Spiritual: ಹಬ್ಬವಿದ್ದಾಗ, ಕೆಲವು ಮದುವೆ ಮುಂಜೆ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಕೆಲವು ಈರುಳ್ಳಿ-ಬೆಳ್ಳುಳ್ಳಿ ಹಾಕದೇ, ಅಡುಗೆ ಮಾಡುತ್ತಾರೆ. ಹಾಗಾದ್ರೆ ಶುಭಕಾರ್ಯದ ವೇಳೆ ಏಕೆ ಈರುಳ್ಳಿ-ಬೆಳ್ಳುಳ್ಳಿ ಬಳಸುವುದಿಲ್ಲ ಅಂತಾ ತಿಳಿಯೋಣ ಬನ್ನಿ..
ದೇವತೆಗಳು ಮತ್ತು ರಾಕ್ಷಸರು ಸೇರಿ ಸಂಧಾನ ಮಾಡಿ, ಅಮೃತಕ್ಕಾಗಿ ಸಮುದ್ರಮಥನ ಮಾಡಿದರು. ಅಮೃತ ರಾಕ್ಷಸರ ಕೈ ಸೇರಿದರೆ,. ಅವರು ಚಿರಂಜೀವಿಗಳಾಗುತ್ತಾರೆಂದು ತಿಳಿದ ವಿಷ್ಣು ಮೋಹಿನಿ ರೂಪ ಧರಿಸಿ, ಎಲ್ಲರಿಗೂ ಅಮೃತ ನೀಡಲು ಬಂದನು.
ಈ ವೇಳೆ ಮೋಹಿನಿ ಬರೀ ದೇವತೆಗಳಿಗೆ ಮಾತ್ರ ಅಮೃತ ನೀಡುತ್ತಿರುವುದನ್ನು ಕಂಡ ರಾಹುಕೇತು ಬಂದು ದೇವತೆಗಳ ಬಳಿ ಕುಳಿತರು. ಮೋಹಿನಿ ಅವರಿಗೂ ಅಮೃತ ನೀಡಿದಳು. ಅಮೃತ ರಾಕ್ಷಸರ ದೇಹ ಸೇರಿದರೆ ಅವರೂ ಅಮರರಾಗುತ್ತಾರೆ. ಆದರೆ ಬಳಿಕ ಆಕೆಯ ತಪ್ಪು ಅರಿವಾಗಿ, ಖಡ್ಗದಿಂದ ರಾಹುಕೇತುವಿನ ರುಂಡ ಮುಂಡ ಬೇರೆ ಬೇರೆ ಮಾಡಿದಳು.
ಈ ವೇಳೆ ಅವರ ದೇಹದ ರಕ್ತ ನೆಲಕ್ಕೆ ಬಿದ್ದು, ಅದರಿಂದ ಈರುಳ್ಳಿ-ಬೆಳ್ಳುಳ್ಳಿ ಎಂಬ ತರಕಾರಿಗಳು ಉದ್ಭವವಾಗುತ್ತದೆ. ಹಾಗಾಗಿ ಈ ತರಕಾರಿಗಳನ್ನು ಶುಭಕಾರ್ಯದಲ್ಲಿ ಬಳಸುವುದಿಲ್ಲ. ಆದರೆ ಇದರಲ್ಲೂ ಅಮೃತದ ಅಂಶವಿರುವ ಕಾರಣ, ಇದನ್ನು ಔಷಧಿಯ ರೂಪದಲ್ಲಿ ಪ್ರತಿದಿನ ಅಡುಗೆಗೆ ಬಳಸಲಾಗುತ್ತದೆ.

