Spiritual: ಪತಿ-ಪತ್ನಿ ಸಂಬಂಧ ಚೆನ್ನಾಗಿರಬೇಕು ಅಂದ್ರೆ ಕೆಲ ವಿಷಯಗಳನ್ನು ಸಿಕ್ರೇಟ್ ಆಗಿಯೇ ಇಡಬೇಕು ಅಂತಾ ಕೆಲವರು ಹೇಳ್ತಾರೆ. ಸತ್ಯವಂತರಾಗಲು ಹೋಗಿ, ಜೀವನ ಹಾಳಾಗಿ ಹೋಗುವ ಸಾಧ್ಯತೆ ಇರುವ ಸಂದರ್ಭದಲ್ಲಿ ಹೀಗೆ ಮಾಡುವುದೇ ಉತ್ತಮ. ಆದರೆ ಕೆಲ ವಿಷಯಗಳ ಬಗ್ಗೆ ಎಂದಿಗೂ ಪತಿಗೆ ಹೇಳದೇ ಪತ್ನಿ, ಪತ್ನಿಗೆ ಹೇಳದೇ ಪತಿ ಇರಬಾರದಂತೆ. ಹಾಗಾದ್ರೆ ಪತ್ನಿ ಯಾವ ಕೆಲಸವನ್ನು ಪತಿಗೆ ಹೇಳದೇ ಮಾಡಬಾರದು ಅಂತಾ ತಿಳಿಯೋಣ ಬನ್ನಿ.
ದುಡ್ಡಿನ ವ್ಯವಹಾರ: ಪತ್ನಿಯಾದವಳು ಪತಿಗೆ ಹಣದ ವಿಚಾರದ ಬಗ್ಗೆ ಎಲ್ಲವೂ ಹೇಳಬೇಕಂತೆ. ಪತಿಗೆ ಹೇಳದೇ, ಬೇರೆಯವರಿಂದ ಹಣ ಪಡೆಯಬಾರದು. ಪತಿಗೆ ಹೇಳದೇ ಬೇರೆಯವರಿಗೆ ಹಣ ನೀಡಬಾರದು. ಹೀಗಾದಾಗ, ವಿಷಯವೇನಾದರೂ ಪತಿಗೆ ತಿಳಿದರೆ, ಜಗಳವಾಗಿ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ.
ಆಚೆ ಹೋಗಬಾರದು: ಪತ್ನಿಯಾದವಳು ಪತಿಗೆ ಹೇಳದೇ, ಆಚೆ ಹೋಗಬಾರದು. ಹಾಗೇ ಹೋದಾಗ, ಏನಾದರೂ ಅನಾಹುತವಾದರೆ, ಪತಿ ತಲೆತಗ್ಗಿಸಬೇಕಾಗುತ್ತದೆ. ಹಾಗಾಗಿ ಪತಿಗೆ ವಿಷಯ ತಿಳಿಸದೇ, ಎಂದಿಗೂ ಆಚೆ ಹೋಗಬಾರದು. ಪತಿಯ ಜತೆಗೆ ಹೋದರೆ ಇನ್ನೂ ಉತ್ತಮ.
ದಾನ ಮಾಡಬಾರದು: ದಾನ ಮಾಡುವುದು ಉತ್ತಮ ವಿಷಯ. ಆದರೆ ಪತಿಗೆ ಕೇಳದೇ, ದಾನ ಮಾಡುವುದು ತಪ್ಪು. ಅದರಲ್ಲೂ ಪತಿಯ ದುಡಿಮೆಯ ಹಣವನ್ನು ನೀವು ಅವರಿಗೆ ಕೇಳದೇ ದಾನ ಮಾಡಿದರೆ, ಅವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ಬೇರೆಯವರಿಂದ ಏನನ್ನು ತೆಗೆದುಕ“ಳ್ಳಬಾರದು: ಪತಿಗೆ ಹೇಳದೇ, ಬೇರೆಯವರಿಂದ ಯಾವ ವಸ್ತುವನ್ನು ತೆಗೆದುಕ“ಳ್ಳಬಾರದು. ಇದರಿಂದ ಪತಿಗೆ ಅವಮಾನ ಮಾಡಿದಂತಾಗುತ್ತದೆ. ಅದೇ ಮಾತನ್ನಿಟ್ಟುಕ“ಂಡು ಜನ ನಿಮ್ಮ ಪತಿಯನ್ನು ತಮಾಷೆಯೂ ಮಾಡಬಹುದು. ಹಾಗಾಗಿಯೇ ಪತಿಯ ಗಮನಕ್ಕೆ ತಾರದೇ, ಬೇರೆಯವರಿಂದ ಏನನ್ನು ತೆಗೆದುಕ“ಳ್ಳಬೇಡಿ.