Tuesday, September 16, 2025

Latest Posts

Spiritual: ಈ 4 ಜನರ ಅಂತ್ಯಸಂಸ್ಕಾರವನ್ನು ಕಾಶಿಯಲ್ಲಿ ಮಾಡಲಾಗುವುದಿಲ್ಲ.

- Advertisement -

Spiritual: ಕಾಶಿಗೆ ಹೋಗಿ ಸಾವನ್ನಪ್ಪಿ, ಅಲ್ಲಿ ನಮ್ಮ ಅಂತ್ಯಸಂಸ್ಕಾರ ನಡೆದರೆ, ನಮಗೆ ಜನ್ಮ ಜನ್ಮಂತರದ ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ಮಾತಿದೆ. ಹಾಗಾಗಿಯೇ ಬೇರೆ ಕಡೆಯಿಂದ ಬಂದ ರೋಗಿಗಳು, ವೃದ್ಧರಿಗೆ ಅಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗುತ್ತದೆ. ಅವರ ಮರಣದ ಬಳಿಕ, ಅಲ್ಲೇ ಅವರ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಆದರೆ 4 ಜನರ ಅಂತ್ಯ ಸಂಸ್ಕಾರವನ್ನು ಮಾತ್ರ ಅಲ್ಲಿ ಮಾಡಲಾಗುವುದಿಲ್ಲ. ಹಾಗಾದ್ರೆ ಯಾರ ಅಂತ್ಯಸಂಸ್ಕಾರವನ್ನು ಅಲ್ಲಿ ಮಾಡಲಾಗುವುದಿಲ್ಲ ಮತ್ತು ಏಕೆ ಮಾಡಲಾಗುವುದಿಲ್ಲ ಅಂತ ತಿಳಿಯೋಣ ಬನ್ನಿ..

ಮಕ್ಕಳ ಅಂತ್ಯಕ್ರಿಯೆ : 12 ವಯಸ್ಸಕ್ಕೂ ಚಿಕ್ಕ ಮಕ್ಕಳು ಸಾಾವನ್ನಪ್ಪಿದರೆ, ಅಂಥವರ ದೇಹವನ್ನು ಕಾಶಿಯಲ್ಲಿ ದಹಿಸಲಾಗುವುದಿಲ್ಲ. ಏಕೆಂದರೆ, ಅಂಥ ಮಕ್ಕಳು ಪಾಪಗಳಿಂದ ಮುಕ್ತರಾಗಿರುತ್ತಾರೆ. ಹಾಗಾಗಿ ಚಿಕ್ಕ ಮಕ್ಕಳ ಶವಸಂಸ್ಕಾರವನ್ನು ಕಾಶಿಯಲ್ಲಿ ಮಾಡಲಾಗುವುದಿಲ್ಲ.

ಗರ್ಭಿಣಿಯರ ಅಂತ್ಯಕ್ರಿಯೆ : ಗರ್ಭಿಣಿಯರ ಉದರದಲ್ಲಿ ಮಗು ಇರುವ ಕಾರಣ ಗರ್ಭಿಣಿಯನ್ನು ಹೂಳಲಾಗುತ್ತದೆ. ಇದೇ ಕಾರಣಕ್ಕೆ ಕಾಶಿಯಲ್ಲಿ ಗರ್ಭಿಣಿಯರ ಶವಸಂಸ್ಕಾರ ಮಾಡಲಾಗುವುದಿಲ್ಲ.

ಸಂತರ ಅಂತ್ಯಕ್ರಿಯೆ : ಸಂತರ ಶವವನ್ನು ನದಿಯಲ್ಲಿ ಬಿಡಲಾಗುತ್ತದೆ. ಅಥವಾ ಮಣ್ಣಿನಲ್ಲಿ ಹೂಳಲಾಗುತ್ತದೆ. ಏಕೆಂದರೆ, ಅವರು ತಮ್ಮ ಜೀವನದಲ್ಲಿ ಬ್ರಹ್ಮಚರ್ಯ ಪಾಲನೆ ಮಾಡಿ, ದೇವರ ಭಕ್ತಿ, ಜಪ-ತಪ ಮಾಡಿ, ಪುಣ್ಯ ಸಂಪಾದಿಸಿರುತ್ತಾರೆ. ಹಾಗಾಗಿ ಅವರನ್ನು ದಹಿಸಲಾಗುವುದಿಲ್ಲ. ಇದೇ ಕಾರಣಕ್ಕೆ ಕಾಶಿಯಲ್ಲಿ ಸಂತರ ಶವಸಂಸ್ಕಾರ ಮಾಡಲಾಗುವುದಿಲ್ಲ.

ಹಾವು ಕಚ್ಚಿ ಮರಣಿಸಿದವರ ಅಂತ್ಯಕ್ರಿಯೆ : ಹಾವು ಕಚ್ಚಿ ಯಾರು ಸಾಯುತ್ತಾರೋ, ಅವರ ಮೆದುಳು 21 ದಿನ ಸಕ್ರಿಯವಾಗಿರುತ್ತದೆಯಂತೆ. ಹಾಗಾಗಿ ಹಾವು ಕಚ್ಚಿ ಸತ್ತವರ ಶವವನ್ನು ಕಾಶಿಯಲ್ಲಿ ದಹಿಸಲಾಗುವುದಿಲ್ಲ.

- Advertisement -

Latest Posts

Don't Miss