Friday, August 29, 2025

Latest Posts

Spiritual: ಮುಸ್ಸಂಜೆ ವೇಳೆ ಈ ವಸ್ತುಗಳನ್ನು ಎಂದಿಗೂ ದಾನ ಮಾಡಬೇಡಿ..

- Advertisement -

Spiritual: ಸಂಜೆ ವೇಳೆ ನಾವು ಕೆಲವು ವಸ್ತುಗಳನ್ನು ಬೇರೆಯವರಿಗೆ ನೀಡಬಾರದು. ಹಾಗೆ ನೀಡಿದರೆ, ನಮ್ಮ ಅದೃಷ್ಟ ಅವರ ಪಾಲಾಗುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಸಂಜೆ ವೇಳೆ ಯಾವ ವಸ್ತುಗಳನ್ನು ನಾವು ದಾನ ಮಾಡಬಾರದು ಎಂದು ತಿಳಿಯೋಣ.

ಬಿಳಿ ಬಣ್ಣದ ವಸ್ತು: ಸಂಜೆ ವೇಳೆ ಅಥವಾ ರಾತ್ರಿ ವೇಳೆ ಬಿಳಿ ಬಣ್ಣದ ವಸ್ತುಗಳನ್ನು ನಾವು ಯಾರಿಗೂ ದಾನ ಮಾಡಬಾರದು. ಅಂದ್ರೆ, ಹಾಲು, ಮೊಸರು, ಅಕ್ಕಿ, ಉಪ್ಪು, ಸಕ್ಕರೆ ಇವೆಲ್ಲವೂ ಬಿಳಿ ಬಣ್ಣದ ವಸ್ತುಗಳು. ಇಂಥ ವಸ್ತುಗಳನ್ನು ನಾವು ಮುಸ್ಸಂಜೆ ವೇಳೆ ದಾನ ಮಾಡಬಾರದು. ಇದರ ಜತೆ ರವಾ, ಇತರೆ ಹಿಟ್ಟುಗಳನ್ನು ಸಹ ದಾನ ಮಾಡಬಾರದು.

ಹಣ: ಸಂಜೆ ವೇಳೆ ಲಕ್ಷ್ಮೀ ಮನೆಗೆ ಬರುವ ಸಮಯ. ಹಾಗಾಗಿಯೇ ಈ ವೇಳೆ ದೇವರಿಗೆ ದೀಪ ಹಚ್ಚಿ, ದೇವರ ನಾಮಸ್ಮರಣೆ ಮಾಡಲಾಗುತ್ತದೆ. ಇಂಥ ವೇಳೆ ನೀವು ಬೇರೆಯವರಿಗೆ ಹಣ ನೀಡಿದರೆ, ಅದು ಲಕ್ಷ್ಮೀ ದೇವಿಗೆ ಮಾಡಿದ ಅವಮಾನವಾಗುತ್ತದೆ. ಆದರೆ ನೀವು ಬೇರೆಯವರಿಗೆ ಸಹಾಯ ಮಾಡಲೇಬೇಕು ಅಂತಿದ್ದರೆ, ಮರುದಿನ ಬೆಳಗ್ಗಿನ ಜಾವ ಹಣ ದಾನ ಮಾಡಬಹುದು. ಆದರೆ ಮುಸ್ಸಂಜೆ ವೇಳೆ ಹಣ ದಾನ ಮಾಡುವುದು ಉತ್ತಮವಲ್ಲ.

ಅರಿಶಿನ: ಅರಿಶಿನ ಅಂದರೆ ಗುರು. ಗುರುವಿಗೆ ನೆಚ್ಚಿನ ಬಣ್ಣ ಅರಿಶಿನ ಬಣ್ಣ. ಹಾಗಾಗಿಯೇ ಗುರುವಾರದ ದಿನ ಅರಿಶಿನ ಬಣ್ಣದ ಉಡುಪು ಧರಿಸಬೇಕು ಅಂತಾ ಹೇಳೋದು. ಇಂಥ ಅರಿಶಿನವನ್ನು ನೀವು ಮುಸ್ಸಂಜೆ ವೇಳೆಗೆ ದಾನ ಮಾಡಿದರೆ, ನಿಮ್ಮ ಅದೃಷ್ಟ ಬೇರೆಯವರ ಪಾಲಾಗುತ್ತದೆ. ಅರಿಶಿನ ಪೂಜೆಯಲ್ಲಿ, ಮುತ್ತೈದೆಯರ ಬಾಳಿನಲ್ಲಿ ಪ್ರಮುಖ ಪಾತ್ರ ವಹಿಸುವ ವಸ್ತು. ಹಾಗಾಗಿ ಮುಸ್ಸಂಜೆ ವೇಳೆ ಇದನ್ನು ದಾನ ಮಾಡಬೇಡಿ.

ಕಸಬರಿಗೆ: ಕಸಬರಿಗೆ ಎಂದು ಬರೀ ಮನೆ ಸ್ವಚ್ಛ ಮಾಡುವ ವಸ್ತುವಲ್ಲ. ಬದಲಾಗಿ ಇದು ಲಕ್ಷ್ಮೀ ದೇವಿಯ ರೂಪ. ಇದನ್ನು ಯಾವ ವೇಳೆಯಲ್ಲೂ ಯಾರಿಗೂ ದಾನ ಮಾಡಬಾರದು. ಕೆಲವರು ಬಾಡಿಗೆ ಮನೆಗೆ ಬಂದಾಗ, ಅಲ್ಲಿರುವ ಕಸಬರಿಗೆಯನ್ನೇ ಬಳಸುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಆ ಕಸಬರಿಗೆಯನ್ನು ಆಚೆ ಹಾಕಿ. ನೀವು ಹ“ಸ ಕಸಬರಿಗೆ ಖರೀದಿಸಿ, ಬಳಸಬೇಕು.

- Advertisement -

Latest Posts

Don't Miss