Wednesday, December 4, 2024

Latest Posts

Sports News: ವಿವಾಹಕ್ಕೆ ಸಜ್ಜಾದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ವರನ್ಯಾರು ಗೊತ್ತಾ..?

- Advertisement -

Sports News: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ವಿವಾಹಕ್ಕೆ ಸಜ್ಜಾಗಿದ್ದಾರೆ. ಇದೇ ಡಿಸೆಂಬರ್ 22ಕ್ಕೆ ಸಿಂಧು ಹಸೆಮಣೆ ಏರಲು ಸಜ್ಜಾಗಿದ್ದು, ಅವರನ್ನು ವಿವಾಹವಾಗಲಿರುವ ವರ ಕೂಡ ಸ್ಪೋರ್ಟ್ಸ್‌ಗೆ ಸಂಬಂಧಿಸಿದ ಕೆಲಸವನ್ನೇ ಮಾಡುತ್ತಿದ್ದಾರೆ.

ಹೈದರಾಬಾದ್ ಮೂಲದ ಪೋಸಿಡೆಕ್ಸ್ ಟೆಕ್ನಾಲಜಿ ಎಂಬ ಪ್ರೈವೇಟ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ವೆಂಕಟದತ್ತ ಸಾಯಿ ಎಂಬುವವರನ್ನು ಸಿಂಧು ವಿವಾಹವಾಗುತ್ತಿದ್ದಾರೆ. ವೆಂಕಟದತ್ತ ಸಾಯಿ ಐಪಿಎಲ್ ಟೀಂ ಜೊತೆ ಕೆಲಸ ಮಾಡಿದ್ದರು.

ಈ ಕುರಿತು ಪಿ.ವಿ.ಸಿಂಧು ತಂದೆ ಪಿ.ವಿ.ರಮಣ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಡಿಸೆಂಬರ್ 20ರಿಂದ ಎಲ್ಲ ಶಾಸ್ತ್ರಗಳು ನೆರವೇರಲಿದೆ. ಡಿಸೆಂಬರ್ 22ಕ್ಕೆ ಉದಯಪುರದಲ್ಲಿ ಮದುವೆ ನಡೆಯಲಿದ್ದು, ಡಿಸೆಂಬರ್ 24ಕ್ಕೆ ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಕೆಲ ದಿನಗಳ ಹಿಂದಷ್ಟೇ ಚಿನ್ನದ ಹುಡುಗ ನೀರಜ್ ಯಾದವ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬ್ಯಾಂಡ್ಮಿಂಟನ್ ಬ್ಯಾಟ್ ಹಾಕಿ, ಏನೋ ಹೇಳುವುದಿದೆ ಎಂದಿದ್ದರು. ಸಿಂಧು ಕೂಡ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಜಾವಲಿತ್ ಥ್ರೋ ಫೋಟೋ ಹಾಕಿ, ಸುದ್ದಿಯೊಂದು ಕಾದಿದೆ ಅನ್ನೋ ರೀತಿ ಪೋಸ್ಟ್ ಹಾಕಿದ್ದರು.

ಇದನ್ನು ನೋಡಿ ಅಭಿಮಾನಿಗಳು, ಇವರಿಬ್ಬರು ವಿವಾಹವಾಗಲಿದ್ದಾರೆಂದು ತಿಳಿದರು. ಆದರೆ ಇವರಿಬ್ಬರೂ ಸ್ಪೋರ್ಟ್ಸ್ ವಿಷಯವಾಗಿ ಆ ಪೋಸ್ಟ್ ಹಾಕಿದ್ದರು. ಇದೀಗ ಸಿಂಧು ವಿವಾಹ ನಿಶ್ಚಯವಾಗಿದ್ದು, ವೆಂಕಟದತ್ತ ಸಾಯಿ ಅವರನ್ನು ಸಿಂಧು ವಿವಾಹವಾಗಲಿದ್ದಾರೆ.

- Advertisement -

Latest Posts

Don't Miss