Sports News: ಕುಸ್ತಿಪಟು ಭಜರಂಗ್ ಪೂನಿಯಾಗೆ ಜೀವ ಬೆದರಿಕೆ: ಎಫ್‌ಐಆರ್ ದಾಖಲು

Sports News: ಕುಸ್ತಿಪಟುಗಳಾದ ಭಜರಂಗ್ ಪೂನಿಯಾ ಮತ್ತು ವಿನೀಶ್ ಫೋಗಟ್ ಸರ್ಕಾರಿ ಕೆಲಸ ತೊರೆದು, ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಸೇರಿದ ಕೆಲ ದಿನಗಳಲ್ಲೇ ಭಜರಂಗ್ ಪೂನಿಯಾಗೆ ಜೀವ ಬೆದರಿಕೆ ಸಂದೇಶ ಬಂದಿದೆ.

ವಿದೇಶಿ ಸಂಖ್ಯೆಯಿಂದ ಬೆದರಿಕೆ ಸಂದೇಶ ಬಂದಿದೆ ಎಂದು ಭಜರಂಗ್ ಪೂನಿಯಾ ದೂರು ನೀಡಿದ್ದು, ಆದಷ್ಟು ಬೇಗ ಕಾಂಗ್ರೆಸ್ ತೊರೆಯಬೇಕು. ಇಲ್ಲದಿದ್ದಲ್ಲಿ, ನಿಮಗೂ ನಿಮ್ಮ ಕುಟುಂಬಕ್ಕೂ ಕಂಟಕ ಕಾದಿದೆ. ಇದು ನಮ್ಮ ಕೊನೆಯ ಸಂದೇಶ. ಕಾಂಗ್ರೆಸ್ ತೊರೆಯದಿದ್ದಲ್ಲಿ ಚುನಾವಣೆಗೂ ಮುನ್ನ ನಾವೇನು ಎಂಬುದನ್ನು ತೋರಿಸುತ್ತೇವೆ. ಎಲ್ಲಿ ಬೇಕಾದ್ರೂ ದೂರು ನೀಡಿ. ಇದು ನಮ್ಮ ಫಸ್ಟ್ ಮತ್ತು ಲಾಸ್ಟ್ ವಾರ್ನಿಂಗ್ ಎಂದು ಬೆದರಿಕೆ ಹಾಕಲಾಗಿದೆ.

ಈ ಬಳಿಕ ಸೋನಿಪತ್ ಬಹಲ್ಘಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೇ ಈಗಾಗಲೇ ಅದು ಯಾರ ನಂಬರ್..? ಆ ಅನಾಮಿಕ ವ್ಯಕ್ತಿ ಯಾರು ಎಂಬ ಬಗ್ಗೆ ತನಿಖೆ ಶುರು ಮಾಡಲಾಗಿದೆ ಎಂದು ಹೇಳಿದ್ದಾರೆ.

About The Author