Monday, October 2, 2023

Latest Posts

‘ಜನ ಶಿವಕುಮಾರ್ ಎಲ್ಲಿದ್ದೀಯಪ್ಪಾ ಅಂತಿದ್ದಾರೆ- ಬಳ್ಳಾರಿ ಅಭಿವೃದ್ಧಿಗೆ ಶ್ರಮಸಿ ಅಣ್ಣ’- ಡಿಕೆಶಿ ಕಿವಿ ಹಿಂಡಿದ ರಾಮುಲು

- Advertisement -

ಬೆಂಗಳೂರು: ಸಚಿವ ಡಿ.ಕೆ ಶಿವಕುಮಾರ್ ಶಕುನಿ ಇದ್ದ ಹಾಗೆ ಅಂತ ಟೀಕಿಸಿದ್ದ ಶ್ರೀರಾಮುಲು ಇದೀಗ ಮತ್ತೆ ಟ್ವಟ್ಟರ್ ನಲ್ಲಿ ಕಿಡಿ ಕಾರಿದ್ದಾರೆ.

ಸಚಿವ ಡಿ.ಕೆ ಶಿವಕುಮಾರ್ ಚುನಾವಣೆಯಲ್ಲಿ ಸೋತು ಬಳ್ಳಾರಿಗೆ ಬರೋದಕ್ಕೆ ಹಿಂದೂ ಮುಂದೂ ನೋಡ್ತಿದ್ದಾರೆ. ಇದರಿಂದ ಬಳ್ಳಾರಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಗಳಾಗ್ತಿಲ್ಲ ಅಂತ ಆರೋಪಿಸಿದ್ದ ಶ್ರೀರಾಮುಲು ಇದೀಗ ಟ್ವೀಟ್ ಮಾಡೋ ಮೂಲಕ ಸಚಿವ ಡಿ.ಕೆ ಶಿವಕುಮಾರ್ ಕಿವಿ ಹಿಂಡಿದ್ದಾರೆ. ‘ಶಿವಕುಮಾರ್ ಅಣ್ಣನವರೇ, ನಾನು ಬಳ್ಳಾರಿಯ ಮಣ್ಣಿನ ಮಗ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಹೋಗುವ ನಿಮ್ಮನ್ನು ಜನ ಶಿವಕುಮಾರ್ ಎಲ್ಲಿದ್ದೀಯಪ್ಪ ಎನ್ನುತ್ತಿದ್ದಾರೆ. ಬಳ್ಳಾರಿಯ ಜನ ವಲಸೆ ಬಂದವರಿಗೆ ತಮ್ಮ ಸ್ವಾಭಿಮಾನದಿಂದ ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಿಸಿದ್ದಾರೆ’ ಅಂತ ಲೇವಡಿ ಮಾಡಿದ್ದಾರೆ

ಇನ್ನು ‘ರಾಜ್ಯ ಕಾಂಗ್ರೆಸ್ ಅನ್ನು ಕುಮಾರಸ್ವಾಮಿಯವರ ಮೇಲಿನ ನಿಮ್ಮ ಕುರುಡು ಪ್ರೇಮಕ್ಕಾಗಿ ಒಂದಂಕಿಗೆ ಇಳಿಸಿದ ಕೀರ್ತಿ ನಿಮಗೇ ಸಲ್ಲಬೇಕು. ಬಳ್ಳಾರಿಯ ಜನರ ಪ್ರೀತಿಯ ಬಗ್ಗೆ ಮಾತನಾಡುವ ನೀವು ಬಳ್ಳಾರಿಯ ಮಂತ್ರಿಗಳಿಗೆ ಯಾರಿಗಾದರೂ ಬಳ್ಳಾರಿಯ ಉಸ್ತುವಾರಿ ಸಚಿವರನ್ನಾಗಿ ಮಾಡಿ’ ಅಂತ ರಾಮುಲು ಟಾಂಗ್ ನೀಡಿದ್ದಾರೆ. ಹಾಗೆ, ಶುಭಮಹೂರ್ತ, ಶುಭ ಘಳಿಗೆಯಲ್ಲಾದರೂ ಇನ್ನು ಮುಂದೆ ಕೇವಲ ಚುನಾವಣಾ ಸಚಿವರಾಗದೆ ಬಳ್ಳಾರಿ ಅಭಿವೃದ್ಧಿಗೆ ಶ್ರಮಿಸಿ ಎಂದು ನಿಮ್ಮಲ್ಲಿ ಕಳಕಳಿಯ ಮನವಿಯನ್ನು ಮಾಡುತ್ತೇನೆ ಅಣ್ಣ ಅಂತ ಹೇಳೋ ಮೂಲಕ ಸಚಿವ ಡಿಕೆಶಿಯವರಿಗೆ ರಾಮುಲು ಟಾಂಗ್ ನೀಡಿದ್ದಾರೆ.

ದೊಡ್ಡಗೌಡರ ಆ ಮಾತಿಗೆ ಸಿದ್ದರಾಮಯ್ಯ ಏನಂದ್ರು ಗೊತ್ತಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=w4OLypfQ6FA
- Advertisement -

Latest Posts

Don't Miss