Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn OK Please) ಅಂತಾ ಬರೆದಿರೋದ್ಯಾಕೆ..?

Special Story: ಲಾರಿ ಅಥವಾ ಹಲವು ಗಾಡಿಗಳ ಹಿಂದೆ ಹಾರ್ನ್ ಓಕೆ ಪ್ಲೀಸ್ ಅಂತಾ ಬರೆಯಲಾಗತ್ತೆ. ಹಾರ್ನ್ ಪ್ಲೀಸ್ ಅಂತಾ ಬರೆದ್ರೆ, ಹಾರ್ನ್ ಹಾಕಿ ಅಲರ್ಟ್ ಮಾಡಬೇಕು ಅನ್ನೋ ಅರ್ಥಾ ಬರತ್ತೆ. ಆದರೆ ಹಾರ್ನ್ ಓಕೆ ಪ್ಲೀಸ್ ಅಂತಾ ಬರೆಯೋದಕ್ಕೆ ಕಾರಣ ಏನು ಅಂತಾ ನಿಮಗೆ ತಿಳಿದಿದೆಯಾ..? ಇವತ್ತು ನಾವು ಇದೇ ವಿಷಯದ ಬಗ್ಗೆ ವಿವರಿಸಲಿದ್ದೇವೆ.

1940ರ ಬ್ರಿಟೀಷರ ಕಾಲದಲ್ಲಿ ವರ್ಲ್ಡ್ ವಾರ್ 2ರ ಮಾತು ಇದು. ಯುರೋಪಿನಲ್ಲಿ ನಡೆಯುವ ಯುದ್ಧಕ್ಕಾಗಿ ಭಾರತದಿಂದ ಡಿಸೇಲ್ ರಫ್ತು ಮಾಡಲಾಗುತ್ತಿತ್ತು. ಹಾಗಾಗಿ ಭಾರತದಲ್ಲಿ ಡಿಸೇಲ್‌ ಕಡಿಮೆಯಾಗುತ್ತ ಬಂತು.

ಹಾಗಾಗಿ ಭಾರತದಲ್ಲಿನ ಟ್ರಕ್ ಚಾಲನೆಗಾಗಿ ಡಿಸೇಲ್ ಬದಲು ಕೆರೋಸಿನ್ ಬಳಸುವ ವ್ಯವಸ್ಥೆ ಮಾಡಲಾಯಿತು. ಡಿಸೇಲ್ ಇಲ್ಲದ ಕಾರಣ ಇದನ್ನೇ ಬಳಸಿ, ಲಾರಿ ಓಡಿಸಬೇಕಿತ್ತು.

ಆದರೆ ಇದೆಷ್ಟು ಡೇಂಜರ್ ಇತ್ತೆಂದರೆ, ಲಾರಿಗೆ ಸಣ್ಣದಾಗಿ ಏನಾದರೂ ಡಿಕ್ಕಿಯಾದರು ಕೂಡ ಲಾರಿ ಬ್ಲಾಸ್ಟ್ ಆಗುತ್ತಿತ್ತು. ಆ ರೀತಿ ಜೀವ ಭಯದಲ್ಲೇ ಲಾರಿ ಚಾಲಕರು ಜೀವನ ಮಾಡಬೇಕಿತ್ತು. ಆ ರೀತಿಯ ಅನಾಹುತ ಸಂಭವಿಸಬಾರದು ಎಂದು ಲಾರಿ ಹಿಂದೆ ಹಾರ್ನ್ ಪ್ಲೀಸ್ ಆನ್ ಕೆರೋಸಿನ್ ಅಂತಾ ಬರೆಯಲು ಶುರು ಮಾಡಿದರು.

ಅದನ್ನು ನೋಡಿ, ಈ ಗಾಡಿ ಕೆರೋಸಿನ್‌ನಿಂದ ನಡೆಯುತ್ತಿದೆ. ಹಾಗಾಗಿ ಜನ ಲಾಾರಿಯ ಹತ್ತಿರದಿಂದ ಹೋಗದೇ, ಸ್ವಲ್ಪ ದೂರದಿಂದಲೇ ಹೋಗಲಿ ಎಂಬುದು ಹೀಗೆ ಬರೆಯುವುದರ ಹಿಂದಿನ ಯೋಚನೆಯಾಗಿತ್ತು.

ಆದರೆ ಕ್ರಮೇಣ ಜನ ಆನ್ ಕೆರೋಸಿನ್ ಬರೆಯುವ ಬದಲು, ಓಕೆ ಬರೆಯಲು ಶುರು ಮಾಡಿದರು. ಬಳಿಕ ಭಾರತ ಅಭಿವೃದ್ಧಿಯಾಗಿ ಈಗ ನಮ್ಮ ದೇಶದಲ್ಲೂ ತೈಲಗಳಿಗೆ ಏನೂ ಸಮಸ್ಯೆ ಇಲ್ಲ. ಹಾಗಾಗಿ ಕೆರೋಸಿನ್ ಕೂಡ ಬಳಸುವ ಅಗತ್ಯವಿಲ್ಲ. ಹಾಗಾಗಿ ಈಗ ಹಳೇ ಪದ್ಧತಿ ಅನುಸರಿಸಲು ಹಾರ್ನ್ ಓಕೆ ಪ್ಲೀಸ್ ಎಂದು ಬರೆಯುತ್ತಾರೆ.

ಆದರೆ 2015ರಲ್ಲಿ ಮಹಾರಾಷ್ಟ್ರದಲ್ಲಿ ಹಾರ್ನ್ ಓಕೆ ಪ್ಲೀಸ್ ಅಂತಾ ಲಾರಿ ಅಥವಾ ಯಾವುದೇ ಗಾಡಿಯ ಮೇಲೆ ಬರೆಯುವುದನ್ನೇ ಬ್ಯಾನ್ ಮಾಡಲಾಗಿದೆ. ಏಕೆಂದರೆ, ಇದರಿಂದ ಹಾಾರ್ನ್ ಹಾಕಿ, ಶಬ್ದ ಮಾಲಿನ್ಯ ಮಾಡುವವರ ಸಂಖ್ಯೆ ಏರಿಕೆಯಾಗಿತ್ತು. ಜನ ಆ ಲೈನ್ ನೋಡಿದ ತಕ್ಷಣ ಹಾರ್ನ್ ಹಾಕಲು ಶುರು ಮಾಡುತ್ತಿದ್ದರು. ಹಾಗಾಗಿ ಮಹಾರಾಷ್ಟ್ರದಲ್ಲಿ ಶಬ್ದ ಮಾಲಿನ್ಯ ಹೆಚ್ಚಾಗಬಾರದು ಎಂದು ಗಾಡಿಗಳ ಹಿಂದೆ ಹಾರ್ನ್ ಓಕೆ ಪ್ಲೀಸ್ ಅಂತಾ ಬರೆಯುವುದನ್ನೇ ಬ್ಯಾನ್ ಮಾಡಲಾಗಿದೆ.

About The Author