Thursday, September 19, 2024

Latest Posts

Spiritual: ಪಿತೃಪಕ್ಷದ ವೇಳೆ ಈ ತಪ್ಪುಗಳನ್ನು ಮಾಡಬೇಡಿ

- Advertisement -

Spiritual: ಪಿತೃಪಕ್ಷ ಎಂದರೆ, ಹಿಂದೂಗಳಿಗೆ ಶ್ರೇಷ್ಟವಾದ ಸಮಯ. ಈ ವೇಳೆ, ನಮ್ಮನ್ನಗಲಿದ ಹಿರಿಯರಿಗೆ ಪಿಂಡ ಪ್ರಧಾನ ಮಾಡುವ, ಶ್ರಾದ್ಧ ಮಾಡುವ ಸಮಯ. ನಾವು ವರ್ಷದಲ್ಲಿ ನಮ್ಮನ್ನಗಲಿದ ಹಿರಿಯರ ಶ್ರಾದ್ಧ ಮಾಡುವುದನ್ನು ಮರೆತಿದ್ದರೆ, ಅಥವಾ ಶ್ರಾದ್ಧ ಮಾಡದೇ ಇದ್ದಲ್ಲಿ, ಪಿತೃಪಕ್ಷದಲ್ಲಿ ಈ ಕೆಲಸ ಮಾಡಬಹುದು. ಹಾಗಾಗಿ ಈ ಸಮಯದಲ್ಲಿ ಶ್ರಾದ್ಧ ಬಿಟ್ಟು ಬೇರೆ ಯಾವ ಶುಭಕಾರ್ಯಗಳನ್ನು ಮಾಡುವುದಿಲ್ಲ. ಅಲ್ಲದೇ ಈ ಸಮಯದಲ್ಲಿ ಮತ್ತೂ ಕೆಲವು ಕೆಲಸಗಳನ್ನು ಮಾಡಬಾರದು. ಅದು ಯಾವ ಕೆಲಸ ಎಂದು ತಿಳಿಯೋಣ ಬನ್ನಿ..

ಬಟ್ಟೆ ಖರೀದಿಸುವುದು: ಪಿತೃಪಕ್ಷದ ವೇಳೆ ಬಟ್ಟೆ, ಚಪ್ಪಲಿ ಅಥವಾ ಯಾವುದೇ ಹೊಸ ವಸ್ತುಗಳನ್ನು ಖರೀದಿಸಬೇಡಿ. ಅದು ಬಹುಬೇಗ ಹಾಳಾಗುತ್ತದೆ. ಅಥವಾ ಏನಾದರೂ ಸಮಸ್ಯೆ ಬರುತ್ತದೆ. ಉದಾಹರಣೆಗೆ ಬಟ್ಟೆ ಖರೀದಿಸದರೆ, ಅದು ಬೇಗ ಹರಿದು ಹೋಗಬಹುದು. ಅಥವಾ ಕಳೆದುಹೋಗಬಹುದು. ಅಥವಾ ಅದನ್ನು ಧರಿಸಿದಾಗಲೆಲ್ಲ, ನಿಮಗೆ ಕೆಟ್ಟದ್ದೇನಾದರೂ ಆಗಬಹುದು. ಹಾಗಾಗಿ ಈ ವೇಳೆ ಯಾವುದೇ ಹೊಸ ವಸ್ತುಗಳನ್ನು ಖರೀದಿಸಬೇಡಿ.

ಆಭರಣ, ವಾಹನ ಖರೀದಿಸುವುದು: ಪಿತೃಪಕ್ಷದಲ್ಲಿ ನಾವು ಹಿರಿಯರನ್ನು ನೆನೆದು, ಅವರ ಆತ್ಮಕ್ಕೆ ಶಾಂತಿ ಸಿಗಲು ಪ್ರಾರ್ಥಿಸಬೇಕು. ಹಾಗಾಗಿ ಈ ವೇಳೆ ನಾವು ಆಭರಣ, ಕಾರು, ಬೈಕ್, ಸ್ಕೂಟಿ ಅಥವಾ ಯಾವುದೇ ಹೊಸ ವಸ್ತಗಳನ್ನು ಖರೀದಿಸುವುದು ತಪ್ಪಾಗುತ್ತದೆ. ಮತ್ತು ಇಂಥ ಸಮಯದಲ್ಲಿ ಖರೀದಿಸಿದ ವಸ್ತುಗಳು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ.

ಶುಭಕಾರ್ಯ: ಮಹಾಲಯ ಸಂದರ್ಭದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಇನ್ನು ಶುಭಕಾರ್ಯ ಎಂದರೆ, ಬರೀ ಮದುವೆ, ಮುಂಜಿ, ಎಂಗೇಜ್‌ಮೆಂಟ್ ಅಲ್ಲ. ನೀವು ಪ್ರೇಮನಿವೇದನೆ ಮಾಡುವುದು, ಅಥವಾ ಯಾರನ್ನಾದರೂ ಮೊದಲ ಬಾರಿ ಭೇಟಿಯಾಗಲು ಹೋಗುವುದು. ಇತ್ಯಾದಿ ಕೆಲಸಗಳು ಕೂಡ ನಿಮ್ಮ ಜೀವನದಲ್ಲಿ ಶುಭವಾಗುವ ಘಳಿಗೆಯಾಗಿರುತ್ತದೆ. ಹಾಗಾಗಿ ಮಹಾಲಯ ಸಂದರ್ಭದಲ್ಲಿ ಇಂಥ ಕೆಲಸ ಮುಂದೂಡಿ.

ಉದ್ಯಮ ಆರಂಭಿಸುವುದು, ಕೆಲಸಕ್ಕೆ ಹೋಗುವುದು: ಯಾವುದಾದರೂ ಉದ್ಯಮ ಆರಂಭಿಸುವುದು, ಕೆಲಸಕ್ಕೆ ಸೇರುವುದು, ಸಂದರ್ಶನಕ್ಕಾಗಿ ಹೋಗುವುದು, ಯೂಟ್ಯೂಬ್ ಶುರು ಮಾಡುವುದು, ಇವೆಲ್ಲವೂ ಮಾಡಬೇಡಿ. ಏಕೆಂದರೆ, ಇವೆಲ್ಲವನ್ನೂ ನಾವು ನಮ್ಮ ಉದ್ಧಾರಕ್ಕಾಗಿ ಮಾಡುವುದು. ನಾವು ಉದ್ಧಾರವಾಗಬೇಕು ಅಂದ್ರೆ, ನಮ್ಮ ಹಿರಿಯರನ್ನು ನಾವು ಪ್ರಾರ್ಥಿಸಬೇಕು. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು, ದಾನ ಧರ್ಮ ಮಾಡಬೇಕು. ಇಂಥ ಸಂದರ್ಭದಲ್ಲೂ ನಾವು ಹೊಸ ಕೆಲಸ ಆರಂಭಿಸಿದರೆ, ಅದು ಸ್ವಾರ್ಥಕ್ಕೆ ಸಮಾನವಾಗುತ್ತದೆ.

ಉಗುರು, ಕೂದಲು ಕತ್ತರಿಸುವುದು: ಮಹಾಲಯದಲ್ಲಿ ಕೂದಲು ಮತ್ತು ಉಗುರು ಕತ್ತರಿಸುವುದನ್ನು ಅಶುಭ ಎನ್ನಲಾಗುತ್ತದೆ. ಈ ದಿನಗಳಲ್ಲಿ ಕೂದಲು ಕತ್ತರಿಸಿದರೆ, ನೆಮ್ಮದಿ, ಆರ್ಥಿಕ ಪರಿಸ್ಥಿತಿಗೆ ಧಕ್ಕೆಯಾಗುತ್ತದೆ ಎಂಬ ನಂಬಿಕೆ ಇದೆ.

ಮಾಂಸಾಹಾರ ಸೇವನೆ ಮಾಡುವುದು: ಕೆಲವರು ಮಹಾಲಯದ ಸಮಯದಲ್ಲಿ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಏಕೆಂದರೆ, ಇದು ಪೂರ್ವಜರಿಗೆ ಪ್ರಾರ್ಥಿಸುವ ದಿನವಾಗಿರುವುದರಿಂದ, ಈ ದಿನಗಳಲ್ಲಿ ಬರೀ ಶಾಖಾಹಾರಿ ಆಹಾರಗಳನ್ನಷ್ಟೇ ಸೇವನೆ ಮಾಡುತ್ತಾರೆ.

ಪ್ರಾಣಿಗಳಿಗೆ ಆಹಾರ ತಿನ್ನಿಸಿ: ಪ್ರಾಣಿಗಳಿಗೆ ಯಾವಾಗಲೂ ಆಹಾರ ತಿನ್ನಿಸುವುದು ಪುಣ್ಯದ ಕೆಲಸ. ಹಸುವಿಗೆ ಹುಲ್ಲು ಹಾಕುವುದು, ಬೆಕ್ಕಿಗೆ ಹಾಲು, ನಾಯಿಗೆ ಅನ್ನ ಹಾಕುವುದೆಲ್ಲ ಪುಣ್ಯದ ಕೆಲಸ. ಆದರೆ ಪಿತೃಪಕ್ಷದಲ್ಲಿ ನೀವು ಈ ಕೆಲಸ ಮಾಡಿದರೆ, ನಿಮಗೆ ಹೆಚ್ಚಿನ ಪುಣ್ಯ ಮತ್ತು ನಿಮ್ಮ ಪೂರ್ವಜನರ ಆಶೀರ್ವಾದ ಸಿಗುತ್ತದೆ.

- Advertisement -

Latest Posts

Don't Miss