Spiritual: ಶನಿದೇವನೆಂದರೆ, ಎಲ್ಲರಿಗೂ ಭಯವೇ. ಏಕೆಂದರೆ, ಶನಿ ಹಿಡಿದರೆ, ಬರೀ ಕಷ್ಟವೇ ಬರುತ್ತದೆ ಅನ್ನೋದು ಹಲವರ ಮಾತು. ಆದರೆ, ನಾವು ಶನಿದೆಸೆಯಲ್ಲಿದ್ದಾಗ, ಶನಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ, ಪೂಜಿಸಿದರೆ, ಶನಿಯ ಕಾಟ ಕಡಿಮೆಯಾಗುತ್ತದೆ. ಇನ್ನು ಶನಿಯನ್ನು ಛಾಯಾ ಪುತ್ರ ಎಂದು ಕರೆಯುತ್ತಾರೆ. ಅಲ್ಲದೇ, ಶನಿಕಾಟವಿದ್ದಾಗ, ಅವನ ಮೇಲೆ ಶನಿ ಛಾಯೆ ಇದೆ ಎನ್ನುತ್ತಾರೆ. ಹಾಗಾದ್ರೆ ಶನಿಯನ್ನು ಛಾಯಾ ಪುತ್ರ ಎಂದು ಕರೆಯಲು ಕಾರಣವೇನು..? ಶನಿ ಕಪ್ಪಗಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಒಮ್ಮೆ ಸೂರ್ಯನ ಪತ್ನಿ ಸೂರ್ಯನಿಂದ ಕೊಂಚ ದಿನ ದೂರವಿರಲು ನಿರ್ಧರಿಸುತ್ತಾಳೆ. ಆಕೆ ತನ್ನ ಅಪ್ಪ ಅಮ್ಮನ ಬಳಿ ಹೋಗುತ್ತಾಳೆ. ಆದರೆ ಈ ವಿಷಯ ಸೂರ್ಯನಿಗೆ ಗೊತ್ತಾಗಬಾರದು ಎಂದು, ತನ್ನದೇ ಪ್ರತಿಬಿಂಬ ರಚಿಸಿ, ಅದಕ್ಕೆ ಛಾಯಾ ಎಂದು ನಾಮಕರಣ ಮಾಡುತ್ತಾಳೆ. ಮತ್ತು ತಾನು ಸೂರ್‌ಯದೇವನ ಅಕ್ಕಪಕ್ಕದಲ್ಲಿ ಇಲ್ಲ, ನೀನು ನನ್ನ ಪ್ರತಿಬಿಂಬವೆಂದು ಅವರಿಗೆ ಗೊತ್ತಾಗಬಾರದು ಎನ್ನುತ್ತಾಳೆ.
ಆಕೆಯ ಆಜ್ಞೆಯಂತೆ ಛಾಯಾ ಸೂರ್ಯದೇವನ ಬಳಿ ಬರುತ್ತಾಳೆ. ಆದರೆ ಸೂರ್ಯನಿಗೆ ತನ್ನ ಸಮೀಪದಲ್ಲಿ ಇರುವುದು ಪತ್ನಿಯಲ್ಲ, ಆಕೆಯ ಪ್ರತಿಬಿಂಬವೆಂದು ಗೊತ್ತಾಗುವುದಿಲ್ಲ. ಹಾಗಾಗಿ ಛಾಯಾಳೊಂದಿಗೆ ಸೂರ್ಯ ಸಮಾಗಮ ನಡೆಸುತ್ತಾನೆ. ಆಗ ಜನಿಸುವವನೇ ಶನಿದೇವ. ಶನಿದೇವ ಕಪ್ಪು ಬಣ್ಣದವನಾಗಿರುತ್ತಾನೆ. ಸೂರ್ಯ ಇಷ್ಟು ಬೆಳ್ಳಗಿದ್ದರೂ, ತನ್ನ ಪುತ್ರ ಹೇಗೆ ಇಷ್ಟು ಕಪ್ಪು ಎಂದು ಸೂರ್ಯನಿಗೆ ಗೊತ್ತಾಗುವುದಿಲ್ಲ. ಕೊನೆಗೆ ತಾನು ಸಮಾಗಮ ನಡೆಸಿದ್ದು, ಪತ್ನಿಯೊಂದಿಗಲ್ಲ. ಬದಲಾಗಿ ಪತ್ನಿಯ ನೆರಳಿನೊಂದಿಗೆ ಎಂದು ಗೊತ್ತಾಗುತ್ತದೆ.
ಆದರೆ ಶನಿದೇವ ಏಕೆ ಅಷ್ಟು ಕಪ್ಪು ಎಂದರೆ, ಆತ ಛಾಯಾ ಪುತ್ರ. ಮಮತ್ತು ಛಾಯೆ ಎಂದರೆ, ನೆರಳು. ಸೂರ್ಯನ ಪತ್ನಿಯ ನೆರಳಿನಿಂದ ಹುಟ್ಟಿದ ಕಾರಣಕ್ಕೆ ಶನಿ ಅಷ್ಟು ಕಪ್ಪು ಬಣ್ಣದವನಾಗಿದ್ದಾನೆ. ಹಾಗಾಗಿಯೇ ಶನಿಗೆ ಕಪ್ಪು ಎಳ್ಳು ಅರ್ಪಿಸಲಾಗುತ್ತದೆ. ಕಾಗೆ ಶನಿಯ ವಾಹನವಾಗಿದೆ.