Spiritual: ಹಿಂದೂಗಳಿಗೆ ಈ ಧಾರ್ಮಿಕ ದಿನಗಳಲ್ಲಿ ಈರುಳ್ಳಿ- ಬೆಳ್ಳುಳ್ಳಿ ಸೇವನೆ ನಿಷಿದ್ಧ

Spiritual: ಎಲ್ಲ ಹಿಂದೂಗಳು ಕೂಡ, ಕೆಲ ನಿಯಮಗಳನ್ನು ಅನುಸರಿಲೇಬೇಕು ಅಂತಾ ಹೇಳಲಾಗಿದೆ. ಆದರೆ ಕೆಲವು ಪದ್ಧತಿಗಳನ್ನು ಎಲ್ಲರೂ ಆಚರಿಸುತ್ತಿಲ್ಲ. ಕೆಲವರು ಆ ಪದ್ಧತಿಗಳನ್ನು ನಂಬುವುದಿಲ್ಲ. ಇನ್ನು ಕೆಲವರಿಗೆ ಅಸಡ್ಡೆ. ಆ ರೀತಿ ಅನುಸರಿಸಲೇಬೇಕಾದ ಪದ್ಧತಿ ಅಂದ್ರೆ, ಧಾರ್ಮಿಕ ದಿನಗಳಲ್ಲಿ ಈರುಳ್ಳಿ- ಬೆಳ್ಳುಳ್ಳಿ ಸೇವನೆ ಮಾಡದಿರುವುದು. ಮತ್ತು ದೇವರಿಗೆ ಈರುಳ್ಳಿ ಹಾಕಿದ ಪದಾರ್ಥವನ್ನು ನೈವೇದ್ಯ ಮಾಡದಿರುವುದು. ಹಾಗಾದ್ರೆ ಯಾಕೆ ಈ ಪದ್ಧತಿ ಅನುಸರಿಸಬೇಕು ಅಂತಾ ತಿಳಿಯೋಣ ಬನ್ನಿ..

ಸಮುದ್ರ ಮಂಥನ ಕಾಲದಲ್ಲಿ ರಾಕ್ಷಸರು ಮತ್ತು ದೇವತೆಗಳು ಅಮೃತಕ್ಕಾಗಿ ಕಾದು ಕುಳಿತಿದ್ದರು. ಮೋಹಿನಿ ರೂಪದಲ್ಲಿದ್ದ ವಿಷ್ಣು, ದೇವತೆಗಳಿಗೆ ಅಮೃತ ಹಂಚುತ್ತ ಬರುವಾಗ, ರಾಹು ಕೇತು ತಮಗೆ ಅಮೃತ ಬೇಗ ಸಿಗಲಿ ಎಂದು, ದೇವತೆಗಳಿರುವ ಜಾಗಕ್ಕೆ ಹೋಗಿ, ಕುಳಿತರು. ಮೋಹಿನಿ ರೂಪದಲ್ಲಿದ್ದ ವಿಷ್ಣು ಇದನ್ನು ಗಮನಿಸದೇ, ರಾಹು ಕೇತುವಿಗೂ ಅಮೃತ ನೀಡಿ, ಅದು ಅವರ ದೇಹ ಸೇರುವುದರೊಳಗೆ ರುಂಡ ಮುಂಡ ಬೇರೆ ಮಾಡಿದ.

ಆ ವೇಳೆ ಅವರ ರಕ್ತದಿಂದ ಸೃಷ್ಟಿಯಾದ ತರಕಾರಿ ಈರುಳ್ಳಿ, ಬೆಳ್ಳುಳ್ಳಿ ಎನ್ನಲಾಗಿದೆ. ಹಾಗಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುವವರು ರಾಕ್ಷಸರ ರೀತಿ, ಗಟ್ಟಿಮುಟ್ಟಾಗಿರುತ್ತಾರೆ. ಆದ್ರೆ ಅವರ ತಲೆಯಲ್ಲಿ ಹೆಚ್ಚು ನಕಾರಾತ್ಮಕ ಬುದ್ಧಿಗಳೇ ಇರುತ್ತದೆ. ಆದರೆ ಈರುಳ್ಳಿ- ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣಗಳಿರುವುದರಿಂದ, ಅವುಗಳನ್ನು ಔಷಧಿಯ ರೀತಿಯೇ ಬಳಸಬೇಕು. ಮಿತವಾಗಿ ಬಳಸಿದರೆ, ಆರೋಗ್ಯ ಉತ್ತಮವಾಗಿರುತ್ತದೆ.

ಇನ್ನು ಇದು ರಾಹು ಕೇತುವಿನ ಅಂಶವಿರುವ ತರಕಾರಿ ಎನ್ನನುವ ಕಾರಣಕ್ಕೆ ಧಾರ್ಮಿಕ ದಿನಗಳಲ್ಲಿ ಮತ್ತು ದೇವರ ನೈವೈದ್ಯಕ್ಕೆ ಈರುಳ್ಳಿ- ಬೆಳ್ಳುಳ್ಳಿ ಬಳಕೆ ಮಾಡಲಾಗುವುದಿಲ್ಲ.

About The Author