Friday, August 29, 2025

Latest Posts

Spiritual: ಶ್ರೀಕೃಷ್ಣನ ಪ್ರಕಾರ ಈ ತಪ್ಪು ಮಾಡುವವರ ಜೀವನ ನರಕಕ್ಕೆ ಸಮವಾಗಿರುತ್ತದೆ..

- Advertisement -

Spiritual: ಭಗವದ್ಗೀತೆಯಲ್ಲಿ ಜೀವನ ಸಾರ ಹೇಳಿರುವ ಶ್ರೀಕೃಷ್ಣ, ಕೆಲ ಕೆಲಸಗಳನ್ನು ಮಾಡಿದರೆ, ನಮ್ಮ ಜೀವನವೇ ನರಕವಾಗುತ್ತದೆ ಎಂದಿದ್ದಾನೆ. ಹಾಗಾದರೆ ಅಂಥ ಕೆಲಸಗಳು ಯಾವುದು ಅಂತಾ ತಿಳಿಯೋಣ.

ದುರಾಸೆ: ಮನುಷ್ಯನಿಗೆ ಆಸೆ ಇರುವುದು ಸಹಜ. ಅಂಥ ಆಸೆಗಳನ್ನು ನೆರವೇರಿಸಿಕ“ಳ್ಳಲು ಮನುಷ್ಯ ಮೈ ಬಗ್ಗಿಸಿ ದುಡಿಯುತ್ತಾನೆ. ತನ್ನ ಆಸೆ ಆಕಾಂಕ್ಷೆಗಳನ್ನು ಪೂರೈಸಿಕ“ಳ್ಳುತ್ತಾನೆ. ಆದರೆ ಅದೇ ಆಸೆ ದುರಾಸೆಯಾದರೆ, ಜೀವನವನ್ನೇ ಪಣಕ್ಕಿಡುವ ಸ್ಥಿತಿ ನಿರ್ಮಾಣವಾಗುತ್ತದೆ. ಏಕೆಂದರೆ ದುರಾಸೆಯಿಂದ ಮನುಷ್ಯ ಯಾವುದು ತಪ್ಪು, ಯಾವುದು ಸರಿ ಎನ್ನುವುದನ್ನೇ ಮರೆಯುತ್ತಾನೆ. ಮಾತುಗಳು ಅಡ್ಡಾದಿಡ್ಡಿಯಾಗುತ್ತದೆ. ಮನಸ್ಸು ಕಲುಶಿತವಾಗುತ್ತದೆ. ಹಾಗಾಗಿಯೇ ಎಷ್ಟೋ ಗಂಡಸರು, ಪತ್ನಿ, ಗರ್ಲ್ಫ್ರೆಂಡ್ ದುರಾಸೆಗಳನ್ನು ಪೂರೈಸಲು ಹತ್ಯೆ , ದರೋಡೆಯಂಥ ಅಡ್ಡದಾರಿ ಹಿಡಿಯುತ್ತಾರೆ. ಇದರಿಂದ ಅವರ ಜೀವನವೇ ನರಕವಾಗುತ್ತದೆ.

ದ್ರೋಹ: ಯಾರಿಗಾದರೂ ದ್ರೋಹ ಮಾಡಿ, ನಾನು ಸುಖವಾಗಿರುತ್ತೇನೆ ಎಂದು ಮನುಷ್ಯ ಎಣಿಸಿದರೆ, ಹಾಗಾಗಲು ಎಂದಿಗೂ ಸಾಧ್ಯವಿಲ್ಲ. ಏಕೆಂದರೆ, ಮನುಷ್ಯ ದ್ರೋಹ ಮಾಡಿದ್ದಲ್ಲಿ, ಕರ್ಮದ ರೂಪದಲ್ಲಿ ಅದು ಅವನ ಬಳಿ ಬರುತ್ತದೆ. ಆಗ ಅವನ ಜೀವನ ನೆಮ್ಮದಿ ಹಾಳಾಗುತ್ತದೆ.

ಮಿತಿ ಮೀರಿದ ಕಾಮ: ಕಾಮ ಮಿತಿ ಮೀರಿದಾಗ, ಮನುಷ್ಯ ಸ್ವಯ ಕಳೆದುಕ“ಳ್ಳುತ್ತಾನೆ. ತಪ್ಪಾದ ಬಳಿಕ, ಪಶ್ಚಾತಾಪ ಪಡುತ್ತಾನೆ. ಬಳಿಕ ಆತನ ಜೀವನ ನರಕಕ್ಕೆ ಸಮವಾಗುತ್ತದೆ. ಹಾಗಾಗಿಯೇ ಪಂಚೇಂದ್ರಿಯಗಳನ್ನು ನಾವು ನಿಯಂತ್ರಣದಲ್ಲಿ ಇಡಬೇಕು ಅಂತಾರೆ ಹಿರಿಯರು.

ಮಿತಿ ಮೀರಿದ ಕೋಪ: ಯಾರಿಗೆ ಹೆಚ್ಚು ಕೋಪವಿರುತ್ತದೆಯೋ, ಅಂಥವರ ಜೀವನದಲ್ಲಿ ಹೆಚ್ಚು ಖುಷಿ ಇರುವುದಿಲ್ಲ. ಅವರು ಸದಾ ಕಾಲ ಜಗಳವಾಡುತ್ತಲೇ ಇರುತ್ತಾರೆ. ಅವನ ನೆಮ್ಮದಿ ಮಾತ್ರವಲ್ಲದೇ, ಅವರ ಜತೆಗಿರುವವರ ನೆಮ್ಮದಿಯೂ ಹಾಳು ಮಾಡುತ್ತಾರೆ.

- Advertisement -

Latest Posts

Don't Miss