Spiritual: ಗಣೇಶನಿಗೆ ನೀವು ಲಾಡು, ಪಂಚಕಜ್ಜಾಯ, ಕಡುಬು ಹೀಗೆ ಹಲವು ನೈವೇದ್ಯ ಮಾಡುವುದನ್ನು ನೋಡಿರುತ್ತೀರಿ. ಅಲ್ಲದೇ, ಹಲವು ಹೂವುಗಳಿಂದ ಅಲಂಕಾರ ಮಾಡಿರುವುದನ್ನೂ ನೋಡಿರುತ್ತೀರಿ. ಗರಿಕೆ ಹಾಕಿ ಆರಾಧಿಸುವುದನ್ನೂ ನೀವು ನೋಡಿರುತ್ತೀರಿ. ಆದರೆ ಗಣೇಶನಿಗೆ ಎಂದಿಗೂ ಯಾರೂ ತುಳಸಿ ಹಾಕಿದ್ದನ್ನು ನೀವು ನೋಡಿರುವುದಿಲ್ಲ. ಹಾಗಾದ್ರೆ ಗಣೇಶನಿಗೆ ಏಕೆ ತುಳಸಿ ಬಳಸುವುದಿಲ್ಲ ಅಂತಾ ತಿಳಿಯೋಣ ಬನ್ನಿ..
ಯಾವುದೇ ಪೂಜೆ ಮಾಡುವಾಗ, ಶುಭಕಾರ್ಯ ಮಾಡುವಾಗ ಪ್ರಪ್ರಥಮವಾಗಿ ನಾವು ಗಣೇಶನಿಗೆ ಪೂಜೆ ಸಲ್ಲಿಸುತ್ತೇವೆ. ಏಕೆಂದರೆ ವಿಘ್ನನಿವಾರಕನಿಗೆ ಪೂಜೆ ಮಾಡಿದರೆ, ಆ ಕೆಲಸದಲ್ಲಿ ಅಡೆತಡೆ ಬರುವುದಿಲ್ಲವೆಂಬ ನಂಬಿಕೆ ಇದೆ. ಹಾಗಾಗಿಯೇ ಗಣೇಶನನ್ನು ಪ್ರಥಮ ಪೂಜಿತನೆಂದೇ ಕರೆಯಲಾಗುತ್ತದೆ.
ಇನ್ನು ನಾವು ತುಳಸಿಯನ್ನು ಏಕೆ ಗಣೇಶನ ಪೂಜೆಗೆ ಬಳಸೋದಿಲ್ಲ ಎನ್ನುವುದಕ್ಕೆ 1 ಕಥೆಯೇ ಇದೆ. ಅದೇನೆಂದರೆ, ತುಳಸಿ ಮತ್ತು ಗಣೇಶನ ಜಗಳದ ಕಥೆ.
ಧರ್ಮರಾಜನ ಮಗಳಾಗಿದ್ದ ತುಳಸಿ ಅಂದರೆ ವೃಂದಾದೇವಿ ಗಂಗಾನದಿ ತೀರಕ್ಕೆ ಬರುತ್ತಾಳೆ. ಅಲ್ಲಿ ಗಣೇಶ ತಪಸ್ಸು ಮಾಡುತ್ತಿರುತ್ತಾನೆ. ವಿಷ್ಣುವಿನ ಪೂಜೆಗೆ ಬಂದಿದ್ದ ವೃಂದಾ ಗಣೇಶನಿಗೆ ಮನಸೋಳುತ್ತಾಳೆ. ಮದುವೆಯಾದರೆ ಇವನನ್ನೇ ಆಗಬೇಕು ಎಂದು ತಪಸ್ಸು ಮಾಡುತ್ತಿದ್ದ ಗಣೇಶನ ಮುಖಕ್ಕೆ ನೀರು ಚುಮಕಿಸಿ, ಗಣೇಶನ ತಪಸ್ಸು ಭಂಗ ಮಾಡುತ್ತಾಳೆ.
ಅಲ್ಲದೇ ತನ್ನ ಪರಿಚಯ ಮಾಡಿ, ತನನ್ನು ವಿವಾಹವಾಗುವಂತೆ ವೃಂದಾ ಗಣೇಶನಲ್ಲಿ ಕೇಳಿಕ“ಳ್ಳುತ್ತಾಳೆ. ಆದರೆ ತಾನು ಬ್ರಹ್ಮಚಾರಿಯಾಗಿರಬೇಕು ಎಂಬ ಕಾರಣಕ್ಕೆ, ನಾನು ನಿನ್ನನ್ನು ಮದುವೆಯಾಗಲಾರೆ ಎಂದು ಗಣೇಶ ತುಳಸಿಯನ್ನು ವಿವಾಹವಾಗಲು ನಿರಾಕರಿಸುತ್ತಾನೆ.
ಇದರಿಂದ ವೃಂದಾಳಿಗೆ ಕೋಪ ಬರುತ್ತದೆ. ಆಗ ಗಣೇಶನನ್ನು ಕುರಿತು ನಿನಗೆ 2 ಮದುವೆಯಾಗಲಿ ಎಂದು ವೃಂದಾ ಶಾಪ ನೀಡುತ್ತಾಳೆ. ಆಗ ನೀನು ನಾನು ಬ್ರಹ್ಮಚಾರಿ ಎಂದು ಹೇಳಿದರೂ ಕೇಳದೇ, 2 ಮದುವೆಯಾಗಲಿ ಎಂದು ಶಾಪ ನೀಡಿರುವೆ. ಹಾಗಾಗಿ ನಿನ್ನ ಮದುವೆ ರಾಕ್ಷಸನ ಜತೆಯಾಗಲಿ ಎಂದು ಗಣೇಶ ಮರುಶಾಪ ನೀಡುತ್ತಾನೆ.
ಆಗ ವಂದಾಳಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಕ್ಷಮೆ ಕೇಳುತ್ತಾಳೆ. ಆಗ ಗಣೇಶ ನೀನು ಮುಂದಿನ ಜನ್ಮದಲ್ಲಿ ತುಳಸಿಯಾಗಿ, ಪವಿತ್ರ ಗಿಡವಾಗುತ್ತಿಯಾ. ಭೂಲೋಕದಲ್ಲಿ ನಿನ್ನನ್ನು ಪೂಜಿಸಲಾಗುತ್ತದೆ ಎನ್ನುತ್ತಾರೆ. ಅಲ್ಲದೇ ಶ್ರೀಕೃಷ್ಣ ಮತ್ತು ವಿಷ್ಣುಪೂಜೆಯಲ್ಲಿ ನಿನಗೆ ಪ್ರಥಮ ಆದ್ಯತೆ ಇರುತ್ತದೆ. ಆದರೆ ನನ್ನ ಪೂಜೆಯೃಲ್ಲಿ ನೀನು ನಿಷಿದ್ಧವೆನ್ನುತ್ತಾರೆ. ಹೀಗಾಗಿಯೇ ಗಣೇಶನ ಪೂಜೆಯಲ್ಲಿ ತುಳಸಿ ಬಳಸುವುದಿಲ್ಲ.