Political News:
ಚುನಾವಣೆ ಕದನ ರಾಜ್ಯದಲ್ಲಿ ನಿರಂತರವಾಗಗಿದೆ.ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವ ವಿಚಾರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿಕೆಯೊಂದನ್ನು ನೀಡಿದ್ದಾರೆ. ಮಾಜಿ ಸಿಎಂ ಸಿದ್ಧರಾಮಯ್ಯ ಕೋಲಾರದಲ್ಲಿ ನಿಲ್ಲಲ.ಕೊನೆ ಕ್ಷಣದಲ್ಲಿ ಹೈಕಮಾಂಡ್ ಮೇಲೆ ಹಾಕಿ ಬೇರೆ ಕ್ಷೇತ್ರದಲ್ಲಿ ನಿಲ್ಲುತ್ತಾರೆ. ಸಿದ್ದರಾಮಯ್ಯ ಅವರನ್ನು ಬಲಿಕೊಡಲು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಕೆಲವರ ಬಲವಂತದಿಂದ ಬಂದು ನಿಲ್ಲುತ್ತಿದ್ದಾರೆ. ಅಲ್ಪಸಂಖ್ಯಾತ ಮುಖಂಡ ಸಿಎಂ ಇಬ್ರಾಹಿಂ ಅವರನ್ನು ಕಡೆಗಣಿಸಿದ ಅವರಿಗೆ ಮುಸಲ್ಮಾನರು ಪಾಠ ಕಲಿಸ್ತಾರೆ. ಅಹಿಂದ ನಾಯಕ ಸಿದ್ದರಾಮಯ್ಯಗೆ ಅ ತೆಗೆದು ಹಿಂದ ಮಾಡಿದ್ದಾರೆ. ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿದವರು ಇವತ್ತು ಕಾಂಗ್ರೆಸ್ಗೆ ಮತ ಕೇಳುತ್ತಿದ್ದಾರೆ. ಎಂಎಲ್‌ಸಿಚುನಾವಣೆಯಲ್ಲಿ ಕಾಂಗ್ರೆಸ್ ಅವರು ಹಣ ಪಡೆದು ಶ್ರೀನಿವಾಸಗೌಡರಿಂದ ಬಿಜೆಪಿಗೆ ಮತ ಹಾಕಿಸಿದರು ಎಂದು ಕಿಡಿಕಾರಿದ್ದಾರೆ.
“ಕಾಂಗ್ರೆಸ್ ನ ಪ್ರಣಾಳಿಕೆ ಕೇವಲ ಘೋಷಣೆಯಾಗಿ ಮಾತ್ರ ಉಳಿಯುತ್ತೆ”: ಡಾ.ಕೆ ಸುಧಾಕರ್
ಸಾರ್ವಜನಿಕ ಜೀವನದಲ್ಲಿ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು : ಶಾಸಕ ಪ್ರೀತಂಗೌಡ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಹೆಚ್ಚಳ : ಸಿದ್ದರಾಮಯ್ಯ