Spiritual: ಲಕ್ಷ್ಮೀ ದೇವಿಯ ಆಶೀರ್ವಾದ ಸಿಕ್ಕರೆ, ಜೀವನ ಆರಾಮದಾಯಕವಾಾಗಿರುತ್ತದೆ ಅಂತಾ ಎಲ್ಲರಿಗೂ ತಿಳಿದಿದೆ. ಇದಕ್ಕೆ ಕಾರಣ ದುಡ್ಡು. ಹಣವಿದ್ದರೆ, ಏನೂ ಬೇಕಾದರೂ ಖರೀದಿಸಬಹುದು. ಕೆಲವರು ಹಣದಿಂದ ನೆಮ್ಮದಿ ಖರೀದಿಸಲಾಗುವುದಿಲ್ಲ ಅಂತಾ ಹೇಳುತ್ತಾರೆ. ಆದರೆ ನೆಮ್ಮದಿ ಹಾಳಾಗಲು ಪ್ರಮುಖ ಕಾರಣವೇ ಹಣ. ಹಾಗಾಗಿ ಹಣವಿದ್ದರು, ಅತ್ಯುತ್ತಮ ಜೀವನ ನಡೆಸುತ್ತಾರೆ.
ಹಾಗೆ ಹಣವಿರಬೇಕು ಅಂದ್ರೆ ನಮ್ಮ ಮೇಲೆ ಲಕ್ಷ್ಮೀ ದೇವಿಯ ಕೃಪೆ ಇರಬೇಕು. ಹಾಗೆ ಕೃಪೆ ಇರಬೇಕು ಅಂದ್ರೆ, ನಾವು ಲಕ್ಷ್ಮೀ ದೇವಿಯನ್ನು ಆರಾಧಿಸಬೇಕು. ಪೂಜೆ ಮಾಡಬೇಕು. ಆಕೆಗೆ ಇಷ್ಟವಾಗುವ ವಸ್ತುಗಳನ್ನು ಇರಿಸಿ, ಪೂಜಿಸಬೇಕು. ಹಾಗಾಗಿ ನಾವಿಂದು ಶುಕ್ರವಾರ ಪೂಜೆಗೆ ಲಕ್ಷ್ಮೀ ದೇವಿಗೆ ಏನೇನು ಇರಿಸಿ ಪೂಜಿಸಬೇಕು ಅಂತಾ ಹೇಳಲಿದ್ದೇವೆ.
ಕಮಲದ ಹೂವು: ಕಮಲದ ಹೂವಿನಿಂದ ಲಕ್ಷ್ಮೀ ದೇವಿಯನ್ನು ಪೂಜಿಸಬೇಕು. ಹೀಗೆ ಮಾಡಿದ್ದಲ್ಲಿ, ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆಂಬ ನಂಬಿಕೆ ಇದೆ. ಏಕೆಂದರೆ ಆಕೆ ಕುಳಿತಿರುವುದೇ ಕಲ್ಲಿನ ಮೇಲೆ. ಹಾಗಾಗಿಯೇ ಆಕೆ ಚಂಚಲೆ ಎನ್ನಲಾಗುತ್ತದೆ. ಅಂಥ ಚಂಚಲೆಯ ಕೃಪೆ ಸದಾ ನಿಮ್ಮ ಮೇಲಿರಬೇಕು ಅಂದ್ರೆ ನೀವು ಲಕ್ಷ್ಮೀ ದೇವಿಗೆ ಶುಕ್ರವಾರದಂದು ಕಮಲದ ಹೂವಿನಿಂದ ಪೂಜಿಸಬೇಕು.
ಕಮಲದ ಬೀಜ: ಕಮಲದ ಬೀಜದಿಂದ ಹಾರ ತಯಾರಿಸಲಾಗುತ್ತದೆ. ನೀವು ಶುಕ್ರವಾರದ ದಿನ ಲಕ್ಷ್ಮೀ ದೇವಿಯ ಸ್ತೋತ್ರ ಸ್ಮರಿಸುವಾಗ, ಕಮಲದ ಬೀಜದ ಹಾರವನ್ನು ಹಿಡಿದು ಸ್ತೋತ್ರ ಸ್ಮರಿಸಿದರೆ, ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಿರುತ್ತದೆ.
ರೋಸ್ ವಾಟರ್: ಅಂದರೆ ಗುಲಾಬಿ ದ್ರವ್ಯ. ಇದರ ಪರಿಮಳ ಮನೆ ತುಂಬ ಇದ್ದರೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿಯೇ ಮದುವೆ- ಇತರೇ ಶುಭ ಕಾರ್ಯಕ್ರಮದಲ್ಲಿ ರೋಸ್ ವಾಟರ್ ಸಿಂಪಡಿಸಲಾಗುತ್ತದೆ. ಅಲ್ಲದೇ ಶುಕ್ರವಾರದಂದಾರೂ ನೀವು ಮನೆಯಲ್ಲಿ ರೋಸ್ ವಾಟರ್ ಸಿಂಪಡಿಸಬೇಕು. ಸ್ವಲ್ಪ ಗುಲಾಬಿ ದ್ರವ್ಯವನ್ನು ನಿಮ್ಮ ಸ್ನಾನದ ನೀರಿಗೆ ಹಾಕಿ ಬಳಸಿದರೆ ಇನ್ನೂ ಉತ್ತಮ.
ಕಲ್ಲು ಸಕ್ಕರೆ: ದೇವಿಗೆ ನೀವು ಮೃಷ್ಟಾನ್ನ ಭೋಜನ ಮಾಡಿ ಬಡಿಸಲು ಸಾಧ್ಯವಾಗದಿದ್ದಲ್ಲಿ, ನೀವು ಕಲ್ಲು ಸಕ್ಕರೆಯನ್ನೇ ನೈವೇದ್ಯವನ್ನಾಗಿ ಇರಿಸಬಹುದು.
ಹಾಲಿನ ಪಾಯಸ: ಇನ್ನು ನೈವೇದ್ಯ ಮಾಡುವುದಿದ್ದರೆ, ಹಾಲು-ಸಕ್ಕರೆಯಿಂದ ಮಾಡಿದ ಪಾಯಸ ಲಕ್ಷ್ಮೀ ದೇವಿಗೆ ಪ್ರಿಯವಾಗಿರುತ್ತದೆ. ಹಾಾಗಾಗಿ ಹಲವರು ಶುಕ್ರವಾರದ ಪೂಜೆಯ ಸಮಯದಲ್ಲಿ ಲಕ್ಷ್ಮೀ ದೇವಿಗೆ ಹಾಲು-ಸಕ್ಕರೆ-ಶ್ಯಾವಿಗೆ-ಅಕ್ಕಿ- ಸಾಬಕ್ಕಿ ಹೀಗೆ ಬೇರೆ ಬೇರೆ ರೀತಿಯ ಪಾಯಸ ಮಾಡಿ ನೈವೇದ್ಯ ಮಾಡುತ್ತಾರೆ.