Spiritual: ನಿಮಗೆ 3 ಸಮಯ ತಿನ್ನಲು ರುಚಿಕರ, ಆರೋಗ್ಯಕರ ಆಹಾರ ಸಿಗುತ್ತಿದೆ. ನೀವು ನೆಮ್ಮದಿಯಾಗಿದ್ದೀರಿ. ಉಪವಾಸವಿರುವ ಅಗತ್ಯ ನಿಮಗಿಲ್ಲವೆಂದಲ್ಲಿ. ನೀವು ಪುಣ್ಯವಂತರು ಎಂದರ್ಥ. ಎಲ್ಲರ ಪ್ರಕಾರ ಶ್ರೀಮಂತಿಕೆ ಎಂದರೆ, ಬಂಗ್ಲೆ, ಕಾರು, ಹಣ. ಆದರೆ ನಿಜವಾದ ಶ್ರೀಮಂತಿಕೆ ಎಂದರೆ 3 ಸಮಯ ಯಾವುದೇ ರಗಳೆ ಇಲ್ಲದೇ, ಆರಾಮವಾಗಿ ಕುಳಿತು ಆಹಾರ ಸೇವಿಸುವುದು. ಅಂಥ ನೆಮ್ಮದಿ ನೀಡುವ ಆಹಾರವನ್ನು ನಾವು ಏಕೆ ವ್ಯರ್ಥ ಮಾಡಬಾರದು, ಇದರಿಂದ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ನೀವು ತಟ್ಟೆಗೆ ಹಾಕಿಕ“ಂಡ ಆಹಾರವನ್ನು ಪೂರ್ತಿ ತಿಂದು ಮುಗಿಸಬೇಕು. ಬೇಗ ಹೊಟ್ಟೆ ತುಂಬುತ್ತದೆ ಅಂತಾದರೆ, ಸ್ವಲ್ಪವೇ ಬಡಿಸಿಕ“ಳ್ಳಿ. ಆದರೆ ಆಹಾರ ಚೆಲ್ಲಬೇಡಿ. ಇದರಿಂದ ಮನೆಗೆ ದರಿದ್ರ ಆವರಿಸುತ್ತದೆ. ಋಣಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ ಅಂತಾ ಹೇಳಲಾಗಿದೆ. ಎಲ್ಲಿ ಆಹಾರ ವಿನಾಕಾರಣ ಹಾಳಾಗುತ್ತದೆಯೋ, ಅಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ.
ನೀವು ಆಹಾರವನ್ನು ಗೌರವಿಸದಿದ್ದಲ್ಲಿ ಪಿತೃದೋಷಕ್ಕೆ ಗುರಿಯಾಗಬೇಕಾಗುತ್ತದೆ. ಪಿತೃಗಳನ್ನು ಸಂತೃಪ್ತಿಪಡಿಸಲು ಹೇಗೆ ಶ್ರಾದ್ಧ, ಪಿಂಡಕಾರ್ಯ ಮಾಡಬೇಕಾಗುತ್ತದೆಯೋ, ಅದೇ ರೀತಿ ಆಹಾರವನ್ನು ಎಂದಿಗೂ ಹಾಳು ಮಾಡಬೇಡಿ.
ಇನ್ನು ಸುಮ್ಮ ಸುಮ್ಮನೆ ಆಹಾರ ಹಾಳು ಮಾಡುವವರು ನೀವಾಗಿದ್ದರೆ, ಮುಂದಿನ ಜನ್ಮದಲ್ಲಿ ಬಡತನ ಅನುಭವಿಸುವ ಪರಿಸ್ಥಿತಿ ಬರಬಹುದು. ಅಥವಾ ಇದೇ ಜನ್ಮದಲ್ಲಿ ಮುಂದೆ 1 ದಿನ ಆಹಾರವಿಲ್ಲದೇ ಅಳುವ ಪರಿಸ್ಥಿತಿ ಬರಬಹುದು. ಹಾಗಾಗಿ ಅನ್ನವನ್ನು ಹಾಳು ಮಾಡಬೇಡಿ.
ಅನ್ನವೆಂದರೆ ಅನ್ನಪೂರ್ಣೆಶ್ವರಿ. ದೇವರಿಗೆ ಸಮವಾಗಿರುವ ಆಹಾರವನ್ನು ಅವಮಾನಿಸುವುದು, ಅನ್ನಪೂರ್ಣೇಶ್ವರಿಗೆ ಅವಮಾನಿಸುವುದಕ್ಕೆ ಸಮ. ಹಾಗಾಗಿ ಆಹಾರ ವ್ಯರ್ಥ ಮಾಡುವವರು ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ಇನ್ನು ನಿಮ್ಮ ಬಳಿ ಉಳಿದ ಆಹಾರಗಳನ್ನು ಚೆಲ್ಲದೇ, ನಾಯಿ, ಬೆಕ್ಕುಗಳಿಗೆ ಹಾಕಿ. ಇದರಿಂದ ನಿಮ್ಮ ಮನೆಯ ಆಹಾರ ಹಾಳಾಗುವುದಿಲ್ಲ. ಪ್ರಾಣಿಗಳಿಗೂ ಊಟ ನೀಡಿದಂತಾಗುತ್ತದೆ.

