National News: ಅಯೋಧ್ಯೆಯಲ್ಲಿ ಶ್ರೀರಾಮ ಮಾಂಸ ಸೇವಿಸುತ್ತಿದ್ದ, ಬೇಟೆಯಾಡುತ್ತಿದ್ದವ ನಮ್ಮ ರಾಮ ಎಂದು, ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿ ನಾಯಕ, ಜೀತೇಂದ್ರ ಅವ್ಹಾದ್ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ, ರಾಮಜನ್ಮಭೂಮಿಯ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್, ರಾಮ ಮಾಂಸಾಹಾರಿಯಾಗಿರಲಿಲ್ಲ. ಅವರು ವನವಾಸದಲ್ಲಿ ಹಣ್ಣು ಹಂಪಲು ತಿಂದಿದ್ದರು ಎಂದಿದ್ದಾರೆ.
ರಾಮ ವನವಾಸದಲ್ಲಿ ಮಾಂಸಾಹಾರ ಸೇವಿಸಿದ್ದಾನೆಂದು ಯಾವ ಗ್ರಂಥದಲ್ಲಿಯೂ ಉಲ್ಲೇಖಿಸಲಿಲ್ಲ. ಆದರೆ ವನವಾಸದಲ್ಲಿ ರಾಮ, ಹಣ್ಣು ಹಂಪಲು ಸೇವಿಸುತ್ತಿದ್ದ ಎಂದಿದ್ದಾರೆ. ಹಾಗಾಗಿ ರಾಮ ಮಾಂಸಾಹಾರಿಯಲ್ಲ. ನಮ್ಮ ರಾಮನ ಹೆಸರು ಹಾಳು ಮಾಡಲು, ಅವರು ಹೀಗೆ ಹೇಳಿದ್ದಾರೆ ಎಂದಿದ್ದಾರೆ.
ಎಸಿಪಿ ನಾಯಕ, ಜೀತೇಂದ್ರ, ರಾಮ ನಮ್ಮವ. ನಮ್ಮ ಜನಾಂಗಕ್ಕೆ ಸೇರಿದವ. ನಾವು ಬಹುಜನರು. ಬೇಟೆಯಾಡುವವರು. ರಾಮ ಕೂಡ ಬೇಟೆಯಾಡಿ, ಮಾಂಸಾಹಾರ ಸೇವಿಸುತ್ತಿದ್ದ ಎಂದು ಹೇಳಿದ್ದರು. ಈ ಬಗ್ಗೆ ಹಲವು ಅರ್ಚಕರು, ಹಿಂದೂ ಸಂಘಟನೆಯವರು ಆಕ್ರೋಶ ಹೊರಹಾಕಿದ್ದಾರೆ.
ಗೋಧ್ರಾ ವಿವಾದಾತ್ಮಕ ಹೇಳಿಕೆ: ಹರಿಪ್ರಸಾದರನ್ನು ಬಂಧಿಸಿ ಎಂದ ಪ್ರಮೋದ್ ಮುತಾಲಿಕ್
ಹಿಂದೂ ರಾಷ್ಟ್ರ ಮಾಡೇ ಮಾಡ್ತೀವಿ ಗಂಡಸ್ತನ ಇದ್ರೆ ತಡಿರಿ: ಕಾಂಗ್ರೆಸ್‌ಗೆ ಮುತಾಲಿಕ್ ಸವಾಲ್
ಜೋಶಿ ಬದಲು ಶ್ರೀಕಾಂತ್ ಗೆ ಟಿಕೆಟ್ ಕೊಡಿ ಅಭಿಯಾನ ಆರಂಭಿಸಿದ ಕಾಂಗ್ರೆಸ್..!