Spiritual: ಗಣಪತಿ ಪೂಜೆಗೆ 21 ಗರಿಕೆ ಇಡಲು ಕಾರಣವೇನು..?

Spiritual: ಲಕ್ಷ್ಮೀ ದೇವಿಗೆ ಕೆಂಪು ಹೂವು, ಶ್ರೀಕೃಷ್ಣನಿಗೆ ಬೆಣ್ಣೆ, ಶಿವನಿಗೆ ನೀರು, ವಿಷ್ಣುವಿಗೆ ತುಳಸಿ ಹೇಗೆ ಪ್ರಿಯವೋ ಅದೇ ರೀತಿ ಮೋದಕ ಪ್ರಿಯನಾದ ಗಣಪನಿಗೆ ಗರಿಕೆ ಪ್ರಿಯ. ಹಾಗಾದರೆ ನಾವು ನಮ್ಮ ಆಸೆ ಈಡೇರಬೇಕೆಂದು ಪ್ರಾರ್ಥಿಸಿ, ಗಣಪನಿಗೆ ಏಕೆ ಗರಿಕೆ ಇಡುತ್ತೇವೆ ಅಂತಾ ತಿಳಿಯೋಣ ಬನ್ನಿ..

ಲೋಕದಲ್ಲಿ ಎಲ್ಲರಿಗೂ ಉಪದ್ರ ನೀಡುತ್ತಿದ್ದ ಅನಲಾಸುರನ ಸಂಹಾರಕ್ಕಾಗಿ ದೇವಾದಿದೇವತೆಗಳು, ಪಾರ್ವತಿಯ ಬಳಿ ಬರುತ್ತಾರೆ. ಆಗ ಪಾರ್ವತಿಯ ಜತೆಯಿದ್ದ ಗಣೇಶನಿಗೆ ಅನಲಾಸುರನ ಮೇಲೆ ಕೋಪ ಬಂದು, ಆತನ ಮೇಲೆ ಪ್ರಹಾರ ಮಾಡುತ್ತಾನೆ. ಆತನಿಗೆ ಏನೇ ಮಾಡಿದರೂ, ಆತ ಮತ್ತೆ ಮತ್ತೆ ಮರಳಿ ಬರುತ್ತಿದ್ದುದ್ದನ್ನು ಕಂಡ ಗಣೇಶ, ಆತನನ್ನು ನುಂಗಿಯೇ ಬಿಡುತ್ತಾನೆ.

ಆಗ ಗಣೇಶನಿಗೆ ಉದರ ಬೇನೆ ಬರುತ್ತದೆ. ಹೊಟ್ಟೆ ಉರಿಯಲು ಪ್ರಾರಂಭಿಸುತ್ತದೆ. ಹಾಗಾಗಿ ಕಶ್ಯಪ ಋಷಿಗಳು ಗಣೇಶನಿಗೆ 21 ಗರಿಕೆಯನ್ನು ತಿನ್ನಲು ನೀಡುತ್ತಾರೆ. ಆತ 21 ಗರಿಕೆ ಗಂಟು ಸೇವಿಸಿದ ಬಳಿಕ ತಣ್ಣಗಾಗುತ್ತಾನೆ. ಹೀಗಾಗಿಯೇ ಗಣಪನಿಗೆ 21 ಗರಿಕೆ ಗಂಟು ನೀಡಿದರೆ, ಮನದ ಆಸೆ ಈಡೇರಿಸುತ್ತಾನೆ ಅನ್ನೋ ನಂಬಿಕೆ ಇದೆ.

ಗಣೇಶ ಚತುರ್ಥಿ, ಸಂಕಷ್ಟ ಚತುರ್ಥಿ, ಮಂಗಳವಾರ, ಬುಧವಾರದಂದು ಗಣೇಶನಿಗೆ ಪೂಜಿಸುವ ವೇಳೆ 21 ಗರಿಕೆ ಗಂಟು ಅಥವಾ, 21 ಗರಿಕೆಗಳನ್ನು ಇರಿಸಿ ಪೂಜಿಸುವುದು ಉತ್ತಮ ಅಂತಾ ಹೇಳಲಾಗುತ್ತದೆ.

About The Author