Hubballi News: ಅಯೋಧ್ಯೆಯ ಅಲಂಕಾರಕ್ಕೆ ಹುಬ್ಬಳ್ಳಿ ಕಲಾವಿದರು ಅಳಿಲು ಸೇವೆ ಒದಗಿಸಿದ್ದು, ಅಯೋಧ್ಯೆ ರೈಲ್ವೆ ನಿಲ್ದಾಣದಲ್ಲಿ ಹುಬ್ಬಳ್ಳಿ ಕಲಾವಿದರ ಕಮಾಲ್ ಆಗಿದೆ. ಶ್ರೀರಾಮನಿಗೆ ಸಮುದ್ರದ ಮೇಲೆ ಸೇತುವೆ ಕಟ್ಟಲು ಅಳಿಲು ತನ್ನ ಕೈಲಾದ ಸೇವೆ ಮಾಡಿತ್ತು. ಅದೇ ಅಳಿಲಿನ ಬೃಹದಾಕಾರದ ಕಲಾಕೃತಿಯನ್ನು ಅಯೋಧ್ಯೆ ಧಾಮ ಜಂಕ್ಷನ್ನಲ್ಲಿ ನಿರ್ಮಾಣ ಮಾಡಲಾಗಿದೆ.
ಹುಬ್ಬಳ್ಳಿಯ ಆರ್ಟ್ವಾಲೇ ಸಂಸ್ಥೆಯಿಂದ ಅಯೋಧ್ಯೆ ರೈಲ್ವೆ ನಿಲ್ದಾಣದಲ್ಲಿ ಒಟ್ಟು 5 ಸುಂದರ ಕಲಾಕೃತಿ ನಿರ್ಮಾಣ ಮಾಡಲಾಗಿದೆ. ಒಟ್ಟು 20 ಸಿಬ್ಬಂದಿ ಕೇವಲ 35 ದಿನಗಳಲ್ಲಿ ಕಲಾಕೃತಿ ಸಿದ್ಧಪಡಿಸಿದ್ದಾರೆ. ಜಂಕ್ಷನ್ನ ಮುಖ್ಯ ದ್ವಾರದ ಬಳಿಯ ಎ-3 ಪ್ಯಾಸೇಜ್ನಲ್ಲಿ ಕ್ವಾರ್ಟನ್ ಸ್ಟೀಲ್ ನಲ್ಲಿ ಕಲಾಕೃತಿ ನಿರ್ಮಾಣ, 19.5 ಅಡಿ ಎತ್ತರದ, 2.5 ಟನ್ ತೂಕದ ಅಳಿಲು ಕಲಾಕೃತಿ,ರೈಲ್ವೆ ಜಂಕ್ಷನ್ನಲ್ಲಿ 40 ಅಡಿ ಎತ್ತರದ ಅಯೋಧ್ಯೆ ರಾಮ ಮಂದಿರ ಕಲಾಕೃತಿ, 8.5 ಅಡಿ ಎತ್ತರದ ಅಯೋಧ್ಯೆ ಹಾಗೂ 9 ಅಡಿ ಎತ್ತರದ ನಾಮಫಲಕ ಅಳವಡಿಕೆ.40 ಅಡಿ ಎತ್ತರದ ಸರಾಯು ನದಿ ಘಾಟ್ ಕಲಾಕೃತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಕಲಾಕೃತಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಸದ್ಯ ಹುಬ್ಬಳ್ಳಿಗೆ ವಾಪಸ್ಸಾಗಿರೋ ತಂಡ ಮಾದ್ಯಮದ ಬಳಿ ತಮ್ಮ ಸಂತಸ ಹಂಚಿಕೊಂಡಿದೆ..
ಸಂಗಮೇಶ್ ಸೆಟ್ಟಿಗೇರಿ, ಕರ್ನಾಟಕ ಟಿವ, ಹುಬ್ಬಳ್ಳಿ
ಕಾಂಗ್ರೆಸ್‌ನ ಚಿಲ್ಲರೆತನಕ್ಕೆ, ಬಾಲಿಶತನಕ್ಕೆ ಒಂದು ಮಿತಿ ಇರಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ ಕಲ್ಲನ್ನು ಪರೀಕ್ಷಿಸಿ ಅಂತಿಮಗೊಳಿಸಿದ್ದು ಕೋಲಾರದ ವಿಜ್ಞಾನಿ