Thursday, November 21, 2024

Latest Posts

Spiritual: ಮಕ್ಕಳಿಗೆ ಎಂದಿಗೂ ಇಂಥ ಹೆಸರನ್ನು ಇಡಬೇಡಿ

- Advertisement -

Spiritual: ಪೋಷಕರ ಜೀವನದಲ್ಲಿ ಅತ್ಯಂತ ಮಹತ್ವದ ದಿನ ಅಂದ್ರೆ, ಅವರು ಹೆತ್ತ ಮಕ್ಕಳ ನಾಮಕರಣ ದಿನ. ಗ್ರ್ಯಾಂಡ್ ಆಗಿ, ಪದ್ಧತಿ ಪ್ರಕಾರವಾಗಿ ನಾಮಕರಣ ಮಾಡಬೇಕು. ಮಗುವಿಗೆ ಚೆಂದದ ಹೆಸರನ್ನಿಡಬೇಕು ಅನ್ನೋ ಆಸೆ ಇರುತ್ತದೆ. ಅಲ್ಲದೇ, ಆ ಹೆಸರನ್ನು ನಾಲ್ಕು ಜನ ಹೊಗಳಬೇಕು ಅಂತಲೂ ಆಸೆ ಇರತ್ತೆ. ಆದರೆ, ಪೋಷಕರು ಗೊತ್ತಿಲ್ಲದೇ, ಕೆಲ ಹೆಸರನ್ನು ಮಕ್ಕಳಿಗೆ ಇಡುತ್ತಾರೆ. ಆದರೆ, ಆ ಹೆಸರು ಮಕ್ಕಳ ಭವಿಷ್ಯವನ್ನೇ ಹಾಳು ಮಾಡುತ್ತದೆ. ಇದು ಕೆಲವರಿಗೆ ನಂಬುವುದಿಲ್ಲ. ಆದರೂ ಸತ್ಯ. ಹಾಗಾದ್ರೆ ಮಕ್ಕಳಿಗೆ ಯಾವ ರೀತಿಯ ಹೆಸರು ಇಡಬಾರದು ಅಂತಾ ತಿಳಿಯೋಣ ಬನ್ನಿ.

ಸೀತೆ: ಹೆಣ್ಣು ಮಕ್ಕಳಿಗೆ ಸೀತೆಯ ಹೆಸರು ಇಡಬಾರದು. ಆಕೆಗಾದ ಹಾಗೇ ಈ ಮಕ್ಕಳಿಗೂ ಕಷ್ಟ ಬರುತ್ತದೆ ಅಂತಾ ಹೇಳುತ್ತಾರೆ. ಅಲ್ಲದೇ, ಎಷ್ಟೋ ಹೆಣ್ಣು ಮಕ್ಕಳ ಪರಿಸ್ಥಿತಿ ಅದೇ ರೀತಿಯಾಗಿದೆ. ವಿವಾಹದ ಬಳಿಕ, ಅವರ ಜೀವನ ಮೂಲೆಗುಂಪಾಗುತ್ತದೆ. ಕಷ್ಟದ ಪರಿಸ್ಥಿತಿ ಎದುರಾಗುತ್ತದೆ. ಸೀತಮ್ಮಾ, ಸೀತಾ, ಜಾನಕಿ, ಮೈಥಿಲಿ, ವೈದೇಹಿ, ಊರ್ವಿಜಾ, ಪ್ರಾರ್ಥವಿ ಇವಿಷ್ಟು ಸೀತೆಯ ಹೆಸರು.

ಅಶ್ವತ್ಥಾಮ: ಅಶ್ವತ್ಥಾಮ ಗುರು ದ್ರೋಣಾಚಾರ್ಯರ ಮಗ. ಅಶ್ವತ್ಥಾಮನಿಗೆ ಅಮರತ್ವದ ವರವಿತ್ತು. ಆದರೆ, ದುರ್ಜನರ ಸಂಗದಿಂದ ಶಾಪಕ್ಕೆ ಗುರಿಯಾದ. ಕ್ರೌರತ್ವ ತುಂಬಿಕೊಂಡ. ಹಾಗಾಗಿ ಅಶ್ವತ್ಥಾಮ ಎಂಬ ಹೆಸರು ಚೆಂದವಿದ್ದರೂ, ಆ ಹೆಸರನ್ನು ಮಕ್ಕಳಿಗೆ ಇಡುವುದಿಲ್ಲ.

ಪಾಂಚಾಲಿ: ಪಾಂಚಾಲಿ ಎಂದರೆ ದ್ರೌಪದಿ. ಬುಡಕಟ್ಟು ಜನಾಂಗದಲ್ಲಿ ದ್ರೌಪದಿ ಎಂಬ ಹೆಸರನ್ನಿಡಲಾಗುತ್ತದೆ. ಆದರೆ ದ್ರೌಪದಿ, ಪಾಂಚಾಲಿ ಎಂಬ ಹೆಸರನ್ನಿಟ್ಟರೆ, ಅಂಥವರು ವಿವಾಹದ ಬಳಿಕ, ಹಲವು ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಲಾಗಿದೆ.

- Advertisement -

Latest Posts

Don't Miss