Wednesday, August 20, 2025

Latest Posts

Spiritual: ವಾರದ 7 ದಿನಗಳಲ್ಲಿ ಯಾವ ದಿನ ಹೊಸ ಉಡುಪು ಧರಿಸಬಾರದು..?

- Advertisement -

Spiritual: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಜನನದಿಂದ ಮರಣದವರೆಗೂ ಹಲವು ಪದ್ಧತಿಗಳು ಕಾಣಸಿಗುತ್ತದೆ. ಅದೇ ರೀತಿ ನಾವು ಉಡುಪು ಧರಿಸುವ ವಿಷಯದಲ್ಲೂ ಕೆಲವು ಪದ್ಧತಿಗಳಿದೆ. ಅದೇನೆಂದರೆ, ವಾರದ 7 ದಿನಗಳಲ್ಲಿ ನಾವು ಕೆಲ ದಿನ ಹೊಸ ಉಡುಪು ಧರಿಸಬಾರದು. ಹಾಗಾದ್ರೆ ಯಾವ ದಿನ ಹೊಸ ಉಡುಪು ಧರಿಸಬಾರದು ಅಂತಾ ತಿಳಿಯೋಣ ಬನ್ನಿ.

ಸೋಮವಾರ: ಸೋಮವಾರ ಉತ್ತಮವಾದ ದಿನ. ಈ ದಿನ ನೀವು ಹೊಸ ಉಡುಪು ಧರಿಸಬಹುದು. ಶಿವನ ದಿನವಾದ ಸೋಮವಾರ, ಡ್ರೆಸ್ ಖರೀದಿಸಲು ಮತ್ತು ಧರಿಸಲು ಉತ್ತಮ ದಿನವಾಗಿದೆ. ಇದು ಚಂದ್ರನ ದಿನವಾಗಿದೆ. ಈ ದಿನ ಹೊಸ ಉಡುಪು ಧರಿಸಿದರೆ, ಯಶಸ್ಸು ನಿಮ್ಮದಾಗುತ್ತದೆ.

ಮಂಗಳವಾರ: ಮಂಗಳವಾರ ಹನುಮ ಮತ್ತು ಗಣಪನನ್ನು ಪೂಜಿಸುವ ದಿನ. ಈ ದಿನ ಉತ್ತಮ ದಿನವಾದರೂ ಕೂಡ, ಈ ದಿನ ನೀವು ಹೊಸ ಉಡುಪು ಧರಿಸಬಾರದು. ಮತ್ತು ಖರೀದಿಸಬಾರದು. ಅಲ್ಲದೇ ಮಂಗಳವಾರ ಯಾವುದೇ ಶುಭಕಾರ್ಯ ಕೂಡ ಮಾಡಲಾಗುವುದಿಲ್ಲ.

ಬುಧವಾರ: ಬುಧವಾರ ವಿಷ್ಣು ಮತ್ತು ಗಣಪನನ್ನು ಪೂಜಿಸುವ ದಿನ. ಈ ದಿನ ನಾವು ಹೊಸ ಉಡುಪು ಧರಿಸಬಹುದು. ಖರೀದಿಸಲೂಬಹುದು. ಆದರೆ ಈ ದಿನ ಹೊಸ ಉಡುಪು ವಾಶ್ ಮಾಡಬಾರದು. ಏಕೆಂದರೆ ಹಿರಿಯರು ಹೇಳುವ ಪ್ರಕಾರ, ಈ ದಿನ ಹೊಸ ಉಡುಪು ವಾಶ್ ಮಾಡಿದರೆ, ಅದು ತನ್ನ ಬಣ್ಣ ಕಳೆದುಕ“ಳ್ಳುತ್ತದೆ. ಬುಧವಾರ ಹೊಸ ಉಡುಪು ವಾಶ್ ಮಾಡಿದರೆ ಬೂದಿ ಬಣ್ಣವಾಗುತ್ತದೆ ಅಂತಾ ಹಿರಿಯರ ನಂಬಿಕೆ.

ಗುರುವಾರ: ಗುರುವಿನ ದಿನವಾದ ಈ ದಿನ ಹೊಸ ಉಡುಪು ಧರಿಸುವುದು ಮತ್ತು ಖರೀದಿಸುವುದು ಶುಭ ಎನ್ನಲಾಗಿದೆ. ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ, ನೆಮ್ಮದಿ ಎಲ್ಲವೂ ಹೆಚ್ಚುತ್ತದೆ.

ಶುಕ್ರವಾರ: ಶುಕ್ರವಾರ ಹೊಸ ಉಡುಪು ಧರಿಸುವುದರಿಂದ ಲಕ್ಷ್ಮೀ ಅನುಗ್ರಹ ನಿಮ್ಮ ಮೇಲಿರುತ್ತದೆ. ಶುಕ್ರವಾರ ಲಕ್ಷ್ಮೀಯ ಆಶೀರ್ವಾದ ಪಡೆಯಲು ಉತ್ತಮ ದಿನ. ಹೀಗಾಗಿ ಈ ದಿನ ಸ್ವಚ್ಛವಾದ ಉಡುಪು ಧರಿಸಬೇಕು.

ಶನಿವಾರ: ಶನಿವಾರ ಹೊಸ ಉಡುಪು ಧರಿಸಬಾರದು. ಇದರಿಂದ ಅಶುಭವಾಗುವ ಸಾಧ್ಯತೆ ಹೆಚ್ಚು.

ರವಿವಾರ: ಸೂರ್ಯನ ಅನುಗ್ರಹ ಹೆಚ್ಚಾಗಿರುವ ಈ ದಿನ ಹೊಸ ಉಡುಪು ಧರಿಸಬಹುದು. ಇದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

- Advertisement -

Latest Posts

Don't Miss