Cricket News: ಹುಬ್ಬಳ್ಳಿ: ಇಂದು ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ವಿಶ್ವಕಪ್ ಫೈನಲ್ ಮ್ಯಾಚ್ ಇದ್ದು, ಭಾರತ ಗೆದ್ದು ಬರಲಿ ಎಂದು, ಹುಬ್ಬಳ್ಳಿಯಲ್ಲಿ ಕ್ರಿಕೇಟ್ ಅಭಿಮಾನಿಗಳು ವಿಶೇಷ ಪೂಜೆ ಮಾಡಿದರು.
ಅಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ವಿಶ್ವಕಪ್ ಫೈನಲ್ ಮ್ಯಾಚ್ ನಡೆಯುತ್ತಿದ್ದು, ಈ ಆಟದಲ್ಲಿ ಭಾರತ ಗೆಲುವು ಸಾಧಿಸಲಿ, ಈ ಬಾರಿ ವಿಶ್ವಕಪ್ ನಮ್ಮದಾಗಲಿ ಎಂದು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಕ್ರಿಕೇಟ್ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಯ ಸಾಯಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಹಲವು ಕ್ರಿಕೇಟಿಗರ ಫೋಟೋಗೂ ಪೂಜೆ ಸಲ್ಲಿಕೆಯಾಗಿದೆ.
ಇಷ್ಟೇ ಅಲ್ಲದೇ, ಬ್ಯಾಟ್ ಮತ್ತು ಬಾಲ್ ಹಿಡಿದು, ಈ ಕ್ರಿಕೇಟ್ ಅಭಿಮಾನಿಗಳು ವಿಭಿನ್ನನವಾಗಿ ಪೂಜೆ ಸಲ್ಲಿಸಿದ್ದಾರೆ. ಭಾರತದ ತಂಡದ ಆಟಗಾರರ ಭಾವಚಿತ್ರ ಹಿಡಿದು, ಅವರ ಪರ ಘೋಷಣೆ ಕೂಗುವ ಮೂಲಕ, ಶುಭ ಹಾರೈಸಿದ್ದಾರೆ.
ಭಾರತ ವಿಶ್ವಕಪ್ ಗೆದ್ದರೆ 100 ಕೋಟಿ ರೂ ಬಂಪರ್ ಬಹುಮಾನ!: ಆಸ್ಟ್ರೋಟಾಕ್ ಸಿಇಒ ಘೋಷಣೆ
ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.
ತಲೆತಲಾಂತರದಿಂದ ಮಠದ ಭಕ್ತರಾದ ನಾವು ಮುರುಘಾ ಶರಣರ ಜೊತೆ ಇರುತ್ತೇವೆ; ಶಾಸಕ ವಿರೇಂದ್ರ ಪಪ್ಪಿ