Spiritual: ಹಿಂದೂ ಧರ್ಮದಲ್ಲಿ, ಪುರಾಣ ಕಥೆಗಳಲ್ಲಿ, ರಾಮಾಯಣ- ಮಹಾಭಾರತದಲ್ಲಿ ಬರುವ ಕೆಲವು ಪಾತ್ರಗಳಲ್ಲಿ, ಇನ್ನುವರೆಗೂ ಕೆಲವರು ಜೀವಂತವಾಗಿದ್ದಾರೆ ಎಂದು ಹೇಳಲಾಗುತ್ತದೆ. ಏಕೆಂದರೆ, ಅವರು ಚಿರಂಜೀವಿಗಳು. ಅವರಿಗೆ ಎಂದಿಗೂ ಸಾವು ಬರಲು ಸಾಧ್ಯವಿಲ್ಲ. ಹಾಗಾದರೆ ಹಿಂದೂಗಳಲ್ಲಿ ಬರುವ ಏಳು ಚಿರಂಜೀವಿಗಳು ಯಾರು ಎಂದು ತಿಳಿಯೋಣ ಬನ್ನಿ..
ಹನುಮಂತ: ಹನುಮಂತನನ್ನು ಪೂಜಿಸುವ ಅವನ ಪರಮಭಕ್ತರಿಗೆ, ಆತ ನಮ್ಮ ಬಳಿಯೇ ಇದ್ದು, ನಮ್ಮನ್ನು ಕಾಪಾಡುತ್ತಿದ್ದಾನೆ ಅನ್ನೋ ಮನವರಿಕೆಯಾಗಿರುವ ಉಹಾರಣೆಗಳಿದೆ. ಶ್ರೀರಾಮ ನಾಮ ಜಪಿಸುವವರಿಗೂ, ಈ ಹೆಸರಲ್ಲೊಂದು ಪವಾಡವಿದೆ ಅಂತಾ ಗೊತ್ತಾಗಿರುತ್ತದೆ. ಯಾಕಂದ್ರೆ ಹನುಮಂತ ಇನ್ನು ಕೂಡ ಬದುಕಿರುವ ಚಿರಂಜೀವಿಯಾಗಿದ್ದಾನೆ.
ಸೀತೆ ರಾಮನಿಗೆ ಚಿರಂಜೀವಿಯಾಗುವ ವರ ನೀಡಿದಳೆಂದು ಹೇಳಲಾಗುತ್ತದೆ. ಅಲ್ಲದೇ, ಹನುಮಂತನು ಕೂಡ ದೇವರಲ್ಲಿ, ಎಲ್ಲಿಯವರೆಗೂ ಭೂಮಿಯ ಮೇಲೆ ರಾಮನಾಮ ಜಪವಾಗುತ್ತದೆಯೋ, ಅಲ್ಲಿಯವರೆಗೂ ತಾಾನು ಭೂಮಿಯ ಮೇಲಿದ್ದು, ರಾಮಭಕ್ತರ ರಕ್ಷಣೆ ಮಾಡುವುದಾಗಿ ಹೇಳುತ್ತಾನೆ. ಹಾಗಾಗಿಯೇ ಹಿಂದೂಗಳಲ್ಲಿ ಧರ್ಮೋ ರಕ್ಷತಿ, ರಕ್ಷಿತಃ ಅನ್ನೋ ಮಾತಿದೆ. ನಾವು ಎಲ್ಲಿಯವರೆಗೂ ಧರ್ಮ ರಕ್ಷಣೆ ಮಾಡುತ್ತೆವೋ, ಅಲ್ಲಿಯವರೆಗೂ ಧರ್ಮ ನಮ್ಮ ರಕ್ಷಣೆ ಮಾಡುತ್ತದೆ ಅಂತಾ ಹೇಳಲಾಗುತ್ತದೆ.
ಪರಶುರಾಮ: ಜಮದಗ್ನಿಯ ಪುತ್ರ ಪರಶುರಾಮ ಶಿವನ ಪರಮಭಕ್ತನಾಗಿದ್ದ. ಹಾಗಾಗಿಯೇ ಅವನಿಗೆ ಶಿವನಿಂದ ಪರಶು ಎಂಬ ಶಸ್ತ್ರ ಸಿಕ್ಕಿದ್ದು, ಶಿವನೇ ಪರಶುರಾಮನಿಗೆ ಚಿರಂಜೀವಿಯಾಗಿರು ಎಂದು ವರ ನೀಡಿದ್ದ. ಜಮಮದದಗ್ನಿಯನ್ನು ಕ್ಷತ್ರೀಯ ರಾಜ ಕೊಂದ ಕಾರಣಕ್ಕೆ, ಕ್ಷತ್ರೀಯರನ್ನು ಸಂಹರಿಸುತ್ತೇನೆ ಎಂದು ಪರಶುರಾಮ ಪಣ ತೊಟ್ಟಿರುತ್ತಾನೆ. ಅದೇ ಕಾರಣಕ್ಕೆ ಪರಶುರಾಮ ಚಿರಂಜೀವಿಯಾಗಿದ್ದಾನೆಂದು ಹೇಳಲಾಗುತ್ತದೆ.
ಅಶ್ವತ್ಥಾಮ: ದ್ರೋಣಾಚಾರ್ಯರು ಶಿವನಲ್ಲಿ ಪುತ್ರ ಸಂತಾನಕ್ಕಾಗಿ ಪ್ರಾರ್ಥಿಸಿದಾಗ, ಹುಟ್ಟಿದ ಪುತ್ರನೇ ಅಶ್ವತ್ಥಾಮ. ಅಶ್ವತ್ಥಾಮನ ಹಣೆಯ ಮೇಲೆ ಮಣಿಯೊಂದು ಇದ್ದು, ಆ ಮಣಿಯ ಪ್ರಭಾವದಿಂದ ಆತ ಬಲು ಶಕ್ತಿಶಾಲಿಯಾಗಿದ್ದ. ಆದರೆ ಅದೇ ಅಹಂಕಾರದಲ್ಲಿ ಕೌರವರೊಂದಿಗೆ ಸೇರಿ, ಮಹಾಭಾರತ ಯುದ್ಧದ ಮೇಲೆ ಉತ್ತರೆಯ ಗರ್ಭಕ್ಕೆ ಬಾಣಬಿಟ್ಟ.
ಹೀಗಾಗಿ ಕೃಷ್ಣ, ಅಶ್ವತ್ಥಾಮನ ಹಣೆಯ ಮೇಲಿದ್ದ ಮಣಿಯನ್ನು ತೆಗೆದು, ಆತ ಇನ್ನೆಂದಿಗೂ ಆರೋಗ್ಯವಂತನಾಗಬಾರದು.ಕೊನೆಯವರೆಗೂ ನೋವಿನಿಂದ ನರಳಬೇಕು ಎಂದು ಶಾಪವನ್ನಿತ್ತ. ಹಾಗಾಗಿ ಅಶ್ವತ್ಥಾಮ ಈಗಲೂ ನರಳಾಟದಿಂದಲೇ ಜೀವನ ಸಾಗಿಸುತ್ತಿದ್ದಾನೆ ಎಂದು ಹೇಳಲಾಗಿದೆ.
ಇದು ಸತ್ಯವೆಂಬಂತೆ ಮಧ್ಯಪ್ರದೇಶದಲ್ಲಿ ಒಂದು ಘಟನೆ ನಡೆದಿದ್ದು, ಓರ್ವ ರೋಗಿ ವೈದ್ಯನ ಬಳಿ ಹಲವು ತಿಂಗಳಿಂದ ಚಿಕಿತ್ಸೆಗೆಂದು ಬರುತ್ತಿದ್ದ. ಆತ ನೋಡಲು ಕಟ್ಟುಮಸ್ತಾಗಿದ್ದು, ನೋಡುಗರ ಗಮನ ಸೆಳೆಯುವಂತಿದ್ದ. ಅವನ ಹಣೆಯ ಮೇಲೆ ಒಂದು ಗಾಯವಿತ್ತು. ಎಷ್ಟೇ ಚಿಕಿತ್ಸೆ ನೀಡಿದರೂ, ಔಷಧಿ ಹಚ್ಚಿದರೂ, ಆ ಗಾಯ ವಾಸವಾಗಲೇ ಇಲ್ಲ. ಒಮ್ಮೆ ಎಲ್ಲರೆದುರು ಆತ ಆಸ್ಪತ್ರೆಗೆ ಬಂದ, ಅಲ್ಲಿದ್ದ ಕೆಲವು ರೋಗಿಗಳು, ಆ ವ್ಯಕ್ತಿ ಒಳಗೆ ವೈದ್ಯರ ಬಳಿ ಹೋಗಿದ್ದನ್ನು ನೋಡಿದ್ದರು.
ಆತ ಒಳಗೆ ಹೋಗುತ್ತಿದ್ದಂತೆ, ಪರೀಕ್ಷಿಸಿದ ವೈದ್ಯರು, ನಿಮ್ಮ ಹಣೆಯ ಮೇಲಿನ ಗಾಯ ವಾಸಿಯಾಗುತ್ತಲೇ ಇಲ್ಲ, ನೀವೇನು ಅಶ್ವತ್ಥಾಮರೇ ಎಂದು ತಮಾಷೆಗೆ ಪ್ರಶ್ನಿಸಿದ್ದರು. ಆದರೆ, ಅವರು ಹಾಗೆ ಪ್ರಶ್ನಿಸಿ, ರೋಗಿಯ ಮುಖ ನೋಡುವ ಹೊತ್ತಿಗೆ, ಆ ವ್ಯಕ್ತಿ ಅಲ್ಲಿಂದ ಮಾಯವಾಗಿದ್ದ. ಹೊರಗೆ ಹೋಗಿ ಈ ಬಗ್ಗೆ ಪ್ರಶ್ನಿಸಿದಾಗ, ಆ ವ್ಯಕ್ತಿ ಹೊರಗೆ ಬಂದಿದ್ದನ್ನು ಯಾರೂ ನೋಡಿಲ್ಲವೆಂದು ಹೇಳಿದ್ದರು. ಅಲ್ಲದೇ, ಮತ್ತೆಂದೂ ಆತ ಯಾರ ಕಣ್ಣಿಗೂ ಕಾಣಿಸಿಕೊಳ್ಳಲಿಲ್ಲ. ಹಾಗಾಗಿ ಆತ ನಿಜವಾದ ಅಶ್ವತ್ಥಾಮನಿರಬಹುದು ಅಂತಲೇ ಹೇಳುತ್ತಾರೆ.