- Advertisement -
www.karnatakatv.net : ರಾಯಚೂರು: ಪುಷ್ಯಾರ್ಕ ಯೋಗದ ನಿಮಿತ್ತ ಮಂತ್ರಾಲಯದ ಶ್ರೀ ಮಠದಲ್ಲಿ ಇಂದು ವಿಶೇಷ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ವಿದ್ಯಾಪೀಠದ ಪಂಡಿತರು, ವಿದ್ಯಾರ್ಥಿಗಳು, ಭಕ್ತರಿಂದ ಶ್ರೀ ರಾಘವೇಂದ್ರ ಸ್ತೋತ್ರ ಅಷ್ಟೋತ್ತರ ಪಾರಾಯಣ ನಡೆಯಿತು . ನಂತರ ರಾಯರ ದರ್ಶನ ಮತ್ತು ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆರ್ಶೀವಾದವನ್ನ ಎಲ್ಲಾ ಭಕ್ತರು ಹಾಗೂ ಮಠದ ಶಿಷ್ಯರು ಪಡೆದರು . ಕೆಲವೇ ದಿನಗಳಲ್ಲಿ ಆರಾಧನೆ ಇರುವ ನಿಮಿತ್ತ ನಿತ್ಯ ಶ್ರೀ ಮಠದಲ್ಲಿ ಒಂದಲ್ಲ ಒಂದು ಕಾರ್ಯಕ್ರಮಗಳು ನಡೆಯುತ್ತಿದು, ತುಂಗೆಯ ತಟದ ಶ್ರೀ ಗುರು ಸಾರ್ವಭೌಮರ ಶ್ರೀ ಮಠ ಹತ್ತು ಹಲವು ಕಾರ್ಯಕ್ರಮಗಳಿಂದ ಕಂಗೊಳಿಸುತ್ತಿದೆ.
- Advertisement -