Sports News: ಇವತ್ತು ನಡೆಯಬೇಕಿದ್ದ ಸ್ಮೃತಿ ಮಂದನ ಮದುವೆ ಮುಂದೂಡಿಕೆಯಾಗಿದೆ. ಸ್ಮೃತಿ ಅವರ ತಂದೆಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕಾರಣಕ್ಕೆ ಸ್ಮೃತಿ ಅವರ ಮದುವೆ ಮುಂದೂಡಲಾಗಿದೆ.
ಸ್ಮೃತಿ ಅವರು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರನ್ನು ಇಂದು ವಿವಾಹವಾಗಬೇಕಿತ್ತು. ಅವರ ಹಳದಿ ಸೆರೆಮನಿ, ಸಂಗೀತ್ ಸೆರೆಮನಿ, ಬ್ಯಾಚುಲರ್ಸ್ ಪಾರ್ಟಿ ಎಲ್ಲವೂ ಮುಗಿದಿತ್ತು. ಆದರೆ ಇಂದು ಮದುವೆ 1 ನಡೆಯುವುದು ಬಾಕಿ ಇತ್ತು. ಮಹಾರಾಷ್ಟ್ರದ ಸಾಂಗ್ಲಿಯ ತಮ್ಮ ಫಾರ್ಮ್‌ಹೌಸ್‌ನಲ್ಲೇ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಗೆ ಕೆಲ ಸಮಯ ಬಾಕಿ ಇರುವಾಗಲೇ, ಸ್ಮೃತಿ ತಂದೆ ಶ್ರೀನಿವಾಸ್ ಅವರಿಗೆ ಹೃದಯಾಘಾತ ಸಂಭವಿಸಿದೆ.
ನಿಶ್ಚಿಯಿಸಿದ ಸಮಯದಲ್ಲೇ ಮದುವೆಯಾಗಲು ಸ್ಮೃತಿ ಮನೆಯವರು ಒತ್ತಾಯಿಸಿದರು ಕೂಡ ಸ್ಮೃತಿ ಮದುವೆ ನಿರಾಕರಿಸಿದ್ದಾರೆ. ಅಲ್ಲದೇ ಅಪ್ಪನ ಸ್ಥಿತಿ ಹೀಗಿರುವಾಗ ಮದುವೆಯಾಗಲು ಮನಸ್ಸು ಒಪ್ಪುತ್ತಿಲ್ಲವೆಂದು ಹೇಳಿದ್ದಾರೆ. ಹಾಗಾಗಿ ಪಲಾಶ್ ಕೂಡ ಮದುವೆ ಮುಂದೂಡಲು ಓಕೆ ಎಂದಿದ್ದಾರೆ.
ಹೀಗಾಗಿ ಕೆಲ ದಿನಗಳವರೆಗೆ ಮದುವೆ ಮುಂದೂಡಲಾಗಿದೆ. ಅಪ್ಪನ ಆರೋಗ್ಯ ಸುಧಾರಿಸಿದ ಬಳಿಕ ಮತ್ತೆ ಮದುವೆ ದಿನಾಂಕ ನಿಶ್ಚಯವಾಗುವ ಸಾಧ್ಯತೆ ಇದೆ.




