Spiritual: ಆಷಾಢ ಮಾಸ 2026 : ಪ್ರಾರಂಭ ಮತ್ತು ಅಂತ್ಯ: ಏನು ಮಾಡಬೇಕು? ಏನು ಮಾಡಬಾರದು?

Spiritual: ಆಷಾಢ ಮಾಸಾರಂಭವಾಗಿದೆ. ಈ ಮಾಸದಲ್ಲಿ ಯಾವುದೇ ಶುಭಕಾರ್ಯ ಮಾಡಲಾಗುವುದಿಲ್ಲ. ನವವಿವಾಹಿತರು ಜತೆಗಿರುವಂತಿಲ್ಲ. ಆದರೆ ದೇವರ ಆರಾಧನೆಗೆ ಇದು ಅತ್ಯುತ್ತಮ ಕಾಲ. ಹಾಗಾಗಿ ಆಷಾಢದಲ್ಲಿ ವಿಷ್ಣು, ಲಕ್ಷ್ಮೀ, ದುರ್ಗೆಯನ್ನು ಆರಾಧಿಸಲಾಗುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ವಿವರಿಸಿದ್ದಾರೆ.

ಇನ್ನು ಏಕೆ ಆಷಾಢದಲ್ಲಿ ನವವಿವಾಹಿತರು ಜತೆಗಿರಬಾರದು ಅಂದ್ರೆ, ಈ ಕಾಲದಲ್ಲಿ ಜತೆಗಿದ್ದರೆ, ಮುಂದೆ ಜನಿಸುವ ಮಗುವಿನ ಆರೋಗ್ಯ ಉತ್ತವಾಗಿರುವುದಿಲ್ಲ. ಹಾಗಾಗಿ ಆಷಾಢದಲ್ಲಿ ಸತಿ-ಪತಿ ಸೇರಬಾರದು ಎಂದು, ಪತ್ನಿಯನ್ನು ತವರಿಗೆ ಕಳುಹಿಸಲು ಹಿರಿಯರು ಈ ಪದ್ಧತಿ ಮಾಡಿದ್ದಾರೆ.

ಇನ್ನು ಆಷಾಢದಲ್ಲಿ ಪ್ರತೀ ಶುಕ್ರವಾರ ಲಕ್ಷ್ಮೀ ದೇವಿಯ ಆರಾಧನೆ ಮಾಡಿದರೆ, ಫಲಪ್ರದವಾಗಿದೆ. ಅಲ್ಲದೇ, ಈ ಆಷಾಢ ಶುಕ್ರವಾರದಲ್ಲಿ ಲಕ್ಷ್ಮೀ ಪೂಜೆ ಮಾಡಿದರೆ, ಪುಣ್ಯ ಫಲ ಲಭಿಸುತ್ತದೆ ಅನ್ನೋ ನಂಬಿಕೆ ಇದೆ. ಈ ದಿನ ಲಕ್ಷ್ಮೀ ದೇವಿಗೆ ನೆಚ್ಚಿನ ನೈವೇದ್ಯವಾದ ಸಿಹಿ ತಿಂಡಿಯನ್ನು ಮಾಡಿ, ನೈವೇದ್ಯ ಮಾಡಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ವೀಕ್ಷಿಸಿ.

About The Author