Spiritual: ಶನಿದೇವ 1 ರಾಶಿಯಿಂದ ಇನ್ನೊಂದು ರಾಶಿಗೆ ಏಕೆ ನಿಧಾನವಾಗಿ ಚಲಿಸುತ್ತಾನೆ..?- ಕಥೆ 1

Spiritual: ನಿಮ್ಮ ರಾಶಿಯಲ್ಲಿ ಯಾವ ಗ್ರಹವಾದರೂ ಕೆಲ ದಿನ ಅಥವಾ ಕೆಲ ತಿಂಗಳು ಇದ್ದು, ಮುಂದೆ ಸಾಗುತ್ತದೆ. ಆದರೆ ಶನಿದೇವ ಮಾತ್ರ ಯಾವುದಾದರೂ ರಾಶಿಗೆ ಲಗ್ಗೆ ಇರಿಸಿದರೆ, 1ರಿಂದ 2 ವರ್ಷ ಅದೇ ರಾಶಿಯಲ್ಲಿರುತ್ತಾರೆ. ಹಾಗಾದ್ರೆ ಯಾಕೆ ಶನಿದೇವನ ಚಲನೆ ಅಷ್ಟು ನಿಧಾನ ಅಂತಾ ತಿಳಿಯೋಣ ಬನ್ನಿ..

ಶನಿದೇವನ ಚಲನೆ ನಿಧಾನವಾಗಲು ರಾವಣ ಕಾರಣನಂತೆ. ಪುರಾಣ ಕಥೆಗಳ ಪ್ರಕಾರ ರಾವಣ, ಶನಿದೇವನ ಕಾಲು ಮುರಿದಿದ್ದನಂತೆ. ರಾವಣನ ಪತ್ನಿ ಮಂಡೋದರಿ ಗರ್ಭಿಣಿಯಾಗಿದ್ದಾಗ, ರಾವಣನಿಗೆ ತನ್ನ ಮಗ ಅಜೇಯನಾಗಿರಬೇಕು ಎಂಬ ಆಸೆ ಇತ್ತಂತೆ. ಹಾಗಾಗಿ ರಾವಣ ಎಲ್ಲ ಗ್ರಹಗಳೂ ತನ್ನ ಮಗನ ಜಾತಕದಲ್ಲಿ ಶುಭಸ್ಥಾನದಲ್ಲೇ ಇರಬೇಕು ಎಂದು ಆಗ್ರಹಿಸಿದನಂತೆ.

ಆಗ ಎಲ್ಲ ಗ್ರಹಗಳು ಹೆದರಿ, ಶುಭ ಸ್ಥಾನಕ್ಕೆ ಬಂದು ನಿಂತವು. ಆದರೆ ಶನಿದೇವ ಮಾತ್ರ ತಾನು ಶುಭ ಸ್ಥಾನಕ್ಕೆ ಬರುವುದಿಲ್ಲ. ನಾನು ನಿಷ್ಠೆಯಿಂದ ಇರುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದನಂತೆ. ಹೀಗಾಗಿ ರಾವಣನ ಪುತ್ರ ಮೇಘರಾಜನ ಕುಂಡಲಿಯಲ್ಲಿ ಅಕಾಲಮೃತ್ಯು ಭಾಗ್ಯ ಬಂದಿತ್ತು.

ಇದರಿಂದ ಕುಪಿತನಾದ ರಾವಣ, ತನ್ನ ವಿದ್ಯಾಶಕ್ತಿಯನ್ನು ಉಪಯೋಗಿಸಿ, ಶನಿಗ್ರಹವನ್ನು ತನ್ನ ಅಧೀನಕ್ಕೆ ತೆಗೆದುಕ“ಂಡನಂತೆ. ಬಳಿಕ ಶನಿದೇವನ ಕಾಲ ಮೇಲೆ ಗಧಾ ಪ್ರಹಾರ ಮಾಡಿದನಂತೆ. ಹೀಗಾಗಿ ಶನಿದೇವ ನಿಧಾನವಾಗಿ ಚಲಿಸುತ್ತಾನೆ ಅಂತಾ ಹೇಳಲಾಗುತ್ತದೆ. ಇದೇ ವಿಷಯ ಕುರಿತಂತೆ ಬೇರೆ ಕಥೆಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ.

About The Author