Friday, December 6, 2024

Latest Posts

Sports News: ಲಿಂಗ ಬದಲಿಸಿಕೊಂಡ ಟೀಂ ಇಂಡಿಯಾ ಕ್ರಿಕೇಟಿಗನ ಪುತ್ರ

- Advertisement -

Sports News: ಭಾರತೀಯ ಕ್ರಿಕೇಟ್‌ ತಂಡದಲ್ಲಿ ಗುರುತಿಸಿಕೊಂಡಿದ್ದ ಸಂಜಯ್ ಬಂಗಾರ ಅವರ ಪುತ್ರ ಆರ್ಯನ್ ಬಂಗಾರ್ ಇದೀಗ ಹುಡುಗಿಯಾಗಿ ಲಿಂಗ ಬದಲಾವಣೆ ಮಾಡಿಕೊಂಡಿದ್ದು, ಅನಾಯಾ ಆಗಿ ಹೆಸರು ಬಂದಲಿಸಿಕೊಂಡಿದ್ದಾರೆ.

ಆರ್ಯನ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು, ತಾನು ಕೂಡ ಅಪ್ಪನಂತೆ ಪ್ರಸಿದ್ಧ ಕ್ರಿಕೇಟಿಗನಾಗಬೇಕು ಎಂದು ಕನಸು ಕಂಡಿದ್ದರು. ಆದರೆ, ಇದೀಗ ಹಾರ್ಮೋನು ಬದಲಾವಣೆ ಮಾಡಿಕೊಂಡು ಹುಡುಗಿಯಾಗಿದ್ದು, ಇದಕ್ಕಾಗಿ ನನ್ನ ಕ್ರಿಕೇಟ್ ಕನಸನ್ನು ನಾನು ತ್ಯಾಗ ಮಾಡಿದ್ದೇನೆ ಎಂದು ಅನಾಯಾ ಹೇಳಿದ್ದಾರೆ.

ಅನಾಯಾ ಕಳೆದ ಒಂದು ವರ್ಷದಿಂದ ದೇಹದಲ್ಲಿ ಹಾರ್ಮೋನ್ ಬದಲಾವಣೆ ಮಾಡಿಕೊಳ್ಳುವ ಚಿಕಿತ್ಸೆ ಪಡೆಯುತ್ತಿದ್ದರಂತೆ. ಇದೀಗ ಪೂರ್ತಿ ಬದಲಾವಣೆಯಾಗಿ, ಹೆಣ್ಣಾಗಿ ಮಾರ್ಪಟ್ಟಿದ್ದಾರೆ. ನನ್ನ ಈ ನಿರ್ಧಾರದಿಂದ ನನಗೆ ಖುಷಿ, ತೃಪ್ತಿ ಇದೆ ಎಂದು ಅನಾಯಾ ಹೇಳಿದ್ದಾರೆ. ಸದ್ಯ ಅನಾಯಾ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ.

- Advertisement -

Latest Posts

Don't Miss