲಿ ಆದ್ರೆ, ನಟಿ ಸಂಗೀತಾ ದೇವಿಕಾ ಎಂಬ ಪಾತ್ರ ನಿರ್ವಹಿಸಿದ್ದಾರೆ.
ಕಳೆದ ವರ್ಷ ಸಖತ್ ಹವಾ ಕ್ರಿಯೇಟ್ ಮಾಡಿದ್ದ ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ರಿಲೀಸ್ ಮಾಡಿ, ರಕ್ಷಿತ್ ಶೆಟ್ಟಿಗೆ ಬರ್ತ್‌ಡೇ ಸರ್ಪ್ರೈಸ್ ಕೊಡಲಾಗಿತ್ತು.