Monday, December 11, 2023

Latest Posts

ಬೈ ಎಲೆಕ್ಷನ್ ಸೋತ್ರೆ ಮೈತ್ರಿ ಸರ್ಕಾರ ಗುಡ್ ಬೈ..?- ಕಾಂಗ್ರೆಸ್ ನಾಯಕರಿಗೇ ಬಂದಿದೆ ಡೌಟು..!

- Advertisement -

ಕಲಬುರಗಿ: ಮೇ 23 ರ ನಂತರ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರಲ್ವಾ? ಇಂಥಾದ್ದೊಂದು ಡೌಟ್ ಖುದ್ದು ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ. ಯೆಸ್, ಇದೀಗ ರಾಜ್ಯದಲ್ಲಿ ಆಡಳಿತದಲ್ಲಿರೋ ದೋಸ್ತಿ ಸರ್ಕಾರ ಇನ್ನೂ ಹೆಚ್ಚು ಕಾಲ ಇರ್ಬೇಕು ಅಂದ್ರೆ ಉಪ ಚುನಾವಣೆಯಲ್ಲಿ ಎರಡೂ ಸ್ಥಾನವನ್ನೂ ಗೆಲ್ಲಬೇಕು. ಇಲ್ಲದಿದ್ರೆ ಮೈತ್ರಿ ಸರ್ಕಾರ ಪತವಾಗುತ್ತೆ ಅಂತ ಸ್ವತಃ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಜನರ ಮುಂದೆ ತಮ್ಮ ಡೌಟನ್ನ ಹೊರಹಾಕಿದ್ದಾರೆ. ಕಲಬುರಗಿಯ ಚಂದನಕೇರಾದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಖಂಡ್ರೆ ಈ ಮಾತನ್ನ ಹೇಳಿದ್ದಾರೆ.

 ಈ ನಿಟ್ಟಿನಲ್ಲಿ ಮೇ 19ರಂದು ಚಿಂಚೋಳಿ ಮತ್ತು ಕುಂದಗೋಳದಲ್ಲಿ ನಡೆಯಲಿರೋ ಉಪ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಬೆಂಬಲಿತ ಅಭ್ಯರ್ಥಿಗಳ ಸೋಲು-ಗೆಲುವು ಇದೀಗ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

- Advertisement -

Latest Posts

Don't Miss