Spiritual: ಮದುವೆ ಅಂದ್ರೆ ಸಂಭ್ರಮದ ಕಾರ್ಯಕ್ರಮ. ಸುಂದರವಾಾದ ಜೀವನ ನಿರ್ಮಿಸಲು ಸಿಗುವ ಅದ್ಭುತ ಮತ್ತು ಏಕೈಕ ಅವಕಾಶ. ಆದರೆ ನಾವು ಹೇಗೆ ಮದುವೆಯಾದೆವು ಅನ್ನೋದು ಮುಖ್ಯವಲ್ಲ. ಬದಲಾಗಿ ನಾವು ಹೇಗೆ ಜೀವನ ಮಾಡುತ್ತಿದ್ದೇವೆ ಅನ್ನೋದು ಮುಖ್ಯ. ಹಾಗೆ ಸುಂದರ ಜೀವನ ನಮ್ಮದಾಗಬೇಕು ಅಂದ್ರೆ, ಮದುವೆಯೂ ಪದ್ಧತಿ ಪ್ರಕಾರವಾಗಿ ನಡೆಯಬೇಕು. ಹಾಗಾದ್ರೆ ಹಿಂದೂ ಪದ್ಧತಿಯಲ್ಲಿ ನಡೆಯುವ ಮದುವೆ ಹೇಗಿರಬೇಕು ಅಂತಾ ತಿಳಿಯೋಣ ಬನ್ನಿ..
ಅರಿಶಿನ ಶಾಸ್ತ್ರ: ಹಿಂದೂ ಪದ್ಧತಿಯಲ್ಲಿ ನಡೆಯುವ ಮದುವೆಯಲ್ಲಿ ಅರಿಶಿನ ಶಾಸ್ತ್ರ ಮಾಡಲೇಬೇಕು. ಅರಿಶಿನದಲ್ಲಿ ನಕಾರಾತ್ಮಕ ಶಕ್ತಿ ಹೋಗಲಾಡಿಸುವ ಗುಣವಿದೆ. ಹಾಗಾಗಿ ಮದುವೆಗೂ 3 ದಿನ ಮುಂಚೆ ಹಳದಿ ಶಾಸ್ತ್ರ ಮಾಡಲಾಗುತ್ತದೆ. ಈ ಶಾಸ್ತ್ರದ ಬಳಿಕ, ವಧು ವರರು ಮನೆಯಿಂದ ಆಚೆ ಹೋಗುವಂತಿಲ್ಲ.
ಮೆಹೆಂದಿ ಶಾಸ್ತ್ರ: ಮೆಹೆಂದಿ ಶಾಸ್ತ್ರವನ್ನು ಗ್ರ್ಯಾಂಡ್ ಆಗಿ ಮಾಡದಿದ್ದರೂ, ವಧು ಮತ್ತು ವರನ ಕೈಗೆ ಮೆಹೆಂದಿ ಹಚ್ಚುತ್ತಾರೆ. ಏಕೆಂದರೆ, ಇದು ಬರೀ ಚೆಂದಕ್ಕೆ ಮಾತ್ರವಲ್ಲ. ಇದರಿಂದ ದೇಹ ತಂಪಾಗುತ್ತದೆ. ಅಲ್ಲದೇ ಕೆಲವು ಕಡೆ ಮೆಹೆಂದಿಯ ಬಣ್ಣ ನೋಡಿ, ಆಕೆಗೆ ವರಿಸುವವನು ಎಷ್ಟು ಪ್ರೀತಿ ಮಾಡುತ್ತಾನೆಂದು ಅಂದಾಜಿಸುತ್ತಾರೆ.
ಸಪ್ತಪದಿ: ಸಪ್ತಪದಿ ತುಳಿಯದೇ ಹಿಂದೂ ವಿವಾಹ ಅಪೂರ್ಣವಾಗುತ್ತದೆ. ಹಾಗಾಗಿ ಅಗ್ನಿದೇವನಿಗೆ 7 ಸುತ್ತು ಪ್ರದಕ್ಷಿಣೆ ಹಾಕಿ, 7 ಪ್ರತಿಜ್ಞೆ ಮಾಡಲಾಗುತ್ತದೆ. ಹಾಗಾಗಿ ಇದನ್ನು ಸಪ್ತಪದಿ ಎನ್ನಲಾಾಗಿದೆ.
ಕನ್ಯಾದಾನ: ಮದುವೆ ಮಾಡುವಾಗ, ವಧುವಿನ ತಂದೆ ತಾಯಿ ವಧುವನ್ನು ವರನಿಗೆ ಅರ್ಪಿಸುತ್ತಾರೆ. ನಮ್ಮ ಮಗಳು ಇನ್ನು ನಿಮ್ಮ ಜವಾಬ್ದಾರಿ ಎನ್ನುತ್ತಾರೆ. ಹೀಗೆ ಅರ್ಪಿಸುವಾಗ, ಕೆಲವು ಪದ್ಧತಿಗಳು ಇರುತ್ತದೆ. ಈ ಪ್ರಕ್ರಿಯೆಯನ್ನು ಕನ್ಯಾದಾನ ಎನ್ನುತ್ತಾರೆ. ಕನ್ಯಾದಾನ ಮಾಡುವುದರಿಂದ ಜನ್ಮ ಜನ್ಮದ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗಿದೆ.